ಗದಗ: ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದೆ. ವಿಜಯಪುರದಿಂದ ಆರಂಭವಾದ ವಿವಾದ ರಾಜ್ಯಾದ್ಯಂತ ಹಬ್ಬಿಕೊಂಡಿದೆ. ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು.
ಇದೀಗ ಈ ವಕ್ಫ್ ಬೋರ್ಡ್ನಿಂದಾಗಿ ಐತಿಹಾಸಿಕ ದೇವಾಲಯಕ್ಕೂಕಂಟಕ ಎದುರಾಗಿದೆ. ಸದ್ಯ ಈ ಸುದ್ದಿ ತಿಳಿದು ಭಕ್ತರು ಆಕ್ರೋಶಗೊಂಡಿದ್ದಾರೆ. 15 ನೇ ಶತಮಾನದ ಚಾಮರಸರು ಪ್ರಭುಲಿಂಗಲೀಲೆ ಬರೆದಿದ್ದ ದೇವಸ್ಥಾನದ ಮೇಲೆಯೇ ವಕ್ಫ್ ವಕ್ರದೃಷ್ಟಿ
ನಡುಗನ್ನಡದ ಪ್ರಮುಖ ಕವಿ ಚಾಮರಸರಿಗೆ ಪ್ರೇರಣೆ ನೀಡಿದ್ದ ಸೋಮೇಶ್ವರ ದೇವಸ್ಥಾನಕ್ಕೂ ಇದೀಗ ವಕ್ಫ್ ಕಂಟಕ ಎದುರಾಗಿದೆ. 15 ನೇ ಶತಮಾನದ ಚಾಮರಸರು ಪ್ರಭುಲಿಂಗಲೀಲೆ ಬರೆದಿದ್ದ ದೇವಸ್ಥಾನದ ಮೇಲೆಯೇ ವಕ್ಫ್ ವಕ್ರದೃಷ್ಟಿ ಬೀರಿರುವುದು ದುರಂತವೇ ಸರಿ ಎನ್ನುತ್ತಿದ್ದಾರೆ ಭಕ್ತರು.. ಹೌದು, ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಸೋಮೇಶ್ವರ ದೇವಸ್ಥಾನದ ಜಮೀನು ಇದೀಗ ವಕ್ಫ್ ಆಸ್ತಿಯಾಗಿ ನಮೂದಾಗಿದೆ. ಸರ್ವೇ ನಂಬರ್ 562ರ 12 ಎಕರೆ 22 ಗುಂಟೆ ಜಾಗ 1974 ರಲ್ಲೇ ಗೆಜೆಟ್ ನೋಟಿಫಿಕೇಷನ್ ಮಾಡಲಾಗಿದೆ. ಕಣ್ಮುಚ್ಚಿ ಕೂತ ಅಧಿಕಾರಿಗಳು!
ಆಸ್ತಿ ಪಹಣಿಯಲ್ಲಿ ಸೋಮೇಶ್ವರ ದೇವಸ್ಥಾನದ ಹೆಸರು, ಕಚೇರಿ ಗೆಜೆಟ್ ಕಾಪಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಗೆಜೆಟ್ ನೋಟಿಪಿಕೇಷನ್ ನೋಡಿದ ಭಕ್ತರ ಆತಂಕಕ್ಕೀಡಾಗಿದ್ದಾರೆ. ತಹಶೀಲ್ದಾರ್ ಆಡಳಿತದಲ್ಲಿರುವ ಈ ದೇವಸ್ಥಾನದ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ. ಆರನೇ ವಿಕ್ರಮಾದಿತ್ಯ ನಿರ್ಮಿಸಿದ್ದ ದೇವಸ್ಥಾನ
ಈ ದೇವಸ್ಥಾನವನ್ನು ಆರನೇ ವಿಕ್ರಮಾದಿತ್ಯ ನಿರ್ಮಿಸಿದ್ದಾನೆ. ಇಲ್ಲಿ ಸಂಸ್ಕೃತ ಪಾಠಶಾಲೆ ನಡೆಸಲಾಗುತ್ತಿತ್ತು, ಆದರೆ ಇದೀಗ ಈ ದೇವಸ್ಥಾನ ವಕ್ಫ್ ಪಾಲಾಗಿದೆ. ಆಗ ಅಂದಾಜು 150 ಎಕರೆ ಜಾಗೆ ದಾನದ ರೂಪದಲ್ಲಿ ದೇವಸ್ಥಾನಕ್ಕೆ ಬಂದಿತ್ತು. ಆದ್ರೀಗ ದೇವಸ್ಥಾನಕ್ಕೆ ಸಂಬಂಧಿಸಿದ 12 ಎಕರೆ 22 ಗುಂಟೆ ಜಾಗೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡಲಾಗಿದೆ. ಇದರಿಂದ ಭಕ್ತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಮಠ, ದೇವಸ್ಥಾನ ಜಾಗೆಯಲ್ಲಾ ವಕ್ಫ್ ಆಸ್ತಿಗೆ ಹೋದ್ರೆ ಏನ್ ಮಾಡೋಣ? ವಕ್ಫ್ ಕಾಯ್ದೆ ಬದಲಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಆಂಜನೇಯನಿಗೂ ತಟ್ಟಿದ ವಕ್ಫ್ ನೋಟಿಸ್ ಬಿಸಿ
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಗೇಟ್ನಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೂ ವಕ್ಫ್ ಬಿಸಿ ತಟ್ಟಿದೆ. ಇದರಿಂದಾಗಿ ಆಂಜನೇಯ ಸ್ವಾಮಿ ದೇವಾಲಯದ ಜಾಗವನ್ನು ಖಬರಸ್ತಾನ್ ಎಂದು ಹೆಸಡಿಸಲ್ಪಟ್ಟಿದೆ. ಪುರಾತನ ಕಾಲದಿಂದಲೂ ಗುಟ್ಟಾಂಜನೇಯ ಸ್ವಾಮಿ ದೇವಾಲಯ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದ ಈ ದೇವಾಲಯವನ್ನು 2018-19 ರಲ್ಲಿ ಖಬರಸ್ತಾನ್ ಆಗಿ ಪಹಣಿ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಬೆಳ್ಳೂಟಿ ಗ್ರಾಮದ ಸರ್ವೆ ನಂಬರ್ 6ರಲ್ಲಿರುವ 1.30 ಗುಂಟೆ ಜಾಗದಲ್ಲಿರುವ ದೇವಾಲಯ ಇದಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಗ್ರಾಮಸ್ಥರಿಂದ ತೀವ್ರ ಆಕ್ರೋಶ!
ದೇವಾಲಯದ ಆಸ್ತಿ ದೇವಾಲಯಕ್ಕೆ ನೀಡುವಂತೆ ಗ್ರಾಮಸ್ಥರ ಪಟ್ಟು ಹಿಡಿದು ನಿಂತಿದ್ದಾರೆ. ಈ ಹಿನ್ನೆಲೆ ಸರ್ಕಾರದ ವಿರುದ್ದ ಸ್ಥಳೀಯ ಗ್ರಾಮಸ್ಥರು ಮತ್ತು ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.