ಶ್ರೀ ಚೌಡೇಶ್ವರಿಯ ಮಹಿಮೆ ಎಂಥಹದ್ದೂ ಗೋತ್ತಾ..?

ಈ ಇತಿಹಾಸ ಪ್ರಸಿದ್ದ ಶ್ರೀ ಚೌಡೇಶ್ವರಿ ದೇವಿ ನೆಲೆಸಿರುವುದು ಇಲ್ಲಿ ಅಂತಿರಾ ಅದುವೆ  ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ, ಪ್ರಾಚೀನ ಕಾಲದ 450ವರ್ಷಗಳ ಹಿಂದೆ 

ಈ ಇತಿಹಾಸ ಪ್ರಸಿದ್ದ ಶ್ರೀ ಚೌಡೇಶ್ವರಿ ದೇವಿ ನೆಲೆಸಿರುವುದು ಇಲ್ಲಿ ಅಂತಿರಾ ಅದುವೆ  ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ, ಪ್ರಾಚೀನ ಕಾಲದ 450ವರ್ಷಗಳ ಹಿಂದೆ  ವಿಜಯನಗರ ಅರಸರಾದ ಹಕ್ಕ-ಬುಕ್ಕರ ಕಾಲದಲ್ಲಿ ನಿರ್ಮಾಣ ಮಾಡಲಾದ  ಮಾತೆ ಶ್ರೀ ಚೌಡೇಶ್ವರಿಯು ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸುವ ಸಂಜೀವಿನಿಯಾಗಿದ್ದಾಳೆ. ಭಕ್ತರಿಗೆ ನಾನ ರೀತಿಯ ಕಷ್ಟಗಳನ್ನು ಪರಿಹಾರ ಮಾಡುತ್ತಿದ್ದಾಳೆ. ಭಕ್ತರು ಕೆಳುವ ಪ್ರಶ್ನೆಗಳಿಗೆ ತನ್ನದೆ ರೀತಿಯಲ್ಲಿ ಉತ್ತರ ಕೊಡುತ್ತಾಳೆ ಈ ದೇವಿ.

ತಿರುಮಣಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚೌಡೇಶ್ವರಿ ದೇವಿಯು ಮಹಿಮೆಯುಳ್ಳ ಶಕ್ತಿ ದೇವತೆ ಅಂದ್ರೆ ತಪ್ಪಾಗಲಾರದು. ನವರಾತ್ರಿ ಹಬ್ಬ ಸೇರಿದಂತೆ ವರ್ಷ ಪೂರ್ತಿ ಮಾತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಪುನಸ್ಕಾರ ಹಾಗೂ ವಿಶೇಷ ಹೋಮ, ಅಲಂಕಾರಗಳು ನಡೆಯುತ್ತವೆ. ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿಗೆ ತಿರುಮಣಿ ಸೇರಿದಂತೆ ಅಕ್ಕ-ಪಕ್ಕದ ಗ್ರಾಮಗಳ ಭಕ್ತಾದಿಗಳ ಆರಾಧ್ಯ ದೇವಿಯಾಗಿರುವ ಶ್ರೀ ಚೌಡೇಶ್ವರಿ ಶಕ್ತಿ ದೇವಿಯಾಗಿ ಪ್ರಸಿದ್ದಿ ಪಡೆದಿದ್ದಾಳೆ. ಜೋತೆಗೆ ಭಕ್ತರ ಪಾಲಿಗೆ ಬೇಡಿದ ವರಗಳನ್ನು ನೀಡುವ ತಾಯಿಯಾಗಿ ಮನೆ ಮಾತಾಗಿದ್ದಾಳೆ. ಭಕ್ತರು ಕೇಳುವ ಪ್ರಶ್ನೆಗಳಿಗೆ ತಾಯಿ ನಾಣ್ಯದ ಮೂಲಕ ಉತ್ತರ ಕೊಡುತ್ತಾಳೆ. ಈ ದೇವಾಲಯವು ಹಾಳಾಗಿತ್ತು ಮತ್ತೆ ಅದನ್ನು ಗ್ರಾಮದವರು ಸೇರಿ ಪುನರ್ ಜೀರ್ಣೊದ್ಧಾರ ಮಾಡಿದ್ದಾರೆ.

ನವರಾತ್ರಿ ಹಬ್ಬ ಸೇರಿದಂತೆ ವರ್ಷ ಪೂರ್ತಿ ಮಾತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಪುನಸ್ಕಾರ ಹಾಗೂ ವಿಶೇಷ ಹೋಮ, ಅಲಂಕಾರಗಳು ನಡೆಯುತ್ತವೆ. ವಿಜಯನಗರ ಅರಸರಿಂದ ನಿರ್ಮಾಣಗೊಂಡ ದೇವಾಲಯದಲ್ಲಿ ನವರಾತ್ರಿಯ 9 ದಿನಗಳು ಒಂದೊOದು ದಿನ ಒಂದೊAದು  ವಿಶೇಷ ಅಲಂಕಾರಗಳ ಜೋತೆಗೆ ಪೂಜಾ ಕಾರ್ಯಗಳನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ವಿಶೇಷವಾಗಿ ಬೆಣ್ಣೆಅಲಂಕಾರ, ಅರಶಿನ ಅಲಂಕಾರ, ಕುಂಕುಮ ಅಲಂಕಾರ, ಹಣ್ಣುಗಳ ಅಲಂಕಾರ, ಒಣ ಹಣ್ಣುಗಳ ಅಲಂಕಾರ, ಗಂಧ ಅಲಂಕಾರ,ಬಳೆ ಅಲಂಕಾರ,ತರಕಾರಿ ಅಲಂಕಾರ, ಹೂವಿನ ಅಲಂಕಾರಗಳನ್ನು ತಾಯಿ ಚೌಡೇಶ್ವರಿ ದೇವಿಗೆ ಮಾಡಲಾಗುತ್ತದೆ.

ಇನ್ನೂ ಮಾತೆ ಶ್ರೀ ಚೌಡೇಶ್ವರಿ ದೇವಿಯ ಇತಿಹಾಸಕ್ಕೆ ನಾವು ಹೋದ್ರೆ ಈ ದೇವಾಸ್ಥಾನವು ತನ್ನದೆಯಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.

ಮಾತೆ ಶ್ರೀ ಚೌಡೇಶ್ವರಿ ದೇವಿಯ ಹಿಂದೆ ಬಹಾಳ ವಿಜೃಂಭಿಸುತ್ತಿದ್ದ ದೇವಾಸ್ಥಾನ ಈ ದೇವಾಲಯಕ್ಕೆ ಎತ್ತರದ ಗೋಪುರವು ವಂದಿತ್ತOತೆ, ಮತ್ತೆ ಈ ದೇವಾಲಯದ ಸುತ್ತಮುತ್ತ ಐತಿಹಾಸಿಕ ಕಲ್ಲುಗಳು, ಶಿಲಾ ಶಾಸನಗಳು ಇವೆಯಂತ್ತೆ. ಹಿರಿಯರು ಈ ದೇವಾಲಯದ ಕೂರಿತು ಗ್ರಾಮಸ್ಥ ರಾಮಾಂಜಿನಪ್ಪ ಮಾತಾನಾಡಿದರು.

ಚೌಡೇಶ್ವರಿ ದೇವಿಯ ದೇವಸ್ಥಾನವು ಸುಮಾರು ೪೫೦ ವರ್ಷಗಳ ಇತಿಹಾಸವನ್ನು ಹೊಂದಿದ್ದು ಸರಿಯಾದ ಪೂಜೆ ಪುನಸ್ಕಾರಗಳಿಲ್ಲದೆ ದೇವಾಲಯ ಪಾಳು ಬಿದ್ದಿದ್ದು , ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟ್ಟಿತ್ತು ಇದರ ಜೋತೆಗೆ ನಿಧಿ ಆಸೆಗಾಗಿ ಕಳ್ಳಕಾಕರು ರಾತ್ರೋ ರಾತ್ರಿ ದೇವಾಲಯದ ಪ್ರಾಂಗಣ,ಗರ್ಭಗುಡಿ ಸೇರಿದಂತೆ ಅನೇಕ ಕಡೆ ಅಗೆದು ದೇವಾಲಯವನ್ನು ಹಾಳು ಮಾಡಿದ್ದರು. ಇಗ ಕಳೆದ ಎರೆಡು ವರ್ಷಗಳ ಹಿಂದೆ ದೇವಾಲಯವನ್ನು ಪುನರ್ ಚೇತನ ಮಾಡಿದ್ದಾರೆ. 

ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಿನ ಚಲಘಟ್ಟದ ಧರ್ಮದರ್ಶಿ ಕಾಂತಮ್ಮ ಕುಟುಂಬ ಹಾಗೂ ತಿರುಮಣಿ ಗ್ರಾಮಸ್ಥರ ಸಹಕಾರದಿಂದ ಪಾಳು ಬಿದ್ದಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಚೌಡೇಶ್ವರಿ ದೇವಿಯ ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು ಅಂದಿನಿAದ ತಾಯಿ ಚೌಡೇಶ್ವರಿ ದೇವಿಗೆ ಗತ ವೈಭವದಂತೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ದೇವಿಯ ದೇವಾಲಯದ ಒಳಗೆ ಗರ್ಭಗುಡಿಯ ಗೋಡೆಗೆ ಭಕ್ತಿಯಿಂದ ದೇವಿಯನ್ನು ನಮಿಸಿ ತಮ್ಮ ಇಷ್ಠಾರ್ಥಗಳನ್ನು ಈಡೇರಿಸಲು ನಾಣ್ಯಗಳನ್ನು ಗೋಡೆಗೆ ಭಕ್ತರು ಅಂಟಿಸುತ್ತಾರೆ ನಾಣ್ಯಗಳು ಗೋಡೆಗೆ ಅಂಟಿಕೊAಡರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರದು. ವಿಜಯನಗರ ಅರಸರಾದ ಅಕ್ಕ-ಬುಕ್ಕರಿಂದ ಸ್ಥಾಪಿಸಿರುವ ಔಡೇಶ್ವರಿ ದೇವಿಯು ನಾನಾ ರೀತಿಯ ಪವಾಡಗಳನ್ನು ಮಾಡುತ್ತ, ಕಷ್ಟ ಎಂದು ಭಕ್ತರಿಗೆ ಅಮ್ಮ ನಂತೆ ಅವರನ್ನು ಅರ್ಶಿವಾದ ಮಾಡುತ್ತಿದ್ದಾಳೆ ಶಕ್ತಿದೇವಿ ಶ್ರೀ ಚೌಡೇಶ್ವರಿ ಅಮ್ಮ.

ಇತಿಹಾಸ ಪ್ರಸಿದ್ದ ಕಾಲದ ಐತಿಹಾಸಹೊಂದಿರುವ ದೇವಾಸ್ಥಾನ. ಸಮಯ ಸಿಕ್ಕಾಗ ನೀವು ಒಮ್ಮೆ ದೇವಿಯ ದರ್ಶನ ಮಾಡಿಕೊಂಡು ಬನ್ನಿ

Leave a Reply

Your email address will not be published. Required fields are marked *