ತುಮಕೂರು:- ಭೀಮ ಚಿತ್ರದ ರಿಲೀಸ್ ಹಿನ್ನೆಲೆಯಲ್ಲಿ ನಗರದ ಶ್ರೀ ಸಿದ್ಧಗಂಗಾ ಮಠಕ್ಕೆ ನಟ ದುನಿಯಾ ವಿಜಯ್ ಭೇಟಿ ಮಾಡಿ ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದುನಿಯಾ ವಿಜಯ್, ಆಗಸ್ಟ್ 9ಕ್ಕೆ ಭೀಮ ಚಿತ್ರ ಬಿಡುಗಡೆಯಾಗುತ್ತಿದೆ. ಹಾಗಾಗಿ ಆಶೀರ್ವಾದ ಪಡೆಯಲು ಶ್ರೀ ಮಠಕ್ಕೆ ಬಂದಿದ್ದೇನೆ ಎಂದರು.
ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕು ಎಂಬ ವಿಷಯನೇ ಭೀಮ ಸಿನಿಮಾದ ತಿರಳಾಗಿದೆ ಎಂದು ಚಿತ್ರದ ಕಥಾಹಂದರ ಬಗ್ಗೆ ಮಾಹಿತಿ ನೀಡಿದರು.
ಇಲ್ಲಿ ಈ ಪವಿತ್ರವಾದ ಶ್ರೀಸಿದ್ಧಗಂಗಾ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಉನ್ನತ ಸ್ಥಾನದಲ್ಲಿರುವವರೆಲ್ಲರೂ ಇಲ್ಲಿಂದಲೇ ಹೋಗಿರೋದು. ಹಂಗಾಗಿ ನಾನು ಪ್ರತಿ ಬಾರಿಯೂ ಸಿನಿಮಾ ರಿಲೀಸ್ ಗೆ ಮುನ್ನ ಬಂದು ಪೂಜೆ ಮಾಡಿಕೊಂಡು ಹೋಗುತ್ತೇನೆ. ಇಲ್ಲಿ ಬಂದು ಹೋದರೆ ಒಂದು ಶಕ್ತಿ ಬಂದಂತಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಹೊಸ ರೀತಿಯ ಆತಂಕಕಾರಿ ಡ್ರಗ್ಸ್ ಪತ್ತೆ: ತುಮಕೂರು
ಬೆಂಗಳೂರಿನಲ್ಲಿ ಅಪಾಯಕಾರಿಯಾದ ಡ್ರಗ್ಸ್ ಪತ್ತೆಯಾಗಿದ್ದು ಅದು ಎಲ್ಲೆಡೆ ವ್ಯಾಪಿಸುವ ಆತಂಕವಿದೆ. ಭೀಮ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಮಾತು ಕಡೆ ಮಾಡುವ ಸಂದರ್ಭದಲ್ಲಿ ಈ ವಿಷಯವನ್ನು ಸ್ವಾಮೀಜಿಯ ಬಳಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದರು.
ಈ ಡ್ರಗ್ ಅನ್ನು ನಾನು ಕಂಡುಹಿಡಿದಿದ್ದೇನೆ. ಅದು ಕರ್ನಾಟಕದದ್ಯಂತ ವ್ಯಾಪಿಸಲಿದೆ ಎಲ್ಲೆಡೆ ವ್ಯಾಪಿಸುವುದನ್ನು ನಿಯಂತ್ರಿಸಬೇಕಿದೆ. ಆ ಡ್ರಗ್ ಅನ್ನು ಅವರವರೇ ಕಂಡುಹಿಡಿದುಕೊಂಡು ಬಳಸುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೇ ತಮ್ಮ ಮೊಬೈಲ್ ನಲ್ಲಿ ಈ ಡ್ರಗ್ಸ್ ಕುರಿತದ ಕೆಲವೊಂದು ಮಾಹಿತಿಯನ್ನು ಸ್ವಾಮೀಜಿಯವರೊಂದಿಗೆ ಹಂಚಿಕೊಂಡರು.