ಗರ್ಭಾವಸ್ಥೆಯಲ್ಲಿ ಆಗುವ ಚರ್ಮದ ಸಮಸ್ಯೆಗಳು ಏನು.?

ಗರ್ಭಾವಸ್ಥೆಯಲ್ಲಿ ಆಗುವ ಚರ್ಮದ ಸಮಸ್ಯೆಗಳು ಏನು.?
ಡಾ.ಕೆ.ಜಿ.ಲಿಖಿತಾ

ಡಾ.ಕೆ.ಜಿ.ಲಿಖಿತಾ

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದ ಒಳಗೆ ಹಾಗೂ ಹೊರಗೆ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಈ ರೂಪಾಂತರಗಳು ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವನ್ನು ಬೆಂಬಲಿಸಲು ಸಹಕಾರಿಯಾಗಿದೆ. ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರು ಒಣ ಚರ್ಮದ ಸಮಸ್ಯೆಯಿಂದ ಬಳಲುತ್ತಾರೆ. ಇದು ಫ್ಲಾಕಿ ಚರ್ಮ, ಚರ್ಮದಲ್ಲಿ ತುರಿಕೆ ಮತ್ತು ಇತರ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಹಾಗಾಗಿ ಗರ್ಭಿಣಿಯರು ತಮ್ಮ ಚರ್ಮದ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಗರ್ಭಾವಸ್ಥೆಯಲ್ಲಿ ಶುಷ್ಕ ಚರ್ಮದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಣಾಮಕಾರಿ ಚಿಕಿತ್ಸೆ ಪಡೆಯುವುದು ತಾಯಂದಿರಿಗೆ ಸಹಾಯ ಮಾಡುತ್ತದೆ.

1. ಹಾರ್ಮೋನುಗಳ ಬದಲಾವಣೆಗಳು

ಗರ್ಭಾವಸ್ಥೆಯ ಹಾರ್ಮೋನುಗಳು, ವಿಶೇಷವಾಗಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್, ಗಮನಾರ್ಹವಾಗಿ ಏರಿಳಿತಗೊಳ್ಳುತ್ತವೆ. ಈ ಹಾರ್ಮೋನುಗಳ ಬದಲಾವಣೆಗಳು ಚರ್ಮದ ಜಲಸಂಚಯನದ ಮೇಲೆ ಪರಿಣಾಮ ಬೀರಬಹುದು.

2. ಒಣಚರ್ಮದ ಸಮಸ್ಯೆ

ಗರ್ಭಾವಸ್ಥೆಯಲ್ಲಿ ಒಣ ಚರ್ಮವು ತುರಿಕೆ, ತೇಪೆಗಳು, ಒರಟು ವಿನ್ಯಾಸ, ಕೆಂಪು ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಬಿರುಕುಗಳಿಗೂ ಕಾರಣವಾಗುತ್ತದೆ. ಅನೇಕ ಗರ್ಭಿಣಿಯರು ಚರ್ಮದ ಬದಲಾವಣೆಗಳಿಂದ ಬಳಲುತ್ತಾರೆ.

3. ಚರ್ಮದಲ್ಲಿ ಕಲೆ ಬೀಳುವಿಕೆ(ಹೈಪರ್ ಪಿಗ್ಮಂಟೇಷನ್)

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹದಲ್ಲಿ ಎಲ್ಲಿಯಾದರೂ ಚರ್ಮ ಕಪ್ಪಾಗಿ ಕಾಣಿಸಿಕೊಳ್ಳಬಹುದು, ಇದು ತೋಳುಗಳು ಮತ್ತು ಸ್ತನಗಳ ಅಡಿಯಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಅವುಗಳನ್ನು ತಡೆಯಲು ಸಾಧ್ಯವಿಲ್ಲ, ಗರ್ಭಾವಸ್ಥೆಯ ನಂತರ ಮೂರು-ನಾಲ್ಕುತಿಂಗಳ ಅವಧಿಯಲ್ಲಿ ಸ್ವಾಭಾವಿಕವಾಗಿ ಮರೆಯಾಗುತ್ತದೆ.

4. ಹಿಗ್ಗಿರುವ ಚರ್ಮ(ಸ್ಟ್ರೆಚಿಂಗ್ ಸ್ಕಿನ್)

ಹೊಟ್ಟೆ ಮತ್ತು ದೇಹದ ಇತರ ಭಾಗಗಳು ವಿಸ್ತರಿಸಿದಾಗ, ಚರ್ಮವು ವಿಸ್ತರಿಸುತ್ತದೆ, ಇದು ಅದರ ನೈಸರ್ಗಿಕ ತೇವಾಂಶ ತಡೆಗೋಡೆ ಅಡ್ಡಿಪಡಿಸುತ್ತದೆ ಮತ್ತು ಶುಷ್ಕತೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಇದು ಕಾಲಕ್ರಮೇಣ ಕಡಿಮೆಯಾಗುತ್ತದೆ. ಆದರೆ ಈ ಸಮಯದಲ್ಲಿ ನಾವು ಹೆಚ್ಚಿನ ದ್ರವಾಹರ ಸೇವನೆ ಮೂಲಕ ದೇಹದ ತೇವಾಂಶ ಸೂಕ್ತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ವೈದ್ಯರ ಸಲಹೆಗೆ ಅನುಗುಣವಾಗಿ ಸ್ಕಿನ್ ಕ್ರೀಂಗಳನ್ನ ಬಳಸಬಹುದು. ಇದರಿಂದ ಸ್ಟ್ರೆಚಿಂಗ್ ಸ್ಕಿನ್ ಕಡಿಮೆಯಾಗುತ್ತದೆ.

5. ಎಣ್ಣೆಯುಕ್ತ ಚರ್ಮ(ಆಯಿಲ್ ಸ್ಕಿನ್)

ಗರ್ಭಾವಸ್ಥೆಯಲ್ಲಿ ಮತ್ತೊಂದು ಸಾಮಾನ್ಯ ಚರ್ಮದ ಸಮಸ್ಯೆ ಎಣ್ಣೆಯುಕ್ತ ಚರ್ಮ(ಆಯಿಲ್ ಸ್ಕಿನ್) ಹಾಗೂ ಮುಖ,ಬೆನ್ನು ಹಾಗೂ ಎದೆಯ ಭಾಗದಲ್ಲಿ ಮೊಡವೆಗಳು ಉಂಟಾಗುತ್ತದೆ.  ಇದು ಪ್ರೊಜೆಸ್ಟರಾನ್ ಮತ್ತು ಆಂಡ್ರೊಜೆನ್ ಮಟ್ಟದಲ್ಲಿ ಹೆಚ್ಚಾದಾಗ ಉಂಟಾಗುತ್ತದೆ. ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆಯಿಲ್ ಸ್ಕಿನ್ ನ್ನು ತಪ್ಪಿಸಲು ನಿಮ್ಮ ಮುಖವನ್ನು ವೈದ್ಯರು ಸೂಚಿಸಿದ ಫೇಸ್‌ವಾಸ್ ಹಾಗೂ ಕ್ರೀಂ ಹಾಗೂ ಸೋಪುಗಳನ್ನ ನಿಯಮಿತ ಬಳಸಬಹುದು.

6.ತುರಿಕೆ: ಗರ್ಭಾವಸ್ಥೆಯಲ್ಲಿ ಅಂಗೈ,ಅAಗಾಲು ಮತ್ತು ದೇಹದ ಇತರ ಭಾಗದಲ್ಲಿ ತುರಿಕೆ ಉಂಟಾದಾಗ (ಲಿವರ್ ಅಥವಾ ಪಿತ್ತದ ಆರೋಗ್ಯಕ್ಕಾಗಿ) ರಕ್ತಪರೀಕ್ಷೆ ಮತ್ತು ಸ್ಕ್ಯಾನ್ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

7. ಪೌಷ್ಟಿಕ ಆಹಾರ ಸೇವನೆ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ನಿಯಮಿತವಾಗಿ ವಾಕ್ ಮಾಡುವುದು, ಹೆಚ್ಚು ನೀರು ಕುಡಿಯುವುದರಿಂದ, ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು, ವ್ಯಾಯಾಮ, ವಿಶ್ರಾಂತಿ ಮತ್ತು ಒತ್ತಡವನ್ನು ನಿರ್ವಹಿಸುವ ಮೂಲಕ ಗರ್ಭಾವಸ್ಥೆಯಲ್ಲಿ ಚರ್ಮದ ಸಮಸ್ಯೆಗಳನ್ನು ನಿಭಾಯಿಸಬಹುದು. ಇದರ ಜೊತೆಗೆ ನೈಸರ್ಗಿಕ ಉತ್ಪನ್ನಗಳು ಕೆಲವು ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಧಾರಣೆಗೂ ಮುಂಚಿನ ದಿನಗಳಲ್ಲಿ ಮಹಿಳೆಯರು ಅಲರ್ಜಿ, ಎಕ್ಸಿಮಾ, ಫಂಗಲ್ ಇನ್ಫೆಕ್ಷನ್‌ಗಳನ್ನು ಹೊಂದಿದ್ದರೆ ಇದು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಾಗಬಹುದು. ಈ ಸಮಯದಲ್ಲಿ ಸ್ವಯಂ ವೈದ್ಯ ಪದ್ದತಿಯನ್ನು ಅನುಸರಿಸದೆ ವೈದ್ಯರನ್ನ ಕಂಡು ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಸೆಲ್ಫ್ ಮೆಡಿಕೇಷನ್ ನವಜಾತ ಮಗುವಿಗೂ ಪರಿಣಾಮ ಬೀರಬಹುದು.
ಹೆರಿಗೆಯ ನಂತರ ಚರ್ಮದ ಕಾಳಜಿ :
ಹೆರಿಗೆಯ ನಂತರ ಅಲರ್ಜಿ ಹಾಗೂ ಹೆಚ್ಚಾಗಿ ತುರಿಕೆ ಕಂಡು ಬಂದಲ್ಲಿ ವೈದ್ಯ ಸಲಹೆ ಪಡೆದು ಸನ್ ಸ್‌ಕ್ರೀನ್ ಹಾಗೂ ಬೇಸಿಕ್ ಲೋಷನ್ ಹಾಕಬಹುದು. ಮುಖದಲ್ಲಿ ಮೊಡವೆ ಹಾಗೂ ದೇಹದಲ್ಲಿ ಬಂದಿರುವ ಮಾರ್ಕ್ಗಳನ್ನು ತೆಗೆಯಲು ಲೇಸರ್ ಟ್ರೀಟ್‌ಮೆಂಟ್ ಸಹ ಇರುತ್ತದೆ. ಮೇಕಪ್, ಕೆಮಿಕಲ್ ಬೇಡ. ಕಾಲು ಹಾಗೂ ತೊಡೆಯ ಭಾಗದಲ್ಲಿ ಹಸಿರಾಗಿ ಕಾಣುವುದು ಅದನ್ನು ವೇರಿಕೋಸ್ ವೇನ್ ಎಂದು ಕರೆಯುತ್ತಾರೆ. ಕೆಲವರಿಗೆ ಆ ಭಾಗದಲ್ಲಿ ತುಂಬಾ ನೋವು ಇರುತ್ತದೆ. ಅದಕ್ಕೆ ವೈದ್ಯ ಬಳಿ ಸಲಹೆ ಪಡೆದು ಸ್ಟಾಕಿಂಗ್ಸ್ ತೆಗೆದುಕೊಳ್ಳಿ ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಡಾ.ಕೆ.ಜಿ.ಲಿಖಿತಾ
ಅದಿತಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ

Leave a Reply

Your email address will not be published. Required fields are marked *