ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಮಕ್ಕಳಿಗಾಗಲಿ ಅಥವಾ ವಯಸ್ಸಾದವರಿಗಾಗಲಿ ಆರೋಗ್ಯ ಕಾಪಾಡಿಕೊಳ್ಳಲು ಹಾಲು ಕುಡಿಯಿರಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಅನೇಕರಿಗೆ ಹಾಲನ್ನು ತಣ್ಣಗಿರುವಾಗ ಕುಡಿಯಬೇಕೋ ಅಥವಾ ಅದನ್ನು ಬಿಸಿ ಇರುವಾಗಲೇ ಸೇವನೆ ಮಾಡಬೇಕೋ ಎಂಬ ಅನುಮಾನ ಇರುತ್ತದೆ. ಅದರಲ್ಲಿಯೂ ಹಾಲನ್ನು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯುವುದರಿಂದ ವಿಭಿನ್ನ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಹೇಗೆ ಸೇವನೆ ಮಾಡಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಅದಕ್ಕಾಗಿಯೇ ವೈದ್ಯರು ಹಾಲು ಸಂಪೂರ್ಣ ಆರೋಗ್ಯಕ್ಕೆ ಅತ್ಯಗತ್ಯ ಎಂದು ಪದೇ ಪದೇ ಹೇಳುತ್ತಾರೆ. ಮಾತ್ರವಲ್ಲ ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಲ್ಲಿ ವಿಟಮಿನ್ಗಳು, ಪ್ರೋಟೀನ್ಗಳು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಒಂದೇ ಒಂದು ಪಾನೀಯದಲ್ಲಿ ಎಲ್ಲಾ ರೀತಿಯ ಅಂಶಗಳು ಇರುವುದರಿಂದ ಬೆಳೆಯುತ್ತಿರುವ ಮಕ್ಕಳು ಹಾಲು ಕುಡಿಯಬೇಕು ಎಂದು ಹೇಳಲಾಗುತ್ತದೆ. ಹಾಲು ಮಕ್ಕಳ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಹಾಲಿನಲ್ಲಿ ವಿಟಮಿನ್ ಡಿ ಇದೆ, ಇದು ದೇಹಕ್ಕೆ ಬಹಳ ಅವಶ್ಯಕವಾಗಿದೆ. ಆದರೆ ಅನೇಕರಿಗೆ ಹಾಲನ್ನು ತಣ್ಣಗಿರುವಾಗ ಕುಡಿಯಬೇಕೋ ಅಥವಾ ಅದನ್ನು ಬಿಸಿ ಇರುವಾಗಲೇ ಸೇವನೆ ಮಾಡಬೇಕೋ ಎಂಬ ಬಗ್ಗೆ ಅನುಮಾನ ಇರುತ್ತದೆ. ಅದರಲ್ಲಿಯೂ ಹಾಲನ್ನು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯುವುದರಿಂದ ವಿಭಿನ್ನ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಹೇಗೆ ಸೇವನೆ ಮಾಡಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ತಣ್ಣಗಿರುವ ಹಾಲು ಯಾರಿಗೆ ಒಳ್ಳೆಯದು?
ತಜ್ಞರು ಹೇಳುವ ಪ್ರಕಾರ ಹಾಲು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯುವುದರಿಂದ ವಿಭಿನ್ನ ರೀತಿಯ ಪ್ರಯೋಜನಗಳು ಸಿಗುತ್ತವೆ. ನಮಗೆ ಯಾವುದು ಅನುಕೂಲವೋ ಆ ರೀತಿ ಸೇವನೆ ಮಾಡಬಹುದು. ಅಂದರೆ ಕೆಲವರಿಗೆ ಕೆಲವು ರೀತಿಯ ಸಮಸ್ಯೆಗಳಿರುತ್ತವೆ, ಅಂತಹ ಸಮಯದಲ್ಲಿ ಯಾವುದು ದೇಹಕ್ಕೆ ಒಳ್ಳೆಯದೋ ಆ ರೀತಿಯಾಗಿ ಹಾಲನ್ನು ಕುಡಿಯಬೇಕಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿರುವವರು ತಣ್ಣನೆಯ ಹಾಲು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ತಣ್ಣಗಿರುವ ಹಾಲು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನಮ್ಮ ಸ್ನಾಯುಗಳಿಗೂ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ವ್ಯಾಯಾಮ ಮಾಡಿ ಬಂದ ನಂತರ ತಣ್ಣನೆಯ ಹಾಲು ಕುಡಿಯಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಮೂಳೆಗಳ ಆರೋಗ್ಯವನ್ನು ಸುಧಾರಿಸುವುದಕ್ಕೂ ಕೂಡ ತಣ್ಣನೆಯ ಹಾಲು ಕುಡಿಯುವುದು ಒಳ್ಳೆಯದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ, ಇದು ಮೂಳೆಗಳನ್ನು ಬಲಪಡಿಸುವ ಶಕ್ತಿ ಹೊಂದಿದೆ.