ಲಾರಿ ಮೇಲೆ Horn Ok Please ಎಂದು ಏಕೆ ಬರೆದಿರುತ್ತಾರೆ? ಕಾರಣವೇನು ಗೊತ್ತಾ? ಇಲ್ಲಿದೆ ಅಚ್ಚರಿ ಉತ್ತರ.

ಹೊರಗಡೆ ಓಡಾಡುವಾಗ ಲಾರಿಗಳನ್ನು ಗಮನಿಸಿದರೆ ಅದರ ಹಿಂಭಾಗದಲ್ಲಿ ಹಾರ್ನ್ ಓಕೆ ಪ್ಲೀಸ್ ( Horn Ok Please ) ಎಂದು ದೊಡ್ಡ ಅಕ್ಷರದಲ್ಲಿ ಬರೆದಿರುವುದನ್ನು ನೀವು ನೋಡಿರುತ್ತೀರಿ.

ಹೊರಗಡೆ ಓಡಾಡುವಾಗ ಲಾರಿಗಳನ್ನು ಗಮನಿಸಿದರೆ ಅದರ ಹಿಂಭಾಗದಲ್ಲಿ ಹಾರ್ನ್ ಓಕೆ ಪ್ಲೀಸ್ ( Horn Ok Please ) ಎಂದು ದೊಡ್ಡ ಅಕ್ಷರದಲ್ಲಿ ಬರೆದಿರುವುದನ್ನು ನೀವು ನೋಡಿರುತ್ತೀರಿ. ಆ ರೀತಿ ಏಕೆ ಬರೆದಿರುತ್ತಾರೆ? ಅದರ ಹಿಂದಿರುವ ಅರ್ಥ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಲಾರಿ, ಟ್ರಕ್ ಮತ್ತು ವ್ಯಾನ್ಗಳಂತಹ ದೊಡ್ಡ ವಾಹನಗಳಲ್ಲಿ ಇವುಗಳನ್ನು ಸಾಮಾನ್ಯವಾಗಿ ನೋಡುತ್ತೇವೆ. ದೊಡ್ಡ ಫಾಂಟ್ ಬಳಸಿ ವಿವಿಧ ಬಣ್ಣಗಳಲ್ಲಿ ಬರೆದಿರುತ್ತಾರೆ. ಹೀಗಾಗಿ ನಂಬರ್ ಪ್ಲೇಟ್ಗಳಿಗಿಂತ Horn Ok Please ಬರಹ ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಅಷ್ಟಕ್ಕೂ ಹಾರ್ನ್ ಓಕೆ ಪ್ಲೀಸ್ ಎಂದು ಯಾಕೆ ಬರೆಯುತ್ತಾರೆ? ಇದರ ಅರ್ಥವೇನೆಂದು ಈಗ ನೋಡೋಣ.

ರಸ್ತೆಯಲ್ಲಿ ಯಾರಾದರೂ ಓವರ್ ಟೇಕ್ ಮಾಡಲು ಬಯಸಿದರೆ ಮೊದಲು ಹಾರ್ನ್ ಮಾಡಿ ಎಂಬ ಸೂಚನೆ ಇದಾಗಿದೆ. ಹಾರ್ನ್ ಮಾಡಿದಾಗ ಆ ಗಾಡಿ ಮುಂದೆ ಹೋಗಲು ದಾರಿ ಮಾಡಿಕೊಡಲಾಗುತ್ತದೆ. ಲಾರಿಯ ಹಿಂಬದಿಯಲ್ಲಿ ಬರುತ್ತಿರುವ ವಾಹನ ಹಾರ್ನ್ ಮಾಡಿದರೆ, ಬದಿಗೆ ಸರಿಯುವ ಮೂಲಕ ಲಾರಿ ಚಾಲಕ ಓವರ್ ಟೇಕ್ ಮಾಡಲು ಅನುಮತಿ ನೀಡುತ್ತಾನೆ. ಓವರ್ಟೇಕ್ನಿಂದ ಆಗುವ ಅಪಘಾತವನ್ನು ತಪ್ಪಿಸಲು ದಯವಿಟ್ಟು ಹಾರ್ನ್ ಮಾಡಿ ಎಂದು ಬರೆಯಲಾಗಿದೆ.

ಹಾರ್ನ್ ಮಾಡುವುದು ತಪ್ಪಲ್ಲ ಎಂಬ ಅರ್ಥವನ್ನು ಸೂಚಿಸಲು ಓಕೆ ಎಂಬ ಪದ ಕೂಡ ಸೇರಿಕೊಂಡಿದೆ. ಈ ಹಿಂದೆ ಡಿವೈಡರ್ ರಸ್ತೆಗಳು ಕಡಿಮೆ ಇದ್ದವು. ಅಂದರೆ, ಒಂದೇ ರಸ್ತೆಗಳಿದ್ದವು. ಈ ಸಂದರ್ಭದಲ್ಲಿ ದೊಡ್ಡ ವಾಹನದ ಹಿಂದೆ ಚಿಕ್ಕ ವಾಹನಗಳನ್ನು ಬರುತ್ತಿದ್ದರೆ ಮುಂದೆ ಯಾವ ವಾಹನಗಳಿವೆ ಎಂಬುದು ಗೊತ್ತಾಗುತ್ತಿರಲಿಲ್ಲ. ಅಲ್ಲದೆ, ದೊಡ್ಡ ವಾಹನಗಳಿಗೆ ಹಿಂದೆ ಬರುತ್ತಿರುವ ವಾಹನಗಳ ಬಗ್ಗೆಯೂ ತಿಳಿಯುತ್ತಿರಲಿಲ್ಲ. ಈ ಸಂದರ್ಭದಲ್ಲಿ ಹಾರ್ನ್ ಮಾಡಿದರೆ ಸೂಚನೆ ಸಿಗುತ್ತಿತ್ತು. ಹಾರ್ನ್ ಬಾರಿಸಿದ ನಂತರ, ಮುಂಭಾಗದಲ್ಲಿರುವ ವಾಹನವು ಬಿಳಿ ಬಲ್ಬ್ ಅನ್ನು ಬೆಳಗಿಸುತ್ತದೆ ಅಂದರೆ, ನೀವು ಓವರ್ಟೇಕ್ ಮಾಡಬಹುದು ಎಂಬ ಸೂಚನೆ ನೀಡುತ್ತದೆ

Leave a Reply

Your email address will not be published. Required fields are marked *