ಯುವತಿ ಬೆ*ಲೆ ಓಡಾಟ, BBMP ಅಲರ್ಟ್ : ಅನಧಿಕೃತ ಪಿಜಿಗಳಿಗೆ ‘ಬೃಹತ್’ ಡೆಡ್ಲೈನ್

ಬೆಂಗಳೂರಿನಲ್ಲಿ ಮನೆ ನಿರ್ಮಿಸುವವರಿಗೆ BBMPಯಿಂದ ಭರ್ಜರಿ ಗುಡ್ ನ್ಯೂಸ್..

ರಾಜಧಾನಿ ಬೆಂಗಳೂರಲ್ಲಿ ಪಿಜಿಗಳ ಹಾವಳಿ ಮಿತಿಮೀರಿದೆ. ಇತ್ತೀಚಿಗಷ್ಟೇ HSR ಲೇಔಟ್ ಪಿಜಿಯೊಂದ್ರಲ್ಲಿ ಯುವತಿ ಬೆತ್ತಲಾಗಿ ಓಡಾಡಿದ ವೀಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವೀಡಿಯೋ ಹಳೆಯದ್ದಾದ್ರೂ ಸ್ಥಳೀಯರಿಗೆ ಇರಿಸುಮುರಿಸು ತರುತ್ತಿದೆ. ಈ ಕಾರಣಕ್ಕೆ ಬಿಬಿಎಂಪಿ ಅನಧಿಕೃತ ಪಿಜಿಗಳಿಗೆ ಮೂಗುದಾರ ಹಾಕಲು ಮುಂದಾಗಿದೆ.

40 ಫೀಟ್ ರಸ್ತೆಯ ಮುಂಭಾಗ ಹೊರತುಪಡಿಸಿ, ಸಮರ್ಪಕ ವ್ಯವಸ್ಥೆ ಇರದ, ಪರವಾನಿಗೆ ಪಡೆಯದ ಪಿಜಿಗಳಿಗೆ ಬೀಗ ಹಾಕಲು ಸಿದ್ಧತೆ ಮಾಡ್ಕೊಂಡಿದೆ. ಈಗಾಗಲೇ ಇಂಥ 200 ಪಿಜಿಗಳಿಗೆ ಅಂತಿಮ ನೋಟಿಸ್ ನೀಡಿ ಬಂದ್ ಮಾಡಿದೆ. ಈ ಕುರಿತು ನ್ಯೂಸ್ 18 ನಿರಂತರ ವರದಿ ಪ್ರಸಾರ ಮಾಡಿತ್ತು, ಇದರ ಬೆನ್ನಲ್ಲೇ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪರಿಶೀಲನೆ ವೇಳೆ ಸುಮಾರು ಪಿಜಿಗಳಿಗೆ ಲೈಸೆನ್ಸ್ ಇಲ್ಲದೆ ಇರೋದು ಪತ್ತೆಯಾಗಿದ್ದು, ಅವರಿಗೆ ಈಗಾಗಲೇ ಲೈಸೆನ್ಸ್ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಲು ಸಮಯ ನೀಡಿದ್ದೇವೆ. ನಿಯಮಗಳ ಅನ್ವಯ ಅವರಿಗೆ ಅನುಮತಿ ನೀಡಲು ಅಧಿಕಾರಿಗಳಿಗೆ ಕೂಡ ಅಗತ್ಯ ನಿರ್ದೇಶನ ನೀಡಿದ್ದೇವೆ. ನಿಯಮಗಳ ಅನ್ವಯ ಯಾವ ಪಿಜಿಗಳು ಇಲ್ಲ ಅವುಗಳನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, ಬಿಬಿಎಂಪಿ ಲೆಕ್ಕದಲ್ಲಿ 4456 ಪಿಜಿಗಳಿವೆ. ಇದರಲ್ಲಿ 1800 ಅನಧಿಕೃತ ಪಿಜಿಗಳಿವೆ. ಈ ಪಿಜಿಗಳು ಈವರೆಗೂ ಪರವಾನಿಗೆ ಪಡೆದಿಲ್ಲ. ಸಮರ್ಪಕ ವ್ಯವಸ್ಥೆಯನ್ನೂ ನೀಡಿಲ್ಲ. ಅದರಲ್ಲೂ ಮಹಿಳಾ ಪಿಜಿಗಳಲ್ಲಿ ಭದ್ರತೆ ಇಲ್ಲವಾಗಿದ್ದು, ಯುವತಿಯರಿಗೆ ಡ್ರೆಸ್ ಕೋಡ್ ಇಲ್ಲ. ಹೀಗಾಗಿ ಪಿಜಿಗಳಿಗೆ ಡ್ರೆಸ್ ಕೋಡ್ ಮಾರ್ಗಸೂಚಿ ಹೊರಡಿಸಲು ಚಿಂತನೆ ನಡೆಸಿದೆ. ಇನ್ನು ಡ್ರೆಸ್ ಕೋಡ್ ಬಗ್ಗೆ ಮಾರ್ಗಸೂಚಿ ಹೊರಡಿಸಿದರೆವ ಪಾಲಿಸ್ತೇವೆ ಅಂತಿದೆ ಪಿಜಿ ಮಾಲಿಕರ ಸಂಘ.

Leave a Reply

Your email address will not be published. Required fields are marked *