NSQ ಹಾಗೂ NDPS ಔಷಧಗಳ ಮೇಲ್ವಿಚಾರಣೆಗೆ ನೂತನ ಡಿಜಿಟಲ್ ವ್ಯವಸ್ಥೆ ಜಾರಿ.!
ಬೆಂಗಳೂರು: ಬೆಂಗಳೂರಿನ ಆರೋಗ್ಯಸೌಧದಲ್ಲಿNSQ ಔಷಧಗಳನ್ನು ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಮತ್ತು NDPS ಔಷಧಗಳ ದುರುಪಯೋಗ ತಡೆಯಲು ನೂತನ ಕಣ್ಗಾವಲು ವ್ಯವಸ್ಥೆಯಾಗಿ ಪೋರ್ಟಲ್ ಗೆ ಚಾಲನೆ ನೀಡಿ ದಿನೇಶ್ ಗುಂಡೂರಾವ್ ಮಾತನಾಡಿದರು
ಔಷಧಗಳ ಗುಣನಿಯಂತ್ರಣ ಬಹಳ ಮುಖ್ಯ. ನಿಗದಿತ ಗುಣಮಟ್ಟವಿಲ್ಲದ ಔಷದ ಸರಬರಾಜು ಆಗಿದ್ದರೆ ಪತ್ತೆ ಹಚ್ಚುವಿದು ಕಷ್ಟವಾಗಿತ್ತು. ಒಂದು ವರ್ಷದ ಹಿಂದೆ ಕೇಂದ್ರ ಸಚಿವರಿಗೂ ಪತ್ರ ಬರೆದು ವಿನಂತಿಸಿದ್ದೆ. ಈ ಬಗ್ಗೆ ಒಂದು ನಿಯಮ ಮಾಡಬೇಕು ಎಂದು ಕೇಳಿಕೊಳ್ಳಲಾಗಿತ್ತು. ನಂತರ ರಾಜ್ಯಮಟ್ಟದಲ್ಲಿಯೇ ಈ ಕುರಿತು ತೀರ್ಮಾನ ಮಾಡಿ ಈ ವ್ಯವಸ್ಥೆ ತರಲಾಗುತ್ತಿದೆ. ಕಳೆದ ವರ್ಷ ಈ ಸಹಿ ಮಾಡುವ ವ್ಯವಸ್ಥೆ ತಂದಿದ್ದೇವೆ. ಅದರಿಂದ ತಕ್ಷಣವೇ ಮಾರುಕಟ್ಟೆಯ ಮಾಹಿತಿ ಸಿಗುತ್ತಿತ್ತು. 1.83 ರೂ ಮೌಲ್ಯದ ಕಳೆಪೆ ಔಷಧ ಹಿಂಪಡೆಯಲಾಗಿತ್ತು. ಔಷಧದ ಗುಣಮಟ್ಟ ಕಳಪರ ಎಂದು ತಿಳಿದ ತಕ್ಷಣ ಈ ಪೋರ್ಟಲ್ ನಲ್ಲಿ ದಾಖಲಿಸುತ್ತೇವೆ. ತಕ್ಷಣ ಎಲ್ಲ ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾಹಿತಿ ಹೋಗಿ ಮುಂದೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. 15 ಸಾವಿರ ಹೋಲ್ ಸೇಲ್ ಇದರಲ್ಲಿ ನೋಂದಣಿ ಆಗಿದ್ದಾರೆ. ರಿಯಲ್ ಸಮಯದಲ್ಲಿ ಪತ್ತೆಹಚ್ಚಲು ಸಾಧ್ಯ. ನಮ್ಮ ದೇಶದಲ್ಲಿ ಮೊದಲ ಬಾರಿಗೆ ಇದನ್ನು ತರಲಾಗಿದೆ.

NDPS ಔಷಧಗಳ ಕುರಿತು ನಿಗಾ: ಮೊದಲು ಮಾರಾಟ ಮಾಡಿದಾಗ ಮಾಹಿತಿ ಇರಬೇಕಾಗಿತ್ತು ಮತ್ತು ಸಲಹಾ ಚೀಟಿ ಇರಬೇಕಾಗಿತ್ತು. ಈಗ NDPS ಮಾರಾಟ ಮಾಡಿದರೆ ಈ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಪದೇ ಪದೇ ಸಲಹಾ ಚೀಟಿ ಒಬ್ಬರೇ ನೀಡಿದರೆ ಪರೀಕ್ಷೆ ನಡೆಸಲು ಇದು ಸಹಾಯಕ.ಆಹಾರ ಸುರಕ್ಷತಾ ಮತ್ತು ಔಷಧ ನಿಯಂತ್ರಣ ಆಯುಕ್ತ ಶ್ರೀನಿವಾಸ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
For More Updates Join our WhatsApp Group :




