“ಬೈಯಪ್ಪನಹಳ್ಳಿ ಫ್ಲೈಓವರ್ ಬಳಿ ರಾಂಗ್ ಸೈಡ್ ಚಾಲನೆ: ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಮಹಿಳೆ.

 “ಬೈಯಪ್ಪನಹಳ್ಳಿ ಫ್ಲೈಓವರ್ ಬಳಿ ರಾಂಗ್ ಸೈಡ್ ಚಾಲನೆ: ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಮಹಿಳೆ.

ಬೆಂಗಳೂರು: ಬೆಂಗಳೂರಿನಲ್ಲಿ ವಾಹನಗಳು ರಸ್ತೆ ಇಳಿದ್ರೆ ಸಾಕು, ಒಂದಲ್ಲ ಒಂದು ಸಮಸ್ಯೆ ಉದ್ಭವಿಸುತ್ತದೆ. ಒಂದು ಟ್ರಾಫಿಕ್ ಸಮಸ್ಯೆ, ಮತ್ತೊಂದು ಅಪಘಾತ, ಇದು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯವಾಗಿದೆ. ಇದೀಗ ಬೈಯಪ್ಪನಹಳ್ಳಿ ಫ್ಲೈಓವರ್ ಬಳಿಯ ರಸ್ತೆಬದಿಯಲ್ಲಿ ಒಂದು ಅಪಘಾತ ನಡೆದಿದೆ. ಅಪಘಾತದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಾಂಗ್ ಸೈಡ್​​​ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು ಆಟೋ ಚಾಲಕನ ಜತೆಗೆ ಜಗಳಕ್ಕೆ ಇಳಿದಿದ್ದಾರೆ. ಇದೀಗ ಈ ವಿಚಾರವಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​​​ ಮಾಡಿದ್ದು, ಬೆಂಗಳೂರಿನಲ್ಲಿ ಜನ, ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಾಂಗ್ ಸೈಡ್ ಚಾಲನೆ, ರಸ್ತೆ ಶಿಸ್ತಿನ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಎಕ್ಸ್​​ನಲ್ಲಿ ಹಂಚಿಕೊಂಡಿರುವ ವಿಡಿಯೋದ ಪ್ರಕಾರ, ಮಹಿಳೆ ಸಂಚಾರ ನಿಯಮವನ್ನು ಉಲ್ಲಂಘಿಸಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಬಂದು ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ತಪ್ಪು ಮಾಡಿದ ಮಹಿಳೆ ಆಟೋ ಚಾಲಕನಿಗೆ ರಸ್ತೆ ಮಧ್ಯೆ ನಿಂದಿಸಿದ್ದಾರೆ. ಈ ವೇಳೆ ಸಂಚಾರಿ ಪೊಲೀಸರು ಮಧ್ಯೆ ಪ್ರವೇಶಿಸಿ, ಮಹಿಳೆಯನ್ನು ಸುಮ್ಮನಿರುವಂತೆ, ಹಾಗೂ ಅವರ ತಪ್ಪಿನ ಬಗ್ಗೆ ಹೇಳಿದ್ರು, ಅದನ್ನು ಕೇಳಿಸಿಕೊಳ್ಳದೇ, ಆಟೋ ಚಾಲಕನಿಗೆ ಬಾಯಿಗೆ ಬಂದಂತೆ ಬೈಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಆಟೋ ಚಾಲಕ ಕೂಡ ವಾದಿಸಿದ್ದು, “ನಾನು ಸರಿಯಾದ ಸೈಡ್​​​ನಲ್ಲಿ ಬಂದಿದ್ದೇನೆ. ನೀವು ರಾಂಗ್ ಸೈಡ್​​​ನಿಂದ ಬಂದ ಡಿಕ್ಕಿ ಹೊಡೆದದ್ದು” ಎಂದು ಹೇಳಿದ್ರು, ಮಹಿಳೆ ಮಾತ್ರ ತನ್ನ ತಪ್ಪುನ್ನು ಸರಿ ಎಂದೇ ವಾದಿಸಿದ್ದಾರೆ.

ಇನ್ನು ಈ ಗಲಾಟೆಯಿಂದ ಈ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಈ ಕಿರಿದಾದ ರಸ್ತೆಯಲ್ಲಿ ಸಾಲು ಸಾಲು ವಾಹನಗಳು ಜಾಮ್​​ ಆಗಿದ್ದು, ಇವರ ಜಗಳದಿಂದ ಇತರ ವಾಹನ ಸವಾರರು ಪರದಾಡುವಂತಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದ್ದಂತೆ ಪೊಲೀಸರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *