ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರ್ತಾರಾ ಕಿಚ್ಚ ಸುದೀಪ್?

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರ್ತಾರಾ ಕಿಚ್ಚ ಸುದೀಪ್?

ಹಾವೇರಿ: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ಅಬ್ಬರ ಚುನಾವಣಾ ಪ್ರಚಾರದಲ್ಲಿ ಘಟಾನುಘಟಿ ನಾಯಕರು ತೊಡಗಿದ್ದಾರೆ. ಯಾವುದೇ ಚುನಾವಣೆ ಬಂದ್ರೆ ಸಾಕು ಅಭ್ಯರ್ಥಿಗಳ ಪರವಾಗಿ ರಾಜಕೀಯ ಪಕ್ಷಗಳು ಸಿನಿಮಾ ಸ್ಟಾರ್ ಗಳನ್ನು ಪ್ರಚಾರಕ್ಕೆ ಕರೆತರು ಪ್ರಯತ್ನ ನಡೆಯುತ್ತಿರುತ್ತವೆ.

ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರವನ್ನ ನಡೆಸಿದ್ರು, ಅಲ್ಲದೇ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ನಾಯಕರ ಕ್ಷೇತ್ರದಲ್ಲಿ ನಟ ಸುದೀಪ್ ಭರ್ಜರಿ ಪ್ರಚಾರವನ್ನ ನಡೆಸಿದ್ದರು. ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಕಿಚ್ಚ ಸುದೀಪ್ ಅವರು ಇದೀಗ ಬೈ ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜ್ಯದಲ್ಲಿ ನವೆಂಬರ್ 13 ರಂದು ಮೂರು ಕ್ಷೇತ್ರದ ಬೈ ಎಲೆಕ್ಷನ್ ನಡೆಯಲಿದ್ದು, ಶಿಗ್ಗಾಂವಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಪುತ್ರ ಭರತ್ ಬೊಮ್ಮಾಯಿ ಅವರು ಕಣಕ್ಕಿಳಿದಿದ್ದು, ನಟ ಸುದೀಪ್ ಅವರು ಭರತ್ ಬೊಮ್ಮಾಯಿ ಅವರ ಪರ ಪ್ರಚಾರಕ್ಕೆ ಬರಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ಈ ಕುರಿತಿ ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಮಾತನಾಡಿ, ನಾವು ಚುನಾವಣಾ ಪ್ರಚಾರದಲ್ಲಿ ತೊಡಿದ್ದೇವೆ, ಮನೆ ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ನಾವು ಕಲಾವಿದರನ್ನ ಚುನಾವಣಾ ಪ್ರಚಾರಕ್ಕೂ ಆಹ್ವಾನವನ್ನ ನೀಡಿಲ್ಲ. ತಂದೆ ಅವರ ಅಭಿವೃದ್ದಿ ಕಾರ್ಯಗಳ ಮೇಲೆ ಚುನಾವಣೆಯಲ್ಲಿ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಕೊಡುತ್ತಿರುವುದು ತಾತ್ಕಾಲಿಕ ಗ್ಯಾರೆಂಟಿ ನಮ್ಮದು ಶಾಸ್ವತ ಗ್ಯಾರೆಂಟಿ. ನಾವು ಇಲ್ಲಿ 5000 ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ. ಇದು ಪರ್ಮನೆಂಟ್ ಗ್ಯಾರಂಟಿ, ಅದನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟಿರೋದು ಟೆಂಪರರಿ ಗ್ಯಾರಂಟಿ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರಕ್ಕೆ ಬರಲು ನೀಡಿದ ಗ್ಯಾರಂಟಿಗಳು ಚುನಾವಣಾ ಗ್ಯಾರೆಂಟಿಗಳು. ನಾವು ಪರ್ಮನೆಂಟ್ ಗ್ಯಾರಂಟಿ ಕೊಟ್ಟಿದ್ದೇವೆ. ರೈತರಿಗೆ ನೀರಾವರಿ , ಕುಡಿಯಲು ನೀರು, ಕೊಟ್ಟಿದ್ದೇವೆ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡುವುದು ಎಂದರು.

ನಾನು ಹಿಂದೆ 2018 ಮತ್ತು 2023 ರಲ್ಲಿ ನಮ್ಮ ತಂದೆಯವರ ಪರ ಪ್ರಚಾರ ಮಾಡಿದ್ದೆ ಎಲ್ಲಾ ಊರು, ಪಟ್ಟಣ ಓಡಾಡಿದ್ದೆ. ಈಗ ನನಗೆ ಆಶೀರ್ವಾದ ಮಾಡಿ ಅಂತ ಜನರನ್ನು ಕೇಳ್ತಿದಿನಿ ತಂದೆಯವರ ಮೂರ್ನಾಲ್ಕು ಕನಸಿದೆ, ಅದನ್ನು ನನಸು ಮಾಡುವೆ. ಯುವಕನಾಗಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವೆ ಎಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ತಿಳಿಸಿದರು.

ನಮ್ಮ ತಂದೆ ನ್ಯಾಷನಲ್ ಪಾರ್ಲಿಮೆಂಟರಿ ಕಮಿಟಿ ಸ್ಕಿಲ್ ಡೆವಲಪ್ಮೆಂಟ್ ಚೇರ್ಮನ್ ಇದ್ದಾರೆ. ಇಲ್ಲಿ ಇನ್ನಷ್ಟು ಕೈಗಾರಿಕೆ ತರುವ ಉದ್ದೇಶ ಇದೆ. ಎಲ್ಲಾ ಕಡೆ ಒಳ್ಳೆ ಪ್ರತಿಕ್ರಿಯೆ ಇದೆ. ಕಾರ್ಯಕರ್ತರು, ಎಲ್ಲಾ ಸಮುದಾಯದ ಜನ ಬೆಂಬಲ ವ್ಯಕ್ತ ಪಡಿಸಿದ್ದಾರೆ. ತಂದೆ ಕೆಲಸಗಳ ಬಗ್ಗೆ ಜನ ಹೇಳುವುದು ಕೇಳಿ ಹೆಮ್ಮೆ ಆಗಿದೆ. ನಮ್ಮ ತಂದೆಯ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವೆ ಎಂದು ಹೇಳಿದರು.

Leave a Reply

Your email address will not be published. Required fields are marked *