ಸೀಮಿತ ಚೌಕಟ್ಟಿನೊಳಗೆ ಕಲಿಯುವುದು ಶಿಕ್ಷಣವಲ್ಲ..!
ನಾವು ಬಾಲ್ಯದಿಂದಲೂ ಕಲಿತಿರುವ ಕಲಿಕೆಯನ್ನು ಅವಲೋಕಿಸಿದಾಗ ಸೀಮಿತ ಚೌಕಟ್ಟಿನೊಳಗೆ ಕಲಿತಿರುವುದು ತುಂಬಾ ಕಡಿಮೆ ಆದರೂ ಇತ್ತೀಚಿನ ದಿನಗಳಲ್ಲಿ ಚೌಕಟ್ಟಿನೊಳಗಿನ ಶಿಕ್ಷಣಕ್ಕೆ ಬಹಳ ಮಹತ್ವವನ್ನ ಕೊಡುತ್ತಿದ್ದೇವೆ ಅದು ಎಷ್ಟರಮಟ್ಟಿಗೆ ಎಂದರೆ ಕೆಲವೊಂದು ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು ಆಕಸ್ಮಿಕವಾಗಿ ಹೊರಬಂದರೂ ನಾವು ತುಲನಾತ್ಮಕವಾಗಿ ಅಳೆಯುವುದು ಯಾವ ಶಾಲೆಯಲ್ಲಿ ಓದುತ್ತಿರುವೆ ಯಾವ ಶಿಕ್ಷಕರು ಬೋಧಿಸುತ್ತಿದ್ದಾರೆ ಹೀಗೆ ಅನೇಕ ಪ್ರಶ್ನೆಗಳು ಮನದಲ್ಲಿ ಮೂಡುತ್ತಿವೆ ಅಂದರೆ ಮಕ್ಕಳ ವೈಯಕ್ತಿಕ ವಿವೇಚನೆ ಯೋಜನೆ ಉತ್ಸಾಹ ಉಂಟಾದ ಮನೋಭಿಲಾಷೆಗಳಿಗೆ ಒಂದು ಚೂರು ಮಹತ್ವವನ್ನು ಇಂದು ನಾವು ನೀಡುತ್ತಿಲ್ಲ.
ಕೆಲವೊಂದು ಬಾರಿ ಮಕ್ಕಳ ಅವಲೋಕನ ಭಾಗಶಃ ಸ್ಪಷ್ಟ ನಿಖರ ಹಾಗೂ ಸುಂದರವಾಗಿರುತ್ತದೆ ಅದನ್ನು ಯಾವುದೇ ಒಂದು ಪಠ್ಯಪುಸ್ತಕವಾಗಲಿ ಮಾರ್ಗದರ್ಶಕರಿಂದಾಗಲಿ ಬಂದಿರುವುದಿಲ್ಲ ಬದಲಿಗೆ ತನ್ನದೇ ಆದ ಕಲ್ಪನಾ ಶಕ್ತಿಯಿಂದ ವಿವೇಚನೆಯಿಂದ ಹಾಗೂ ಭಾವನಾತ್ಮಕ ಬದಲಾವಣೆಗಳಿಂದ ಹೊರಹೊಮ್ಮುತ್ತವೆ ಅವುಗಳನ್ನು ಪೋಷಿಸಬೇಕಾಗುವುದು ಪಾಲಕರ ಶಿಕ್ಷಕರ ಹಾಗೂ ಸಮುದಾಯದ ಜವಾಬ್ದಾರಿಯಾಗಿರುತ್ತದೆ.
ಕೇವಲ ಸೀಮಿತ ಚೌಕಟ್ಟಿನೊಳಗೆ ಕಲಿಯುವುದು ಮಾತ್ರ ಶಿಕ್ಷಣವಲ್ಲ ಅದರಿಂದ ಜೀವನವನ್ನು ಬದುಕನ್ನು ಗೆಲ್ಲಬಹುದೆಂಬುದು ಕೇವಲ ಕಾಲ್ಪನಿಕ ಸತ್ಯ ಮೌಲ್ಯ ದಾರಿತ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪಾಠಗಳು ಏಣಿಗಳಂತಿದ್ದರೆ ಹತ್ತುವ ಮನಸ್ಸು ಮಗುವಿನದ್ದೆ ಆಗಿರುತ್ತದೆ ಅದು ಕೆಲವರಲ್ಲಿ ಭಿನ್ನವಾಗಿ ವಿಭಿನ್ನವಾಗಿ ವಿಶೇಷವಾಗಿ ರಚಿತವಾಗಿರುತ್ತವೆ ಆದುದರಿಂದ ಯಾವ ಹಂತದಲ್ಲಾಗಲಿ ಯಾವ ಮಕ್ಕಳಲ್ಲಾಗಲಿ ಅಥವಾ ಯಾವ ವರ್ಗದಲ್ಲಾಗಲಿ ಅಳತೆ ಮಾಪನಗಳಾಗಲಿ ಸಾಧ್ಯವಾಗುವುದಿಲ್ಲ ನಾವು ಅನೇಕ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅನೇಕ ಮಕ್ಕಳನ್ನು ನೋಡಿರುತ್ತೇವೆ ಆದರೆ ಅದೇ ಮಗು ಕೆಲವು ವರ್ಗದ ಅಂತರಗಳಲ್ಲಿ ವಿರುದ್ಧವಾಗಿ ಬದಲಾಗಲುಬಹುದು ಅಥವಾ ಈ ಕ್ರಿಯೆಗೆ ವಿರುದ್ಧವಾಗಿಯೂ ನಡೆಯಲುಬಹುದು ಆದ್ದರಿಂದ ಕೇವಲ ಚೌಕಟ್ಟಿನೊಳಗೆ ನಡೆಯುವುದು ಶಿಕ್ಷಣ ಎಂಬುದು ಒಂದು ರೀತಿಯ ಭ್ರಮೆ ಎನಿಸುತ್ತದೆ.
ಇಂದಿನ ದಿನಗಳಲ್ಲಂತೂ ಅನೇಕ ಬಾರಿ ನಾವು ಊಹಿಸುವುದು ಬಹಳಷ್ಟು ಕಠಿಣ ಕಾರಣ ಮನೋಭಾವನೆಗಳಲ್ಲಿ ಭಿನ್ನತೆ ವಿಚಾರವಿನಿಮಯಗಳಲ್ಲಿ ಬದಲಾವಣೆ ಹಾಗೂ ವಿಮರ್ಶೆ ಮತ್ತು ವೈಯಕ್ತಿಕ ಅಭಿಪ್ರಾಯಗಳಲ್ಲಿ ತನ್ನದೇ ಆದ ಚಿಂತನೆಗಳಿರುವುದರಿAದ ಇದು ಅತ್ಯಂತ ಕಠಿಣವೂ ಹೌದು, ಸವಾಲು ಹೌದು ಒಟ್ಟಾರೆ ಶಿಕ್ಷಣದ ಶ್ರೇಯೋಭಿವೃದ್ಧಿ ಮಾನವೀಯತೆ ಮೌಲ್ಯವನ್ನು ಬೆಳೆಸುವುದರೊಂದಿಗೆ ಬದುಕನ್ನು ಕಟ್ಟುವ ಭರವಸೆಗಳನ್ನು ಬಲವಾಗಿ ಬೇರೂರಬೇಕು ಅದಕ್ಕಾಗಿ ಕೇವಲ ಚೌಕಟ್ಟಿನೊಳಗಿನ ಪ್ರಗತಿಯನ್ನು ಪರಿಶೀಲಿಸುವ ಬದಲಿಗೆ ಚೌಕಟ್ಟಿನೊರಗಿನ ಅಂಶಗಳನ್ನು ಪರಿಗಣಿಸುವುದು ಅನಿವಾರ್ಯ ಈ ನಿಟ್ಟಿ ನಲ್ಲಿ ನಾವು ಅನೇಕ ಬದಲಾವಣೆಗಳನ್ನು ಬಯಸಬೇಕಾಗುತ್ತದೆ ಅಂದರೆ ಮನ್ನಣೆ ಮಾನ್ಯತೆ ಪರಿಗಣನೆ ಇವುಗಳನ್ನು ಒಳಗೊಂಡAತೆ ತಾರ್ಕಿಕ ವಿಮರ್ಶಾತ್ಮಕ ಅಂಶಗಳನ್ನು ಮುಕ್ತವಾಗಿ ಒಪುö್ಪವ ಬದಲಿಸುವ ಅಥವಾ ವಿಶ್ಲೇಷಿಸುವ ಕಾರ್ಯವೂ ಕೂಡ ಎಲ್ಲರಿಂದ ಆಗಬೇಕಿದೆ ಆಗ ಮಾತ್ರ ಸಮಾಜದಲ್ಲಿ ಶೈಕ್ಷಣಿಕವಾಗಿ ಎಲ್ಲ ರೀತಿಯ ಸಾಮಾಜಿಕ ಸಮಾಧಾನಗಳನ್ನು ನೋಡಲು ಸಾಧ್ಯ ಎನ್ನಬಹುದು.
ಕೇವಲ ಸಂಪಾದನೆಯ ಮಾರ್ಗವನ್ನು ಕಲಿಸುವ ಶಿಕ್ಷಣ ಸಂಪಾದನೆಯನ್ನು ಹೇಗೆ ವಹಿಸಬೇಕೆಂಬುದು ತನ್ನ ವಿವೇಚನೆ ನಿರ್ಧಾರ ಹಾಗೂ ಮನೋಭಿಲಾಷೆಗಳ ಮೇಲೆ ನಿಂತಿರುತ್ತದೆ ಕೇವಲ ಚೌಕಟ್ಟಿನೊಳಗೆ ಚಿಂತಿಸಿದಾಗ ಅದೊಂದು ಜೀವನದ ಖರ್ಚು ವೆಚ್ಚವಾಗಬಹುದು ಆದರೆ ಅವರ ಯೋಗ್ಯತಾನುಸಾರ ಚೌಕಟ್ಟಿನ ಹೊರಗೆ ಬಂದು ನೋಡಿದರೆ ಅದೊಂದು ಸಾಮಾಜಿಕ ಆರ್ಥಿಕ ಚಿಲುಮೆಯೇ ಆಗಬಹುದು ಅದು ಸಾಧ್ಯವಾಗುವುದು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಪ್ರೋತ್ಸಾಹಿಸಿ ಅದರ ಬಗ್ಗೆ ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದಾಗ.
ಶಿಕ್ಷಣ ಕೇವಲ ಯಾಂತ್ರಿಕವಲ್ಲ ಎಂಬುದು ಪ್ರತಿಯೊಂದು ಮಗುವಿನ ಮಾನಸಿಕ ಧೋರಣೆಯನ್ನು ಸೀಮಿತ ಚೌಕಟ್ಟನ್ನು ಮೀರಿ ಅವಲೋಕಿಸಿದಾಗ ಅದರ ಅರಿವಾಗುತ್ತದೆ ಅನೇಕ ವಿಚಾರಗಳನ್ನು ನಾವು ಪಠ್ಯಪುಸ್ತಕ ಹೊರೆತುಪಡಿಸಿಯು ಕಲಿಸಬಹುದು ಹಾಗೆಯೇ ಬೋಧನಾ ಅವಧಿಗಳಲ್ಲಿ ಸೂಕ್ಷ÷್ಮವಾಗಿ ಗಮನಿಸಿ ನೀರಿರೆದರೆ ಮುಂದೆ ಅದು ಬೆಳೆದು ಹೆಮ್ಮರವಾಗಿ ದೀರ್ಘಕಾಲ ಸಮಾಜಮುಖಿಯಾಗಿ ಅರಳಬಲ್ಲ ವೃಕ್ಷವಾಗಿ ಬದುಕನ್ನು ಸರಾಗವಾಗಿಸುತ್ತದೆ.