ನೀರು ಸಂಗ್ರಹದಲ್ಲೇ ವ್ಯಯವಾಗುತ್ತಿದೆ ಮಹಿಳೆಯರ ಸಮಯ; ಇದು ಹವಾಮಾನ ಬದಲಾವಣೆಯ ಪರಿಣಾಮ

ನವದೆಹಲಿ: ಹವಾಮಾನ ವೈಪರೀತ್ಯದ ಪರಿಣಾಮಗಳು ಭವಿಷ್ಯದ ದಿನಗಳಲ್ಲಿ ಮತ್ತಷ್ಟು ತೀವ್ರವಾಗುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಜಗತ್ತಿನೆಲ್ಲೆಡೆ ಇಂಗಾಲದ ಹೊರಸೂಸುವಿಕೆ ಹೆಚ್ಚುತ್ತಿದೆ. ಇದು ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. 2050ರ ವೇಳೆಗೆ ಮಹಿಳೆಯರು ಉದ್ಯೋಗ, ವೃತ್ತಿ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದು. ಗೃಹ ಬಳಕೆಗೆ ನೀರು ಸಂಗ್ರಹಿಸುವ ಹೊರೆ ಅವರ ಮೇಲೆ ಮತ್ತಷ್ಟು ಹೆಚ್ಚಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಹೆಚ್ಚುತ್ತಿರುವ ಹವಾಮಾನ ಬದಲಾವಣೆಯಿಂದ ದಕ್ಷಿಣ ಅಮೆರಿಕ ಮತ್ತು ಆಗ್ನೇಯ ಏಷ್ಯಾದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ಮಳೆಯ ಪ್ರಮಾಣ ತಗ್ಗುತ್ತಿದೆ. ಇದು ಜೀವಜಲ ಸಂಗ್ರಹದ ಕಾರ್ಯದ ಸಮಯ ಏರಿಸುತ್ತದೆ ಎಂದು ಜರ್ನಲ್​ ನೇಚರ್​ ಕ್ಲೈಮೆಂಟ್​ ಚೇಂಜ್​ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಜಾಗತಿಕವಾಗಿ, 1990ರಿಂದ 2019ರವರೆಗೆ ಮಹಿಳೆಯರು ಮನೆ ಬಳಕೆಗೆ ನೀರು ಸಂಗ್ರಹಣೆಗಾಗಿ ಬಳಸುವ ಸಮಯವನ್ನು ಪರೀಕ್ಷಿಸಲಾಗಿದೆ. ಈ ಕುರಿತು ಜರ್ಮನಿಯ ಪೊಟ್ಸ್​​ಡ್ಯಾಮ್​ ಇನ್ಸುಟಿಟ್ಯೂಟ್​ ಫಾರ್​ ಕ್ಲೈಮೆಟ್​ ಇಂಪಾರ್ಕಟ್​ ರಿಸರ್ಚ್​ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮನೆಗೆ ನೀರು ಸಂಗ್ರಹಿಸುವುದು ಮಹಿಳೆಯರ ಪ್ರಾಥಮಿಕ ಜವಾಬ್ದಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ನೀರು ಸಂಗ್ರಹಣೆಗೆ 23 ನಿಮಿಷ ವ್ಯಯಿಸುತ್ತಿದ್ದಾರೆ ಎಂಬುದನ್ನು ಅದು ಕಂಡುಕೊಂಡಿದೆ.

2050ರ ಹೊತ್ತಿಗೆ ಇಂಗಾಲದ ಮಟ್ಟ ಹೆಚ್ಚಾದಲ್ಲಿ ಮಹಿಳೆಯರು ಪ್ರತಿದಿನ ನೀರು ಸಂಗ್ರಹಿಸಲು ಶೇ 30ರಷ್ಟು ಸಮಯವನ್ನು ಹೆಚ್ಚು ನೀಡಬೇಕಾಗುತ್ತದೆ. ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ ಕಡಿಮೆ ಮಾಡಿದಲ್ಲಿ, ನೀರು ಸಂಗ್ರಹಣೆ ಹೊರೆಯನ್ನು ಶೇ 19ರಷ್ಟು ಇಳಿಸಬಹುದು.

ಸದ್ಯ ಪೂರ್ವ ಮತ್ತು ಕೇಂದ್ರ ಆಫ್ರಿಕಾದಲ್ಲಿ ಮಹಿಳೆಯರು ತಮ್ಮ ದೀರ್ಘ ಸಮಯವನ್ನು ನೀರು ಸಂಗ್ರಹಿಸಲು ಬಳಸುತ್ತಿದ್ದಾರೆ. ತಾಪಮಾನದ ಏರಿಕೆಯಾದಲ್ಲಿ ಇವರ ಈ ಕೆಲಸ ಶೇ20ರಿಂದ 40ರಷ್ಟು ಹೆಚ್ಚಾಗುತ್ತದೆ. ಹವಾಮಾನ ಬದಲಾವಣೆಯಿಂದ ಲಿಂಗ ತಾರತಮ್ಯ ಎಂಬ ಅಧ್ಯಯನದಡಿ ಈ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಹವಾಮಾನ ಬದಲಾವಣೆಯು ಮಹಿಳೆಯರು ಆರೋಗ್ಯ, ಅವರ ಶಿಕ್ಷಣ, ಕೆಲಸ, ಬಿಡುವಿನ ಸಮಯದ ಮೇಲೆ ಉಂಟು ಮಾಡುವ ಪರಿಣಾಮವನ್ನು ವಿವರಿಸಲಾಗಿದೆ.

ಹವಾಮಾನ ಬದಲಾವಣೆ ಪರೋಕ್ಷವಾಗಿ ಮಹಿಳೆಯರು ಜೀವಿಸುವ ಪರಿಸ್ಥಿತಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಂದು ಸ್ಪಷ್ಟಪಡಿಸಿದೆ. ನೀರಿನ ಸಂಗ್ರಹಕ್ಕೆ ಮಹಿಳೆಯರು ಹೆಚ್ಚು ಸಮಯ ಮೀಸಲಿಡುವ ಕುರಿತು ತಿಳಿಸಿದೆ. 2016ರಲ್ಲಿ ಜಗತ್ತಿನೆಲ್ಲೆಡೆ ಮಹಿಳೆಯರು ಮನೆಗೆ ನೀರು ಸಂಗ್ರಹಿಸುವುದೇ ಪ್ರಮುಖ ಕಾರ್ಯವಾಗಲಿದೆ. ಇದಕ್ಕಾಗಿ 200 ಮಿಲಿಯನ್​ ಗಂಟೆಗಳನ್ನು ವ್ಯಯಿಸಬೇಕಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *