ಬೆಂಗಳೂರು : ನಮ್ಮ ಮೆಟ್ರೊ ಹಳದಿ ಲೈನ್ ಕಾರ್ಯ ವಿಳಂಬವಾಗಿದ್ದರೂ ಸಹ ಈಗ 19.15 ಕಿಲೋ ಮೀಟರ್ ಉದ್ದದ ಮೆಟ್ರೊ ಲೈನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆದಂತೆ ಕಾಣುತ್ತಿದೆ. ಮುಂದಿನ ವರ್ಷ ಜನವರಿ ಮೊದಲ ಹಾಗೂ ನಾಲ್ಕನೇ ವಾರದ ಮಧ್ಯದಲ್ಲಿ ಉದ್ಘಾಟನೆ ಆಗಲಿದೆ.
ಹಳದಿ ಮಾರ್ಗ ಆರ್ವಿ ಕಾಲೇಜಿನಿಂದ ಬೊಮ್ಮಸಂದ್ರಗೆ ಕನೆಕ್ಟ್ ಆಗುತ್ತದೆ.
ಈ ಮಾರ್ಗ ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ, ಮಾರ್ಗಗಳನ್ನು ಸಂಪರ್ಕಿಸಲಿದೆ. ರೈಲುಗಳ ಕೊರತೆಯಿಂದಾಗಿ ಇನ್ನು ಸಹ ಈ ಕಾರ್ಯಚಾರಣೆ ಆರಂಭವಾಗಿರಲಿಲ್ಲ.
ಜನವರಿಯಲ್ಲಿ ಓಡಾಟ
ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಬಳಿ ಕಳೆದ ವರ್ಷ ಫೆಬ್ರವರಿಯಲ್ಲಿ ಚೀನಾದಿಂದ ತರೆಸಿರುವ ಒಂದೇ ಪ್ರೊಟೋಟೈಪ್ ಟ್ರೈನ್ ಇದೆ. ಈ ಟ್ರೈನ್ ಪ್ರಾಯೋಗಿಕ ಓಡಾಟ ಆರಂಭಿಸಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಕಾರ್ ಬಾಡಿ ಶೆಲ್ಗಳನ್ನು ಪಶ್ಚಿಮ ಬಂಗಾಳದ ಟಿಟಾಗರ್ನಲ್ಲಿ ಜೋಡಿಸಲಾಗುತ್ತಿದೆ. ಚೀನಾದ ಸಿಆರ್ಆರ್ಸಿ ನಾನ್ಜಿಂಗ್ ಪುಜೆನ್ ಕೋ ಲಿಮಿಟೆಡ್ ಜೊತೆ ಪಾಲುದಾರಿಕೆ ಇದ್ದು, ಈ ಕಂಪನಿ ಬಿಎಂಆರ್ಸಿಎಲ್ಗೆ 1,578 ಕೋಟಿ ರೂ.ಗೆ 36 ರೈಲುಗಳನ್ನು ಪೂರೈಸುವ ಗುತ್ತಿಗೆ ಪಡೆದಿದೆ. ಮೂರನೇ ರೈಲಿನ ಕಾರ್ ಬಾಡಿ ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಮುಂಬೈ ಬಂದರು ರೀಚ್ ಆಗಿವೆ. ಅಲ್ಲದೆ ರಸ್ತೆಯ ಮೂಲಕ ಟಿಆರ್ಎಸ್ಎಲ್ ಸ್ಥಾವರ ಮುಟ್ಟಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಟಿಆರ್ಎಸ್ಎಲ್ನಲ್ಲಿ ರೈಲು ತಯಾರಿಕೆ ನಾವು ಹಾಕಿಕೊಂಡ ಸಮಯದಲ್ಲಿ ಮುಗಿಯಲಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕರ ನಿರ್ದೇಶಕ ಎಂ.ಮಹೇಶ್ವರ್ ರಾವ್ ತಿಳಿಸಿದ್ದಾರೆ. ನಾವು ಇದೇ ವರ್ಷದ ಡಿಸೆಂಬರ್ನಲ್ಲಿ ಟಿಆರ್ಎಸ್ಎಲ್ನಿಂದ ಮೊದಲ ರೈಲು ಮತ್ತು ತಿಂಗಳ ಅತ್ಯದಲ್ಲಿ ಎರಡನೇ ರೈಲು ಪಡೆಯಲಿದ್ದೇವೆ. ಮುಂದಿನ ವರ್ಷದ ಜನವರಿ ಎರಡನೇ ಹಾಗೂ ಕೊನೆಯ ವಾರದ ಮಧ್ಯ ಹಳದಿ ಮಾರ್ಗ ಕಾರ್ಯ ನಿವರ್ಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುರಕ್ಷತಾ ವಿಷಯಗಳ ಬಗ್ಗೆ ಡಿಸೆಂಬರ್ನಲ್ಲಿ ರೈಲು ಸುರಕ್ಷತೆ ಘಟಕದಿಂದ ಒಪ್ಪಿಗೆ ಪಡೆಯಲಾಗುವುದು. ಅಲ್ಲದೆ ರಾಜ್ಯ ಸರ್ಕಾರಕ್ಕೂ ಇದರ ಅನುಮೋದನೆ ಶ್ರೀಘ್ರದಲ್ಲಿ ನೀಡುವಂತೆ ಮನವಿ ಮಾಡಲಿದ್ದೇವೆ. ಆರಂಭದಲ್ಲಿ ಈ ರೈಲುಗಳು ನಿಧಾನವಾಗಿ ಚಲಿಸುತ್ತವೆ. ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವೇಗ ಸಹ ಹೆಚ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ನಾಗಸಂದ್ರ ಟೂ ಮಾದಾವರ ನಡುವಿನ 3.14 ಕಿಲೋ ಮೀಟರ್ ಮಾರ್ಗವನ್ನು ರೆಡಿ ಇದ್ದು, ಇದರ ಕಾರ್ಯಚಾರಣೆಗಾಗಿ ಅನುಮತಿ ಕೇಳಿದ್ದೇವೆ. ದೀಪಾವಳಿ ಬಳಿಕ ಈ ಲೈನ್ ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದು ಹಸಿರು ಮೆಟ್ರೋ ಲೈನ್ ಅಡಿಯಲ್ಲಿ ಬರುತ್ತದೆ. ಅಲ್ಲದೆ ಈ ರೈಲು ಕಾರ್ಯಚಾರಣೆ ಮಾಡುವುದರಿಂದ ತುಮಕೂರು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಬಹುದಾಗಿದೆ. ನಮ್ಮ ಮೆಟ್ರೊ ಇತಿಹಾಸದಲ್ಲಿ ಆಮೆಗತಿಯಲ್ಲಿ ಸಾಗಿದ ಕಾರ್ಯ ಇದಾಗಿದೆ. ತಾನು ಅಂದಾಜಿಸಿದ್ದ ಸಮಯಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ಸಮಯ ತೆಗೆದುಕೊಂಡಿದೆ.