ಚುನಾವಣೆಯಲ್ಲಿ ಪವನ್ ಕಲ್ಯಾಣ್‌ಗೆ ಗೆಲುವು : ಹೆಸರು ಬದಲಿಸಿಕೊಂಡ YSRCP ನಾಯಕ

ಅಮರಾವತಿ: ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಸೋಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ನೀಡಿದ ಮಾತಿಗೆ ತಕ್ಕಂತೆ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮುದ್ರಗಡ ಪದ್ಮನಾಭಂ ಅವರು ಅಧಿಕೃತವಾಗಿ ತಮ್ಮ ಹೆಸರನ್ನು ‘ಪದ್ಮನಾಭ ರೆಡ್ಡಿ’ ಎಂದು ಬದಲಾಯಿಸಿಕೊಂಡಿದ್ದಾರೆ

ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಗೆಲುವು ಸಾಧಿಸಿದ ನಂತರ ಪದ್ಮನಾಭಂ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಚುನಾವಣಾ ಪೂರ್ವದಲ್ಲಿ ಪವನ್ ಕಲ್ಯಾಣ್ ಅವರನ್ನು ಸೋಲಿಸುವುದಾಗಿ ವೈಎಸ್‌ಆರ್‌ಸಿಪಿ ನಾಯಕ ಸವಾಲು ಹಾಕಿದ್ದರು

ನನ್ನ ಹೆಸರನ್ನು ಬದಲಾಯಿಸಿಕೊಳ್ಳಲು ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ ಸ್ವಂತ ಇಚ್ಛೆಯಿಂದ ಬದಲಾಯಿಸಿದ್ದೇನೆ ಎಂದು ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಜನಸೇನಾ ಮುಖ್ಯಸ್ಥರ ಅಭಿಮಾನಿಗಳು ಹಾಗೂ ಅನುಯಾಯಿಗಳು ನಿಂದನೆ ಮಾಡುತ್ತಿದ್ದಾರೆ ಎಂದು ದೂರಿದರು

ರೆಡ್ಡಿ ಅವರು ಕಾಪು ಸಮುದಾಯದ ಪ್ರಮುಖ ನಾಯಕರಾಗಿದ್ದು, ಕಾಪು ಮೀಸಲಾತಿಗಾಗಿ ಒತ್ತಾಯಿಸಿದ್ದರು. ಅವರು ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ವೈಎಸ್‌ಆರ್‌ಸಿಪಿಗೆ ಸೇರಿದರು

Leave a Reply

Your email address will not be published. Required fields are marked *