‘ಕವಲುದಾರಿ’ ಬಳಿಕ ವಿಶೇಷ ತನಿಖಾಧಿಕಾರಿಯಾಗಿ ರಿಷಿ

ದಿ. ನಟ ಪುನೀತ್ ರಾಜ್​​​ಕುಮಾರ್‌ ನಿರ್ಮಾಣದ ‘ಕವಲುದಾರಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ರಿಷಿ ಕಳೆದ ದಿನ ತಮ್ಮ 36ನೇ ಜನ್ಮದಿನ ಆಚರಿಸಿಕೊಂಡರು. ಕನ್ನಡ ಮಾತ್ರವಲ್ಲದೇ ಶೈತಾನ್‌ ಎಂಬ ವೆಬ್ ಸೀರಿಸ್ ಮೂಲಕ ತೆಲುಗಿನಲ್ಲೂ ಮನೆ ಮಾತಾಗಿರುವ ನಟ ರಿಷಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದರು. ರಿಷಿ ನಾಯಕರಾಗಿ ನಟಿಸಿರುವ ಮುಂದಿನ ಬಹು ನಿರೀಕ್ಷಿತ ಚಿತ್ರ ‘ರುದ್ರ ಗರುಡ ಪುರಾಣ’. ನಾಯಕ ನಟನ ಜನ್ಮದಿನ ಹಿನ್ನೆಲೆ, ಚಿತ್ರತಂಡ ಪೋಸ್ಟರ್ ರಿಲೀಸ್​ ಮಾಡಿ ಸ್ಪೆಷಲ್​ ಆಗಿ ಬರ್ತ್ ಡೇ ವಿಶ್ ಮಾಡಿದೆ.

ಬಹುನಿರೀಕ್ಷಿತ ‘ರುದ್ರ ಗರುಡ ಪುರಾಣ’ ಚಿತ್ರದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕವಲುದಾರಿ ಚಿತ್ರದ ಬಳಿಕ ತನಿಖಾಧಿಕಾರಿಯಾಗಿ ನಟಿಸಿರುವ ಚಿತ್ರವಿದು. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅನಾವರಣಗೊಳಿಸಿದ್ದರು. ಚಿತ್ರದ ಫಸ್ಟ್ ಲುಕ್​​ಗೆ ರಿಷಿ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಬಿಡುಗಡೆ ಆಗಿರುವ ಪೋಸ್ಟರ್ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ಉಳಿದಂತೆ, ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರಿದ್ವಿ ತಾರಾ ಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *