ಯುವಕರೆ ಎಚ್ಚರಾ || ಆನ್‌ಲೈನ್ ಡೇಟಿಂಗ್, ಪ್ರಣಯ : ವಂಚನೆ

ಯುವಕರೆ ಎಚ್ಚರಾ || ಆನ್ಲೈನ್ ಡೇಟಿಂಗ್, ಪ್ರಣಯ : ವಂಚನೆ

ಚನ್ನಬಸವ. ಎಂ ಕಿಟ್ಟದಾಳ್

ಜಗತ್ತಿನಲ್ಲಿ ಹಣ ಮಾಡಲು ಸಾಕಷ್ಟು ಮೂಲಗಳಿವೆ. ಆದರೇ ವೆಬ್‌ಸೈಟ್‌ಗಳ ಮೂಲಕ ಯುವಕರನ್ನು ವಂಚಿಸಿ ಹಣ ಮಾಡುವ ಹೊಸ ಯೋಜನೆಯೊಂದು ಪ್ರಚಲಿತದಲ್ಲಿದೆ.  ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ನಲ್ಲಿ ಮೋಸ ಹೋಗುವವರೇ ಹೆಚ್ಚಾಗಿದ್ದಾರೆ. ಒಂಟಿಯಾಗಿರುವ ಯುವಕರೇ ಇಂತಹ ವಂಚನೆಗಳಿಗೆ ಸಿಲುಕಿ ಸಾಕಷ್ಟು ಹಣವನ್ನು ವ್ಯಯ ಮಾಡುತಿದ್ದಾರೆ. ನಿಮಗೆ ಒಂಟಿತನ ಕಾಡುತ್ತಿದ್ದಿಯಾ ಆಗಿದ್ದರೆ ಈ ಆ್ಯಪ್‌ಗಳಲ್ಲಿ ನಿಮ್ಮ ಸಹಪಾಠಿಗಳನ್ನು ಹುಡುಕಿ ಎಂಬ ಆ್ಯಪ್‌ಗಳೇ ಹೆಚ್ಚಾಗಿವೆ. ಇಂತಹ ಗೇಮ್ ಆ್ಯಪ್‌ಗಳ ಮೂಲಕ ನಗ್ನ ದೃಶ್ಯಗಳನ್ನು ನೋಡಿ ಅದರಿಂದ ಆಚೆ ಬಾರದೆ ಯುವ ಜನತೆ ನರಳುತಿದ್ದಾರೆ. ಇದರ ಮೂಲಕ ಸಹಪಾಠಿಗಳನ್ನು ಹುಡುಕಲು ಹೋಗಿ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಅರೆ ಹುಚ್ಚರ ಸ್ಥಿತಿಗೆ ಬಂದು ತಲುಪಿದ್ದಾರೆ ಎಂಬುದು ತಿಳಿದುಬಂದಿರುವ ಮಾಹಿತಿ. ಹಣ ಕಳೆದುಕೊಂಡ ಮೂಲವನ್ನು ಮನೆಯವರ ಮತ್ತು ಸಮಬಂಧಿಕರ ಬಳಿ ಹೇಳಿಕೊಳ್ಳಲಾಗದೇ ಮಾನಸಿಕವಾಗಿ ಕುಗ್ಗುತಿದ್ದಾರೆ ಎಂದು ಪೋಷಕರು ಅಳನ್ನು ತೋಡಿಕೊಳ್ಳುತಿದ್ದಾರೆ.

ಸ್ವಾಮಿ ವಿವೇಕನಂನOದರ ಮಾತಿನಂತೆ ಸದೃಡ ಸಮಾಜ ನಿರ್ಮಾಣಕ್ಕೆ ಯುವಕರು ಅಗತ್ಯ ಎಂಬುದು. ಆದರೆ ಇಲ್ಲಿ ಯುವಕರು ಇಂತಹ ವಂಚನೆಯ ಆ್ಯಪ್‌ಗಳ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುತ್ತಿರುವುದನ್ನು ಕಂಡರೆ ದೇಶದ ಭವಿಷ್ಯಕ್ಕೆ ಕುತ್ತು ಬರುತ್ತದೆ ಎಂಬAತೆ ಭಾಸವಾಗುತ್ತಿದೆ. ಕೆಲ ನಿಮಿಷಗಳ ಮನರಂಜನೆಗಾಗಿ ಇಡೀ ಜೀವನವನ್ನು ಕಳೆದುಕೊಳ್ಳುವತ್ತ ಸಾಗುತ್ತಿದ್ದಾರೆ ಯುವಕರು. ಇಂತಹ ವಂಚನೆಗಳಿOದ ತಪ್ಪಿಸುವ ಕೆಲಸ ಸರ್ಕಾರದಿಂದ ಆಗಬೇಕು. ಯುವಕರನ್ನು ಸದೃಢರಾಗಿಸುವತ್ತ ಸರ್ಕಾರದ ಚಿತ್ತವಿರಬೇಕು ಎಂಬುದು ಹಿರಿಯರ ಮಾತುಗಳು. ನಕಲಿ ಆ್ಯಪ್‌ಗಳನ್ನು ಪರಿಶೀಲಿಸಿ ಯುವಕರ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಪ್ಪಿಸಲಿ ಎಂಬುದು ಜ್ಞಾನವಂತರು ಮಹದಾಸೆಯಾಗಿದೆ.

ಆನ್ಲೈನ್ ಹಗರಣವು ಮೋಸದಿಂದ ಹಣವನ್ನು ಪಡೆಯಲಿಕ್ಕಾಗಿ ನಿಮ್ಮನ್ನು ಬಲೆಗೆ ಬೀಳಿಸುವ  ಒಂದು ಪ್ರಯತ್ನವಾಗಿದೆ. ಅನೇಕ ರೀತಿಯ ಆನ್ಲೈನ್ ಸ್ಕ್ಯಾಮ್ಗಳಿವೆ; ನಕಲಿ ಹೆಸರುಗಳು, ನಕಲಿ ಫೋಟೋಗಳು, ನಕಲಿ ಇ-ಮೇಲ್ಗಳು, ಖೋಟಾ ದಾಖಲೆಗಳು, ನಕಲಿ ಕೆಲಸದ ಕೊಡುಗೆಗಳು ಮತ್ತು ಈ ರೀತಿಯ ಹತ್ತು ಹಲವುಗಳಿಂದ ಹಣವನ್ನು ಪಡೆಯುವುದು ಇದರಲ್ಲಿ ಸೇರಿದೆ.

ಸಾಮಾನ್ಯವಾಗಿ, ಆನ್ಲೈನ್ ಬ್ಯಾಂಕಿAಗ್ ವಿವರಗಳು, ಕ್ರೆಡಿಟ್ ಕಾರ್ಡ್ ವಿವರಗಳು ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು  ನಕಲಿ ಇ-ಮೇಲ್ಗಳನ್ನು ಕಳುಹಿಸುವ ಮೂಲಕ ಇದನ್ನು  ನಡೆಸಲಾಗುತ್ತದೆ. ನೀವು ಆನ್ಲೈನ್ ಹರಾಜಿನಲ್ಲಿ ಭಾಗವಹಿಸಿದಾಗಲೆಲ್ಲಾ ಲಾಟರಿ ಕಂಪನಿಗಳು ನಕಲಿ ನೋಟಿಸನ್ನು ಕಳಿಸುತ್ತವೆ ಮತ್ತು ನೀವು ನಕಲಿ ಉಡುಗೊರೆಗಳಿಗಾಗಿ ಈ ಮೇಲ್ ಅನ್ನು ಸ್ವೀಕರಿಸುತ್ತೀರಿ.  ಸೈಬರ್ ಅಪರಾಧಿಗಳು ಮುಗ್ಧ ಮತ್ತು ಅರಿವಿಲ್ಲದ  ಜನರಿಗೆ ಮೋಸಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತಿದ್ದಾರೆ.

ನಕಲಿ ವೆಬ್‌ಸೈಟ್‌ಗಳಿಂದ ಮೋಸ

ಇದು ಆನ್ಲೈನ್ ಡೇಟಿಂಗ್ ವೆಬ್‌ಸೈಟ್‌ಗಳ ಮೂಲಕ ನಡೆಯುತ್ತದೆ, ಆದರೆ ಸಂಪರ್ಕವನ್ನು ಮಾಡಲು ಸ್ಕ್ಯಾಮಾರ್ ಗಳು  ಸಾಮಾಜಿಕ ಮಾಧ್ಯಮ ಅಥವಾ ಇಮೇಲ್ಗಳನ್ನೂ ಸಹ ಬಳಸಬಹುದು. ಅವರ  ವಿಕ್ಟಿಮ್ (ಬಲಿಪಶು) ಗಳಿಗೆ ಮೊದಲ ಪರಿಚಯವಾಗಿ ಕರೆ ಮಾಡುವುದೂ ಸಹ ಎಲ್ಲರಿಗೂ  ತಿಳಿದಿರುವ ವಿಷಯವಾಗಿದೆ. ಈ ವಂಚನೆಗಳನ್ನು ‘ಕ್ಯಾಟ್ ಫಿಶಿಂಗ್’ ಎಂದು ಕೂಡ ಕರೆಯಲಾಗುತ್ತದೆ. ಸ್ಕ್ಯಾಮಾರ್ ಗಳು ವಿಶಿಷ್ಟವಾಗಿ ನಿಮ್ಮನ್ನು  ಆಮಿಷಕ್ಕೆ ಒಳಮಾಡಲು ನಕಲಿ ಆನ್ಲೈನ್ ಪ್ರೊಫೈಲಗಳನ್ನು ವಿನ್ಯಾಸಗೊಳಿಸುತ್ತಾರೆ. ಅವರು ಕಾಲ್ಪನಿಕ ಹೆಸರನ್ನು ಬಳಸಬಹುದು ಅಥವಾ ಮಿಲಿಟರಿ ಸಿಬ್ಬಂದಿ, ನೆರವು ಕೆಲಸಗಾರರು ಅಥವಾ ವಿದೇಶದಲ್ಲಿ ಕೆಲಸಮಾಡುವ  ವೃತ್ತಿಪರರಂತಹ ವಿಶ್ವಾಸಾರ್ಹ ಜನರ ಗುರುತನ್ನು ತಪ್ಪಾಗಿ ಬಳಸಬಹುದು. ಕಡಿಮೆ ಸಮಯದಲ್ಲಿ ನಿಮ್ಮ ಬಳಿ ಬಲವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ನಿಮ್ಮ ಆಸಕ್ತಿ ಮತ್ತು ವಿಶ್ವಾಸವನ್ನು ಪಡೆಯಲು ಅವರು ಬಹಳ ದೂರ ಹೋಗುತ್ತಾರೆ, ಉದಾಹರಣೆಗೆ ಪ್ರೀತಿಯ ಮಾತುಗಳನ್ನು ಸುರಿಸುವುದು, ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ನಿಮಗೆ ಉಡುಗೊರೆಗಳನ್ನು ಸಹ ಕಳುಹಿಸುವುದು.

ಒಮ್ಮೆ ಅವರು ನಿಮ್ಮ ನಂಬಿಕೆಯನ್ನು ಪಡೆದು ಮತ್ತು ನಿಮ್ಮ ಇಚ್ಚಾಶಕ್ತಿ ಕಡಿಮೆಯಾಗ  ಹಣ, ಉಡುಗೊರೆಗಳು ಅಥವಾ ನಿಮ್ಮ ಬ್ಯಾಂಕಿAಗ್ / ಕ್ರೆಡಿಟ್ ಕಾರ್ಡ್ ವಿವರಗಳಿಗಾಗಿ ಅವರು ನಿಮ್ಮನ್ನು (ಸೂಕ್ಷ್ಮವಾಗಿ ಅಥವಾ ನೇರವಾಗಿ) ಕೇಳುತ್ತಾರೆ. ಅವರು  ಬಹುಶಃ ಹೆಚ್ಚು ನಿಕಟವಾಗಿರುವ  ನಿಮ್ಮ ಫೋಟೋ  ಅಥವಾ ವೀಡಿಯೊಗಳನ್ನು ಕಳುಹಿಸಲು ಕೇಳಬಹುದು. ಆದ್ದರಿಂದು ಯು ಸಮೂಹ ಇಂತಹ ಕೆಟ್ಟ ಆ್ಯಪ್, ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳಿಂದ ದೂರ ಉಳಿಯುವುದು ಒಳ್ಳೆಯದು. ಸರ್ಕಾರವೂ ಕೂಡ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂಬುದು ನಾಗರೀಕರ ಮತ್ತು ಪೋಷಕರ ಅಳಲುಕೂಡ ಆಗಿದೆ.

Leave a Reply

Your email address will not be published. Required fields are marked *