ಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ಯತ್ನಾಳ್ ಬಣದವರು ಹೈಕಮಾಂಡ್ ಮನವೊಲಿಸಿ ಮತ್ತೆ ಪಕ್ಷಕ್ಕೆ ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗಲೇ ಯತ್ನಾಳ್ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಯತ್ನಾಳ್ ಅವರು ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಟೊಯೋಟಾ ವೆಲ್‌ಫೈರ್ ಐಷಾರಾಮಿ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಕಾರಿಗೆ ಯತ್ನಾಳ್ ಅವರ ಪುತ್ರ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ. ಹೊಸ ಪಕ್ಷ ಕಟ್ಟುವ ಚಿಂತನೆಯಲ್ಲಿರುವ ಯತ್ನಾಳ್ ಅವರು ರಾಜ್ಯ ಪ್ರವಾಸ ಮಾಡುವುದಾಗಿ ಇತ್ತೀಚೆಗೆ ಹೇಳಿದ್ದರು. ಹಾಗಾಗಿ ರಾಜ್ಯ ಪ್ರವಾಸ ಮಾಡುವ ಕಾರಣಕ್ಕಾಗಿಯೇ ಈ ದುಬಾರಿ ಕಾರನ್ನು ಯತ್ನಾಳ್ ಅವರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಚ್ಚರಿ ವಿಚಾರ ಅಂದ್ರೆ ಇದೇ ಕಾರನ್ನು ಈ ಹಿಂದೆ ಬಿಜೆಪಿಯ ಯಡಿಯೂರಪ್ಪ ಅವರೂ ಖರೀದಿಸಿದ್ದರು. ಅವರು ಕೂಡ ರಾಜ್ಯ ಪ್ರವಾಸ ಮಾಡಲೆಂದೇ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ವೆಲ್‌ಫೈರ್ ಕಾರು ಖರೀದಿಸಿದ್ದರು. ಈಗ ಯತ್ನಾಳ್ ಅವರು ಕೂಡ ಅಂತದ್ದೇ ಕಾರನ್ನು ಖರೀದಿಸುವ ಮೂಲಕ ಬಿಎಸ್‌ವೈ ಕುಟುಂಬಕ್ಕೆ ಟಕ್ಕರ್ ಕೊಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.