KFC ರೆಸ್ಟೋರೆಂಟ್​ ಲೈಸೆನ್ಸ್​ ತಾತ್ಕಾಲಿಕವಾಗಿ ರದ್ದು

ತಮಿಳುನಾಡು : ಇಲ್ಲಿನ ವೆಲವನ್​ ಹೈಪರ್​ ಮಾರ್ಕೆಟ್​ ಕಾಂಪ್ಲೆಕ್ಸ್​ನಲ್ಲಿರುವ ಕೆಎಫ್​ಸಿ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್​ ದಾಳಿ ನಡೆಸಿದರು. ಈ ವೇಳೆ ನಿಷೇಧಿತ ಮೆಗ್ನಿಶಿಯಂ ಸಿಲಿಕೇಟ್​ ಸಿಂಥೆಟಿಕ್ ಅನ್ನು ಎಣ್ಣೆ ಶುದ್ದಗೊಳಿಸಲು ಬಳಸುತ್ತಿರುವುದು ಗೊತ್ತಾಗಿದೆ. ಈ ​ಹಿನ್ನೆಲೆಯಲ್ಲಿ ಕೆಎಫ್‌ಸಿಯ ಲೈಸೆನ್ಸ್​ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.

ಪರೀಕ್ಷೆಯಲ್ಲಿ ಕರಿದ ಎಣ್ಣೆ ಶುದ್ಧೀಕರಣಕ್ಕೆ ಮೆಗ್ನಿಷಿಯಂ ಸಿಲಿಕೇಟ್​ ಸಿಂಥೆಟಿಕ್​ ಎಂಬ ಆಹಾರ ಸಂಯೋಜಕ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಈ ಆಹಾರ ಸಂಯೋಜಕವನ್ನು ಉಪಯೋಗಿಸಲು ಅನುಮತಿ ಇಲ್ಲ.

ದಾಳಿಯ ವೇಳೆ 18 ಕೆಜಿ ಮೆಗ್ನಿಶಿಯಂ ಸಿಲಿಕೇಟ್​ ಸಿಂಥೆಟಿಕ್​ ಹಾಗೂ 45 ಲೀಟರ್​ ಹಳೆಯ ಶುದ್ಧಿಕರಿಸಿದ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ. 12 ಗಂಟೆಗಳ ಕಾಲ ಬಳಕೆ ಮಾಡದಂತಹ 56 ಕೆಜಿ ಚಿಕನ್​ ವಶಕ್ಕೆ ಪಡೆದು, ನಾಶಪಡಿಸಲಾಗಿದೆ.

ತನಿಖೆಯಲ್ಲಿ ಕೆಎಫ್​ಸಿ ರೆಸ್ಟೋರೆಂಟ್​​ ಲೈಸೆನ್ಸ್‌ನಲ್ಲೂ ಅಕ್ರಮ ನಡೆದಿರುವುದು ಕಂಡುಬಂದಿದೆ. ಸ್ಟಾಕ್ ರಿಜಿಸ್ಟ್ರರ್‌ನಲ್ಲಿ ನಮೂದಿಸದೆಯೇ ಮೆಗ್ನೀಸಿಯಮ್ ಸಿಲಿಕೇಟ್ ಸಿಂಥೆಟಿಕ್ ಆಹಾರ ಸೇರ್ಪಡೆಗಳ ಬಳಕೆಯ ಬಗ್ಗೆ ತನಿಖೆ ನಡೆಸಲಾಗುವುದು. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಳೆಯ ಎಣ್ಣೆಯನ್ನು ಶುದ್ಧೀಕರಿಸಲು ಇವುಗಳನ್ನು ಅನುಮತಿಯಿಲ್ಲದೆ ಬಳಸುವುದನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಈ ಪ್ರಕರಣದಲ್ಲಿ ಆಹಾರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ರೆಸ್ಟೋರೆಂಟ್​ ಬಂದ್​ ಮಾಡಲಾಗಿದೆ. ಮುಂದಿನ ಆದೇಶದವರೆಗೆ ರೆಸ್ಟೋರೆಂಟ್​ ತೆರೆಯದಂತೆ ಸೂಚನೆ ನೀಡಲಾಗಿದೆ. ಮೆಗ್ನಿಶಿಯಂ ಸಿಲಿಕೇಟ್​ ಸಿಂಥೆಟಿಕ್​ ಮತ್ತು ಶುದ್ಧೀಕರಣ ಮಾಡಿರುವ ಹಳೆಯ ಕರಿದ ಎಣ್ಣೆಯ ಮಾದರಿಯನ್ನು ಪರೀಕ್ಷೆಗೆ ಕಳಿಹಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *