BPL ಪಡಿತರ ಚೀಟಿ ಮಾನದಂಡ ಪರಿಶೀಲನೆಗೆ ಸಮಿತಿ

BPL ಪಡಿತರ ಚೀಟಿ ಮಾನದಂಡ ಪರಿಶೀಲನೆಗೆ ಸಮಿತಿ

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಪಡಿತರ ಚೀಚಿ ವಿತರಣಾ ಮಾನದಂತ ಪರಿಶೀಲನೆಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಉಪ ಸಮಿತಿಯನ್ನು ರಚನೆ ಮಾಡಿದೆ.

ಈ ಕುರಿತು ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಮತ್ತು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು, ಬಿಪಿಎಲ್ ಪಡಿತರ ಚೀಟಿ ದುರ್ಬಳಕೆಗೆ ಕಡಿವಾಣ, ಸರ್ಕಾರದ ಬೊಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸುವುದು, ಅರ್ಹರಿಗೆ ಈ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲನೆ ಮತ್ತು ಸಲಹೆಗಳನ್ನು ಪ್ರಸ್ತಾಪಿಸುವ ಕಾರ್ಯವನ್ನು ಉಪಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು.

ಕೆಲವು ಇಲಾಖೆಗಳು ನಿಗಮ– ಮಂಡಳಿಗಳನ್ನು ವಿಲೀನಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. 160 ನಿಗಮ-ಮಂಡಳಿಗಳ ಪೈಕಿ 53 ಮಾತ್ರ ಆರ್ಥಿಕವಾಗಿ ಲಾಭದಲ್ಲಿವೆ. ಉಳಿದ 107 ನಿಗಮ-ಮಂಡಳಿಗಳಿಗೆ ಬಲವರ್ಧನೆ ಅಥವಾ ವಿಲೀನದಂತಹ ಕ್ರಮದ ಅಗತ್ಯವಿದೆ. ಆರ್ಥಿಕವಾಗಿ ಬಲಪಡಿಸಿ ಲಾಭದ ಹಳಿಗೆ ತರಬಹುದಾದ ನಿಗಮ– ಮಂಡಳಿಗಳನ್ನು ಗುರುತಿಸಿ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು ಬೊಕ್ಕಸಕ್ಕೆ ಹೊರೆಯಾದ ನಿಗಮ-ಮಂಡಳಿಗಳ ವಿಲೀನದ ಕುರಿತು ಸಲಹೆ ನೀಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ದೂರುಗಳು ಇವೆ. ಬಿಪಿಎಲ್ ಪಡಿತರ ಚೀಟಿ ಮಾನದಂಡಗಳ ಜೊತೆಗೆ, ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನೂ ಈ ಸಮಿತಿ ಪರಿಶೀಲಿಸಿ ಸಲಹೆಗಳನ್ನು ನೀಡಲಿದೆ.

Leave a Reply

Your email address will not be published. Required fields are marked *