ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರ ಭಾರೀ ಯಶಸ್ಸು ಕಂಡಿದೆ. ಆದರೂ, ಸೀಕ್ವೆಲ್ ಮಾಡಲು ರಾಜ್ ಬಿ. ಶೆಟ್ಟಿ ಅವರು ನಿರಾಕರಿಸಿದ್ದಾರೆ. ಇದು ಅವರ ನೈತಿಕತೆಗೆ ವಿರುದ್ಧ ಎಂದು ಅವರು ನಂಬುತ್ತಾರೆ. ಗೆದ್ದ ಕುದುರೆಯ ಬಾಲ ಹಿಡಿದು ಓಡುವುದು ಅವರಿಗೆ ಇಷ್ಟವಿಲ್ಲ. ಹೊಸ ಮತ್ತು ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಯೋಜನೆಯಲ್ಲಿದ್ದಾರೆ.
ಯಾವುದೇ ಸಿನಿಮಾ ಹಿಟ್ ಆದರೆ ಅದಕ್ಕೆ ಸೀಕ್ವೆಲ್ ಅಥವಾ ಪ್ರಿಕ್ವೆಲ್ ಮಾಡೋದು ಟ್ರೆಂಡ್. ಮೊದಲ ಸಿನಿಮಾ ಹಿಟ್ ಆಗಿದೆ ಎಂಬ ಕಾರಣಕ್ಕೆ ಎರಡನೇ ಪಾರ್ಟ್ ಮಾಡಿದರೆ ಜನರು ನೋಡಲು ಬಂದೇ ಬರುತ್ತಾರೆ. ಇದು ಬಿಸ್ನೆಸ್ ನಿಟ್ಟಿನಲ್ಲಿ ತುಂಬಾನೇ ಲಾಭ. ಈ ಕಾರಣಕ್ಕೆ ಅನೇಕರು ಈ ಬಗ್ಗೆ ಆಸಕ್ತಿ ಹೊರಹಾಕುತ್ತಾರೆ. ಆದರೆ, ರಾಜ್ ಬಿ. ಶೆಟ್ಟಿ ಮಾತ್ರ ಈ ಸಂಪ್ರದಾಯಕ್ಕೆ ಕಟ್ಟು ಬಿದ್ದವರಲ್ಲ. ಈ ಕಾರಣದಿಂದಲೇ ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅವರು ರೆಡಿ ಇಲ್ಲ.
‘ಸು ಫ್ರಮ್ ಸೋ’ ಸಿನಿಮಾಗೆ ಸೀಕ್ವೆಲ್ ತರಬೇಕು ಎಂದು ಅನೇಕರು ಹೇಳಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ನೋಡಿದರೆ ಆ ರೀತಿಯ ಅವಕಾಶವೂ ಇದೆ ಎನಿಸುತ್ತದೆ. ಆದರೆ, ರಾಜ್ ಬಿ ಶೆಟ್ಟಿ ಇದಕ್ಕೆ ವಿರುದ್ಧ. ಅವರು ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಬಾರದು ಎಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಅವರು ಬೇರೆ ರೀತಿಯ ಚಿತ್ರಗಳನ್ನು ಮಾಡುವ ಪ್ಲ್ಯಾನ್ನಲ್ಲಿ ಇದ್ದಾರೆ.
‘ಸು ಫ್ರಮ್ ಸೋ’ ಸಿನಿಮಾಗೆ ಸೀಕ್ವೆಲ್ ಮಾಡಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ, ಅದು ತಮ್ಮ ನೈತಿಕತೆಗೆ ವಿರುದ್ಧವಾಗಿದೆ ಎಂದು ನಂಬುತ್ತಾರೆ ರಾಜ್. ಜೊತೆಗೆ ಗೆದ್ದ ಕುದುರೆಯ ಬಾಲ ಹಿಡಿದು ಓಡುವವರು ಅವರಲ್ಲ. ಈ ಕಾರಣದಿಂದಲೇ ರಾಜ್ ಅವರು ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಬಾರದು ಎಂದು ನಿರ್ಧರಿಸಿದ್ದಾರೆ.
‘ಮುಂದಿನ ಬಾರಿ ನಾವು ಹೊಸ ರೀತಿಯ ಸಿನಿಮಾ ಮಾಡುತ್ತೇವೆ. ಅದನ್ನು ನೋಡಲು ಬರುವಾಗ ಈ ಸಿನಿಮಾದ ಮೇಲಿದ್ದ ನಿರೀಕ್ಷೆ ಬೇಡ. ಅದು ಸಂಪೂರ್ಣವಾಗಿ ಹೊಸ ರೀತಿಯದ್ದೇ ಚಿತ್ರ ಆಗಿರಲಿದೆ. ಸಿನಿಮಾ ಗೆಲ್ಲುತ್ತದೆಯೋ ಅಥವಾ ಬಿಡುತ್ತದೆಯೋ ಎರಡನೇ ವಿಷಯ. ಪ್ರಾಮಾಣಿಕ ಪ್ರಯತ್ನವಂತೂ ಇರುತ್ತದೆ’ ಎನ್ನುತ್ತಾರೆ ರಾಜ್.