ಖ್ಯಾತ ಜ್ಯೋತಿಷಿ 15 ದಿನಗಳಲ್ಲಿ ಸಿಎಂ ಆಗ್ತಾರೆ ಎಂದು ಭವಿಷ್ಯ.
ಬಾಗಲಕೋಟೆ : ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲ ಒಂದೆರಡಲ್ಲ. ಸಿಎಂ ಕುರ್ಚಿ ಆಗ ಬದಲಾಗುತ್ತೆ, ಈಗ ಬದಲಾಗುತ್ತೆ ಎಂಬ ಚರ್ಚೆಗಳು ದಿನ ಕಳೆದಂತೆ ಜೋರಾಗುತ್ತಲೇ ಇವೆ. ಬ್ರೇಕ್ ಫಾಸ್ಟ್ ಮೂಲಕ ಬಗೆಹರಿಯಿತು ಎನ್ನುವಷ್ಟರಲ್ಲೇ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಿಎಂ ಕುರ್ಚಿ ಕುದನ ಶುರುವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ ಮತ್ತೆ ಆ್ಯಕ್ಟೀವ್ ಆಗಿದ್ದು, ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಂತರ ಬಾಗಲಕೋಟೆಯ ಜ್ಯೋತಿಷಿಯೊಬ್ಬರು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎನ್ನುವ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಹೌದು..ಬಬಲೇಶ್ವರ ಜ್ಯೋತಿಷಿ ಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಎನ್ನುವರು ಜನವರಿಗೆ 15ರೊಳಗೆ ಡಿಕೆ ಶಿವಕುಮಾರ್ ಮುಖ್ಯಮಮತ್ರಿ ಆಗುತ್ತಾರೆ. ಇದರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ನುಡಿಸುತ್ತಾರೆ. ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸೋದನ್ನೇ ಭವಿಷ್ಯ ಹೇಳುತ್ತೇನೆ. ಈವರೆಗೂ ಅನೇಕ ಜನರಿಗೆ ಭವಿಷ್ಯ ಹೇಳಿದ್ದೇನೆ, ಒಂದು ಸುಳ್ಳಾಗಿಲ್ಲ. ಯಾರೊಬ್ಬರೂ ಸುಳ್ಳಾಗಿದೆ ಅಂತ ಬಂದಿಲ್ಲ ಎಂದ ಹೇಳಿದ್ದಾರೆ. ಹೀಗಾಗಿ ಈ ಭವಿಷ್ಯ ಎಷ್ಟು ನಿಜವಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
For More Updates Join our WhatsApp Group :




