ಪತ್ನಿಯ ಶೀಲ ಶಂಕಿಸಿ ಕೊಲೆ: ಪತಿ ಗಣೇಶ್‌ಗೆ 2೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ ಕೊಲೆ: ಪತಿ ಗಣೇಶ್ಗೆ 2೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬೇತಮಂಗಲ: ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಕುತ್ತಿಗೆ ಕೊಯ್ದು  ಹತ್ಯೆಗೈದ ಆರೋಪಿ ಪತಿಗೆ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯದೀಶ ಗಣಪತಿ ಗುರುಸಿದ್ಧ ಬಾದಾಮಿ ಅವರು 2೦  ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ 4೦ ಸಾವಿರ ರೂ., ದಂಡ ವಿಧಿಸಿ ಆದೇಶಿಸಿದ್ದಾರೆ.

ಪಟ್ಟಣದ ಬಳಿಯ ಎನ್.ಜಿ ಹುಲ್ಕೂರು ಗ್ರಾಪಂಯ ಪಂತನಹಳ್ಳಿಯ ದಿ.14.ನವೆಂಬರ್ 2020 ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ಆರೋಪಿ ಗಣೇಶ ಆತನ ಪತ್ನಿ ನಂದಿನಿಯ ಶೀಲವನ್ನು ಶಂಕಿಸಿ ತರಕಾರಿ ಕತ್ತರಿಸುವ ಚಾಕುವಿನಿಂದ ಪಂತನಹಳ್ಳಿಯ ಹೊಸ ಮನೆಗಳಲ್ಲಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು.

ಈ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಎಸ್.ಸಿ 46/2024 ರ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಲಯದಲ್ಲಿ ವಿಚಾರಣೆಗೊಂಡು ಶಿಕ್ಷೆ ಪ್ರಕಟಣೆಗೊಂಡಿದೆ.

Leave a Reply

Your email address will not be published. Required fields are marked *