ಬೆಂಗಳೂರು : ಯಾಕ್ ಓವರ್ ಟೇಕ್ ಮಾಡ್ಬೇಕಿತ್ತು, ಒನ್ ವೇ ರಸ್ತೆಯಲ್ಲಿ ಯಾಕ್ ನುಗ್ಗಿದೆ, ನಮ್ ಗಾಡಿಗೆ ಏನಕ್ಕೆ ಗುದ್ದಿದೆ ಅಂತೆಲ್ಲಾ ವಾಹನ ಚಾಲಕರ ನಡುವೆ ಜಗಳಗಳು ನಡೆಯುತ್ತಲೇ ಇರುತ್ತವೆ. ವಾಹನ ಸವಾರರ ಜಗಳಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಒನ್ ವೇ ರೋಡಲ್ಲಿ ಕಾರು ನುಗ್ಗಿಸಿದ ವಿಚಾರವಾಗಿ ಚಾಲಕರಿಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

ಟ್ರಾಫಿಕ್ ರೂಲ್ಸ್ಗಳನ್ನು ಪಾಲಿಸುವುದು ಪ್ರತಿಯೊಬ್ಬ ವಾಹನ ಸವಾರರ ಕರ್ತವ್ಯವಾಗಿದೆ. ಆದ್ರೆ ಕೆಲವರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದು, ಸೀಟ್ ಬೆಲ್ಟ್ ಧರಿಸದೆ ಗಾಡಿ ಓಡಿಸುವುದು, ಈ ರಸ್ತೆಯಲ್ಲಿ ಕೇವಲ ವಾಹನಗಳು ಹೋಗುವುದಕ್ಕೆ ಮಾತ್ರ ಅವಕಾಶವಿದೆ, ಬರುವುದಕ್ಕೆ ಅವಕಾಶವಿಲ್ಲ ಅಂತಹ ಹೇಳಿ ಬೋರ್ಡ್ ಹಾಕಿದ್ರು ಕೂಡಾ ಒನ್ ವೇ ರಸ್ತೆಯಲ್ಲಿ ನುಗ್ಗಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಒನ್ ವೇ ರೋಡಲ್ಲಿ ಗಾಡಿ ನುಗ್ಗಿಸಿದ ವಿಚಾರವಾಗಿ ಕಾರ್ ಚಾಲಕರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ರೂಲ್ಸ್ ಬ್ರೇಕ್ ಮಾಡಿ ಕಾರ್ ನುಗ್ಗಿಸಿದವನಿಗೆ ಇನ್ನೊಬ್ಬ ಕಾರ್ ಚಾಲಕ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.