ಹಾಸನ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಸುಮಾರು 2 ಲಕ್ಷ ಅಂತರದಿOದ ಗೆಲ್ಲಬೇಕಿತ್ತು. ಆದರೆ ಕೆಲವರ ಕುತಂತ್ರದಿOದ ಸೋಲು ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ ಎಂದು ಹೆಚ್.ಡಿ. ರೇವಣ್ಣ ಎದುರಾಳಿಗೆ ಟಾಂಗ್ ನೀಡಿದರು.
ಹಾಸನದ ಆಲೂರಿನಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಇಂತಹ ನೂರಾರು ತನಿಖೆ ಎದುರಿಸಿ ಗೆದ್ದಿದೆ. ದೇವೇಗೌಡರು ನಂಬಿದ ಕೆಲವು ಮುಖಂಡರು ಬೆನ್ನಿಗೆ ಚಾಕು ಹಾಕಿದ್ದಾರೆ. ಅದರಲ್ಲಿ ಸಣ್ಣ ಒಂದೂ ಚುನಾವಣೆ ಎದುರಿಸದ ಹೆಚ್.ಕೆ. ಜವರೇಗೌಡ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಲಾಗಿತ್ತು. ಅವರು ಏನು ಮಾಡಿದರು ಈಗ ಎಲ್ಲಿದ್ದಾರೆ ? ಇರುವ ಪಕ್ಷದಲ್ಲಿ ಏನು ಮಾಡ್ತಿದ್ದಾರೆ ಎಂದು ನಿಮಗೆ ಗೊತ್ತಿದೆ ಎಂದರು. ಇನ್ನು 15-20 ವರ್ಷಗಳಿಂದ ನಮ್ಮ ಜೊತೆ ಇದ್ದು, ಈಗ ಗಿರಾಕಿ ಬೇರೆ ಪಕ್ಷಕ್ಕಾಗಿ ನಮ್ಮ ಬಗ್ಗೆ ಮಾತನಾಡುತ್ತಿದ್ದಾನೆ. ಮುಂದಿನ ಮೂರು ವರ್ಷ ಕಳೆಯಲಿ, ಅವರನ್ನು ಯಾವ ಸ್ಥಿತಿಗೆ ಕಳುಹಿಸುತ್ತೇನೆಂದು ನೀವೇ ನೋಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.