ಬೆಂಗಳೂರು : ಗ್ರೌಂಡ್ ಲೆವೆಲ್ ಮಾಹಿತಿ ಇದೆ ನಮಗೆ. ಹಳ್ಳಿ ಹಳ್ಳಿಗೂ ಹೋದಾಗ ವಾತಾವರಣ ನಮ್ಮ ಪರವಾಗಿ ಇತ್ತು. ಯೋಗೇಶ್ವರ್ ಅವರ ಪರವಾಗಿ ಜನರಿದ್ದಾರೆ. ಅವರನ್ನು ಯಾರೂ ಕೂಡ ದ್ವೇಷ ಮಾಡಲಿಲ್ಲ ಎಂದು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆಲ್ಲುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಯೋಗೇಶ್ವರ್ ಅವರ ನಿರ್ಧಾರ ಸರಿಯಾಗಿದೆ. ಅವರು ಕಾಂಗ್ರೆಸ್ ಮೂಲದವರೇ. ಮತದಾರರು ಕೈಗೆ ಯಾರು ಸಿಗ್ತಾರೆ ಅವರನ್ನು ಆರಿಸ್ತಾರೆ ಜನ ಅಂತ ನಂಬಿಕೆ ಇದೆ. ಭರತ್ ಬೊಮ್ಮಾಯಿಗಿಂತ ಹೆಚ್ಚು ಕಾಂಗ್ರೆಸ್ ಗೆ ಗೆಲುವ ಚಾನ್ಸ್ ಶಿಗ್ಗಾವಿಯಲ್ಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಏನು ಛಾಳಿ..? ಹಳೆಯ ಛಾಳಿಯನ್ನು ಮತ್ತೆ ತರುವುದಾದರೆ ಎಷ್ಟು ದಡ್ಡರು ಅಂತ ಕರಿಬೇಕು ಅವರನ್ನ ಬಿಜೆಪಿಯವರನ್ನು ಹೀನಾಯವಾಗಿ ಸೋಲಿಸಿ ನಮಗೆ 136 ಸ್ಥಾನ ನೀಡಿದ್ದಾರೆ. ಕಾಂಗ್ರೆಸ್ ಪರವಾಗಿ ಇದ್ದಿದ್ದಕ್ಕೆ ನಾವು ಲೋಕಸಭೆಯಲ್ಲಿ 9 ಸ್ಥಾನ ಗೆದ್ದೆವು ಎಂದು ತಿಳಿಸಿದರು.
ಮೂರು ಕ್ಷೇತ್ರದ ರಿಸಲ್ಟ್ ನಮ್ಮ ಸರ್ಕಾರದ ನಡೆಯನ್ನು ನಿರ್ಧಾರ ಮಾಡುವುದಿಲ್ಲ. ವಿರೋಧ ಪಕ್ಷದವರು ಈ ಕೆಲಸ ಬಿಟ್ಟುಬಿಡಲಿ. ಮೂರು ಕ್ಷೇತ್ರದ ರಿಸಲ್ಟ್ ಬಳಿಕ ನಮ್ಮ ಆಡಳಿತ ಇನ್ನಷ್ಟು ಅಧ್ಬುತ ಆಗಲಿದೆ. ಅದೇ ಕಾರಣಕ್ಕೆ ಪರಮೇಶ್ವರ್ ಹೇಳಿರುತ್ತಾರೆ ಎಂದರು.
ಅನುದಾನ ಕೊರತೆ ಬಗ್ಗೆ ಶಾಸಕರ ಅಸಮಾಧಾನ
ಹಿಂದಿನ ಸರ್ಕಾರ 35-40 ಕೋಟಿ ಬಿಲ್ ಪಾವತಿ ಪೆಂಡಿಂಗ್ ಇಟ್ಟಿದೆ. ಹಿಂದಿನ ಸರ್ಕಾರದ ಹಳೆಯ ಬಾಕಿಯನ್ನು ನಮ್ಮದೇ ಸರ್ಕಾರ ಕೊಟ್ಟಿದೆ. ಹಿಂದಿನ ಸರ್ಕಾರ ಎಷ್ಟು ಬಸ್ ತೆಗೆದುಕೊಂಡಿದೆ..? ಹಿಂದಿನ ಸರ್ಕಾರ ಮಾಡದೇ ಇರುವುದರಿಂದ ಬ್ಯಾಕ್ ಲಾಗ್ ಆಗಿದೆ. ಹಿಂದಿನ ಸರ್ಕಾರ ಮಾಡದೇ ಇರುವ ಕೆಲಸದಿಂದ ನಮಗೆ ಹೊರೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಮನೆಯೂ ಕೊಟ್ಟಿಲ್ಲ, ಬಸ್ ಖರೀದಿ ಮಾಡಿಲ್ಲ. ಬ್ಯಾಕ್ ಲಾಗ್ ಹೊರೆಯನ್ನು ನಾವು ನಿಭಾಯಿಸುತ್ತಿದ್ದೇವೆ ಎಂದರು.
ನಮ್ಮ ಶಾಸಕರಿಗೆ ಅನುದಾನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ತಿಳಿಸುತ್ತಾರೆ ಎಲ್ಲವು ಕೂಡ ಸರಿ ಹೋಗುತ್ತದೆ ಎಂದು ಹೇಳಿದರು.