ಮಾರಮ್ಮ &ಸಲ್ಲಾಪುರಮ್ಮ ದೇವಾಲಯದಲ್ಲಿ ಶ್ರೀ ಮಹಾಚಂಡಿಕಾ ಹೋಮ

ಮಾರಮ್ಮ &ಸಲ್ಲಾಪುರಮ್ಮ ದೇವಾಲಯದಲ್ಲಿ ಶ್ರೀ ಮಹಾಚಂಡಿಕಾ ಹೋಮ

ಹೊಸಕೋಟೆ ಕಮ್ಮಾವಾರಿ ಪೇಟೆಯ ಶ್ರೀ ಮಾರಮ್ಮ ಮತ್ತು ಸಲ್ಲಾಪುರಮ್ಮ ದೇವಾಲಯದಲ್ಲಿ ಶ್ರೀ ಮಹಾಚಂಡಿಕಾ ಹೋಮ ಮಹೋತ್ಸವ.

ಹೊಸಕೋಟೆ ನಗರದ ಕಮ್ಮಾವಾರಿ ಪೇಟೆಯಲ್ಲಿ ಇರುವ ಶ್ರೀ ಮಾರಮ್ಮ ಮತ್ತು ಸಲ್ಲಾಪುರಮ್ಮ ದೇವಾಲಯದಲ್ಲಿ ೨ ದಿನಗಳ ಕಾಲ ವಿಶೇಷ ಪೂಜೆ ಹಾಗೂ ಹೋಮ ನೆರವೇರಿತು. ಶ್ರೀ ನಾರಾಯಣಗೌಡರ ಕುಟುಂಬದವರಿಂದ ನಡೆದ ಪೂಜಾ ಕರ್ಯಕ್ರಮದಲ್ಲಿ ಮಾಜಿ ಸಂಸದರಾದ ಬಿಎನ್ ಬಚ್ಚೇಗೌಡ ಹಾಗೂ ಬಿವಿ ಬೈರೆಗೌಡ ಸೇರಿದಂತೆ ಅನೇಕರು ಪೂಜೆ ಹಾಗೂ ಹೋಮ ಕರ್ಯಕ್ರಮದಲ್ಲಿ ಭಾಗವಹಿಸಿದರು.

ಸೋಮವಾರ ಸಂಜೆ ೬.೩೦ ರಿಂದ ಮಂಗಳವಾರ ತನಕ ಪೂಜಾ ಕರ್ಯಕ್ರಮ ನೆರವೇರಿತು. ಬೆಳಿಗ್ಗೆ ೬.೩೦ ರಿಂದ ಗಣಪತಿ ಹೋಮ, ಅಮ್ಮನವರಿಗೆ ಅಭಿಕ್ಷೆಕ ಅಲಂಕಾರ, ಬೆಳಿಗ್ಗೆ ೭.೩೫ ರಿಂದ ಪ್ರಾರಂಭವಾದ ಚಂಡಿಕಾ ಹೋಮ ಬೆಳಿಗ್ಗೆ ೧೧.೩೫ಕ್ಕೆ ಪರ್ಣಯುತಿ ನಡೆಯಿತು. ನಂತರ ಮಹಾಮಂಗಳಾರತಿ ನೆರವೇರಿಸಿ ವಿಶೇಷ ರೀತಿಯಲ್ಲಿ ಅನ್ನ ಸಂರ್ಪಣೆ ನೆರವೇರಿತು. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಮಹಾ ಚಂಡಿಕಾಯಾಗದಿಂದ ಎಲ್ಲರಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇಂದ ಇಂದು ನಾರಾಯಣಗೌಡರ ಕುಟುಂಬದವರಿಂದ ಹೋಮ ಹಮ್ಮಿಕೊಂಡಿದ್ದರು.

ಬಿಎಂರ್ಡಿಎ ಸದಸ್ಯರಾದ ಹೆಚ್ ಎಂ ಸುಬ್ಬರಾಜು ಅವರು, ದೇವಸ್ಥಾನಗಳಲ್ಲಿ ಈ ರೀತಿಯಾಗಿ ಎಲ್ಲಾರು ಒಮ್ಮತದಿಂದ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಕೃಪೆ ಅನುಗ್ರಹಿಸುತ್ತದೆ.

Leave a Reply

Your email address will not be published. Required fields are marked *