ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ನೋಡಿರುವ ಕನ್ನಡಿಗರು ಪವಿತ್ರ ಸ್ಥಳಕ್ಕೆ ಮಸಿ ಬಳಿಯಲು ನಡೆದ ಪ್ರಯತ್ನದಿಂದ ಬೇಸರಗೊಂಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸಹ ನೊಂದಿದ್ದಾರೆ. ಹಾಗಾಗೇ, ಧರ್ಮಸ್ಥಳದ ಜೊತೆ ತಮ್ಮ ಸಮಗ್ರತೆಯನ್ನು ಪ್ರದರ್ಶಿಸಲು ಬೇರೆ ಬೇರೆ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಅಲ್ಲಿಗೆ ಜಾಥಾ ಹೊರಟಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇವತ್ತು ಧರ್ಮಸ್ಥಳಕ್ಕೆ ಹೊರಟರು. ಗಣೇಶನ ಗುಡಿಯಲ್ಲಿ ಪೂಜೆಯನ್ನು ನೆರವೇರಿಸಿದ ಬಳಿಕ ಕಾರ್ಯಕರ್ತರು ಜಾಥಾ ಹೊರಟಿರುವುದನ್ನು ನೋಡಬಹುದು.
For More Updates Join our WhatsApp Group :