ಬೆಂಗಳೂರು || ವಾಹನದ ಮೊತ್ತಕ್ಕಿಂತ ದಂಡವೇ ಹೆಚ್ಚಾಗಿದೆ || 311 ಬಾರಿ ಸಂಚಾರ ನಿಯಮ ಉಲ್ಲಂಘನೆ: 1.61 ಲಕ್ಷ ರೂ ದಂಡ

ಬೆಂಗಳೂರು || ವಾಹನದ ಮೊತ್ತಕ್ಕಿಂತ ದಂಡವೇ ಹೆಚ್ಚಾಗಿದೆ || 311 ಬಾರಿ ಸಂಚಾರ ನಿಯಮ ಉಲ್ಲಂಘನೆ: 1.61 ಲಕ್ಷ ರೂ ದಂಡ

ಬೆಂಗಳೂರು: ಈ ದ್ವಿಚಕ್ರ ವಾಹನದ ಮೇಲಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕೇಳಿದರೆ ದಂಗಾಗುತ್ತೀರಿ. ಏಕೆಂದರೆ ಈ ವಾಹನದ ಮೇಲೆ ಎರಡು ವರ್ಷಗಳಲ್ಲಿ ಬರೋಬ್ಬರಿ 311 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ದಂಡದ ಪ್ರಮಾಣ 1.61 ಲಕ್ಷ..!

ಹೌದು… ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸುವಂತೆ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೆಲ ಸವಾರರು ಕ್ಯಾರೇ ಎನ್ನದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಅಂತಹವರ ವಿರುದ್ಧ ಸಂಚಾರ ಪೊಲೀಸರು, ಸಿಗ್ನಲ್ ಬಳಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿಯೇ ದಂಡ ವಿಧಿಸುತ್ತಿದ್ದಾರೆ. ಆದರೆ, ನಗರದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. 2023ರ ಮಾರ್ಚ್ನಿಂದ ಈವರೆಗೂ 311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.

ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆೆಯ ದ್ವಿಚಕ್ರ ವಾಹನ ಸವಾರ ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೇ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಹೆಲ್ಮೆೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರ ನಿಯಮಗಳನ್ನು ಇವರು ಪಾಲಿಸಿಲ್ಲ. ಹೀಗೆ ಈವರೆಗೆ 311 ಬಾರಿ ನಿಯಮ ಉಲ್ಲಂಘಿಸಿದ್ದು, 1.61 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಕಳೆದ ವರ್ಷ 1,05,500 ರೂ. ಇದ್ದ ದಂಡದ ಮೊತ್ತ, ಈ ವರ್ಷ 1,61,500 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆೆ ಸವಾರನಿಗೆ ಹಲವು ಬಾರಿ ನೋಟಿಸ್ ಕೊಡ ನೀಡಲಾಗಿದೆ. ಆದರೂ ಕ್ಯಾರೆ ಅಂದಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *