ಬೆಂಗಳೂರು ದಕ್ಷಿಣ ವಲಯದಲ್ಲಿ ಪ್ರವಾಹ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ; 24/7 ನಿಯಂತ್ರಣ ಕೊಠಡಿ ಸ್ಥಾಪನೆ
ಬೆಂಗಳೂರು: ಮುಂಬರುವ ಮುಂಗಾರಿನಲ್ಲಿ ಸುಗಮ ನಗರಾಡಳಿತ ಮತ್ತು ಪ್ರವಾಹ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ವಿಪತ್ತು ನಿರ್ವಹಣಾ ತಂಡದೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಪರ ಆಯುಕ್ತರಾದ (ಅಭಿವೃದ್ಧಿ) ಡಾ. ನವೀನ್ ಕುಮಾರ್ ರಾಜು ರವರು ವಿವಿಧ ಇಲಾಖೆಗಳ ಅಭಿಯಂತರರೊಂದಿಗೆ ಮುಂಗಾರು ಪೂರ್ವ ಸಿದ್ಧತಾ ಸಭೆ ನಡೆಸಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಮೂಲಸೌಕರ್ಯ ಕಾಮಗಾರಿ : ಪಾಲಿಕೆ ವ್ಯಾಪ್ತಿಯಲ್ಲಿ ಸದಾ ನೀರು ನಿಲ್ಲುವ ಮತ್ತು ಒಳಚರಂಡಿ ಸಮಸ್ಯೆಯಿರುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿದರು. ಜಯನಗರ ವಿಭಾಗ, ರಾಂಕಾ ಕಾಲೋನಿ, ಎಚ್‌ಎಸ್‌ಆರ್ ಲೇಔಟ್, ಐ.ಎ.ಎಸ್ ಕಾಲೋನಿ, ಸತ್ಯಸಾಯಿ ಲೇಔಟ್ ಮತ್ತು ಅನುಗ್ರಹ ಲೇಔಟ್‌ಗಳಲ್ಲಿ ತಕ್ಷಣದ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು. ಇದರೊಂದಿಗೆ, ಜೆ.ಪಿ. ನಗರದ ಸಿಂದೂರ ಕನ್ವೆನ್ಷನ್ ಹಾಲ್ ಹತ್ತಿರ, ಸಿಲ್ಕ್ ಬೋರ್ಡ್ ಜಂಕ್ಷನ್, ಅರವಿಂದ್ ಲೇಔಟ್, ಲಕ್ಷ್ಮಿ ಲೇಔಟ್, ಸಾರಕ್ಕಿ ಸಿಗ್ನಲ್ ಮತ್ತು ಚುಂಚಘಟ್ಟ ಕೆರೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಮತ್ತೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಈ ವೇಳೆ ಬಿಡಬ್ಲ್ಯೂಎಸ್ಎಸ್‌ಬಿ ಹಾಗೂ ಬೆಸ್ಕಾಂನ ಇಇ, ಎಇಇ ಮತ್ತು ವಿಪತ್ತು ನಿರ್ವಹಣಾ ಸಮಾಲೋಚಕರಾದ ಡಾ. ವಿನುತಾ ರವರು ಉಪಸ್ಥಿತರಿದ್ದರು.
For More Updates Join our WhatsApp Group :




