ಸಾವಿರ ತಲೆಗಳು ಸಾಕೆನಿಸದೆ ಹೋದವು.
“ನಾನ್ಯಾಕೆ ಹೀಗೆ?” ಎಂದು ಯೋಚಿಸುವುದಕ್ಕೆ
ಶುರುಹಚ್ಚಿಕೊಂಡಾಗ
ಒಂದೇ ಒಂದು ತಲೆ ಸಾಕೆನಿಸಿತು.
ದೇವರೇನೋ ಸಹಸ್ರಶರ‍್ಷ.
ಅವನಿಗೆ ಆ ತಾಕತ್ತಿದೆ. ತಡೆದುಕೊಳ್ಳುವ
ಮತ್ತು ತಡೆದುನಿಲ್ಲಿಸುವ ತಾಕತ್ತಿದೆ.
ನಮಗೋ ಒಂದೇ ಒಂದು ತಲೆಯನ್ನು ಕೂಡ
ಸುಧಾರಿಸಲಿಕ್ಕೆ ಆಗುವುದಿಲ್ಲ.
ಆ ತಲೆಯ ತಲೆನೋವಿನಿಂದ ಮುಕ್ತರಾಗುವುದಕ್ಕೆ
ಗುಳಿಗೆ, ಮಾತ್ರೆಗಳಿಗೆ ಶರಣುಹೋಗುತ್ತೇವೆ.
ಆದ್ದರಿಂದಲೇ ದೊಡ್ಡವರು ಹೇಳುವುದು,
“ಜೋ ಹುವಾ ಅಚ್ಛಾ ಹುವಾ;
ಜೋ ಹೋ ರಹಾ ಹೈ, ಅಚ್ಛಾ ಹೋ ರಹಾ ಹೈ;
ಜೋ ಹೋಗಾ ಅಚ್ಛಾ ಹೋಗಾ” ಎಂದು.
ದೊಡ್ಡವರ ಮಾತನ್ನು ಕೇಳಿಸಿಕೊಳ್ಳೋಣ;
ಅವರ ಮಾತಿಗೆ ಕಿವಿಯಾಗುವಾ.
ಡಾ. ಶಿವಾನಂದ ಶಿವಾಚರ‍್ಯರು
ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು