‘Toxic ’-‘ರಾಮಾಯಣ’ ಶೂಟ್ ಮುಗಿಸಿ ಕುಟುಂಬ ಸಮೇತ ಅಮೆರಿಕಕ್ಕೆ ಹಾರಿದ Yash.

‘Toxic ’-‘ರಾಮಾಯಣ’ ಶೂಟ್ ಮುಗಿಸಿ ಕುಟುಂಬ ಸಮೇತ ಅಮೆರಿಕಕ್ಕೆ ಹಾರಿದ Yash.

ಯಶ್ ಅವರು ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳ ಚಿತ್ರೀಕರಣ ಮುಗಿಸಿ ಕುಟುಂಬದೊಂದಿಗೆ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೆಲವು ವಾರಗಳಿಂದ ಮುಂಬೈನಲ್ಲಿದ್ದ ಯಶ್, ಈಗ ವಿಶ್ರಾಂತಿ ಪಡೆಯಲು ತಮ್ಮ ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ಅಮೆರಿಕಕ್ಕೆ ತೆರಳಿದ್ದಾರೆ. ಜುಲೈ 3 ರಂದು ‘ರಾಮಾಯಣ’ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಲಿದೆ.

ನಟ ಯಶ್ ಅವರು ಇತ್ತೀಚೆಗೆ ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿ ಆಗಿದ್ದರು. ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ವೆಕೇಶನ್ ತೆರಳಲು ಅವರ ಬಳಿ ಸಮಯ ಇರಲಿಲ್ಲ. ಈಗ ಅವರು ಒಂದು ಹಂತದ ಜವಾಬ್ದಾರಿ ಮುಗಿಸಿ ಅಮೆರಿಕಕ್ಕೆ ಹಾರಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಯಶ್ಗೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಒಂದಷ್ಟು ಸಮಯವನ್ನು ಕುಟುಂಬದ ಜೊತೆ ಕಳೆದು ಯಶ್  ಬರಲಿದ್ದಾರೆ.

ಯಶ್ ಅವರು ಫ್ಯಾಮಿಲಿ ಮ್ಯಾನ್. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅವರು ಬಯಸುತ್ತಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಆ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಆದರು. ಇದಕ್ಕಾಗಿ ಬೆಂಗಳೂರು, ಮುಂಬೈ ಹಾಗೂ ಗೋವಾ ಕಡೆಗಳಲ್ಲಿ ಸುತ್ತಾಡಿದರು. ಇದು ಪೂರ್ಣಗೊಳ್ಳುತ್ತಿದ್ದಂತೆ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಕೊಂಡರು.

ಕಳೆದ ಕೆಲವು ವಾರಗಳಿಂದ ಯಶ್ ಅವರು ಮುಂಬೈನಲ್ಲಿ ನೆಲೆಸಿದ್ದರು. ತಮ್ಮನ್ನು ತಾವು ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಆಗಿರುವುದರಿಂದ ಅವರು ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ. ಇದು ಭಾವನಾತ್ಮಕವಾಗಿಯೂ ಹೆಚ್ಚು ಚಾಲೆಂಜಿಂಗ್. ಈ ಕಾರಣದಿಂದಲೇ ಯಶ್ಗೆ ಒಂದು ಬ್ರೇಕ್ ಬೇಕಿತ್ತು. ಅದನ್ನು ಅವರು ತೆಗೆದುಕೊಂಡಿದ್ದಾರೆ.

ಯಶ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರೋ ಫೋಟೋಗಳು ವೈರಲ್ ಆಗಿವೆ. ಅವರು ಅಮೆರಿಕಕ್ಕೆ ತೆರಳಿದ್ದಾಗಿ ಅವರದಿ ಆಗಿದೆ. ಜುಲೈ 3ರಂದು ರಾಮಾಯಣ ಚಿತ್ರದ ಮೊದಲ ಗ್ಲಿಂಪ್ಸ್ ಬರಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

Leave a Reply

Your email address will not be published. Required fields are marked *