ಬೆಂಗಳೂರು || ಸರ್ಕಾರಿ ಒಡೆತನದ ದುಬೈ ಮಾದರಿ ಬಹುಮಹಡಿ ಪಾರ್ಕಿಂಗ್ : ದೇಶದಲ್ಲೇ ಮೊದಲು

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ ಕೊನೆಗೂ ಉದ್ಘಾಟನೆಯಾಗಿದೆ.

ಇಂದು ಡಿಸಿಎಂ ಡಿಕೆ ಶಿವಕುಮಾರ್ ಫ್ರೀಡಂ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ ಅನ್ನು ಲೋಕಾರ್ಪಣೆ ಮಾಡಿದರು.

ಫ್ರೀಡಂ ಪಾರ್ಕ್ ಬಳಿ ವಿಶಾಲವಾಗಿದ ಜಾಗದಲ್ಲಿ ಹೈಟೆಕ್​​ ಸೌಲಭ್ಯದೊಂದಿಗೆ. ಪಕ್ಕಾ ಪ್ಲಾನ್​​​ ಮಾಡಿ ವಾಹನ ಪಾರ್ಕಿಂಗ್​ ಮಾಡಲು ಬಿಬಿಎಂಪಿ ನಿರ್ಮಾಣ ಮಾಡಿತ್ತು

BBMP ನಗರೋತ್ಥಾನ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ. ಎರಡು ವರ್ಷದ ಹಿಂದೆ ಕಾಮಗಾರಿ ಕಂಪ್ಲಿಟ್​ ಆಗಿದೆ. ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ.

Leave a Reply

Your email address will not be published. Required fields are marked *