ಬೆಳಗಾವಿ || ರಾಜ್ಯದಲ್ಲಿ ಸದ್ದು ಮಾಡುತ್ತಿರುವ  ಬಾಣಂತಿಯರ ಸಾವು ಪ್ರಕರಣ;  ಈ ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತ

ಬೆಳಗಾವಿ || ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಾಣಂತಿಯರ ಸಾವು ಪ್ರಕರಣ; ಈ ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತ

ಬೆಳಗಾವಿ: ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 3,364 ಬಾಣಂತಿಯರು ಸಾವಿಗೀಡಾಗಿರುವುದಾಗಿ ಸಿಎಂ ಕಚೇರಿ ಮಾಹಿತಿ ನೀಡಿದೆ. ಈ ಸಂಬಂಧ ಅಂಕಿಅಂಶ ನೀಡಿರುವ ಮುಖ್ಯಮಂತ್ರಿಗಳ ಕಚೇರಿ 2019-20 ರಿಂದ 2024-25 ನವೆಂಬರ್ ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಿದೆ.

ಬಳ್ಳಾರಿಯಲ್ಲಿನ ಬಾಣಂತಿಯರ ಸಾವು ಇದೀಗ ದೊಡ್ಡ ಸದ್ದು ಮಾಡಿದೆ. ಇತ್ತ ವಿಪಕ್ಷಗಳು ಸರ್ಕಾರದ ನಿರ್ಲಕ್ಷ್ಯ ಆರೋಪಿಸಿ ಸದನದ ಒಳಗೆ ಹೊರಗೆ ಹೋರಾಟ ನಡೆಸುತ್ತಿವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಗೂ ಆಗ್ರಹಿಸುತ್ತಿದ್ದಾರೆ. ಇದರ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಬಾಣಂತಿಯರು ಸಾವಿಗೀಡಾಗಿರುವುದಾಗಿ ಆರೋಪಿಸಿದ್ದಾರೆ. ಈ ಸಂಬAಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಬಿಮ್ಸ್?ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೀಗಾಗಿ ಬಾಣಂತಿಯರ ಸಾವು ಪ್ರಕರಣ ರಾಜಕೀಯ ಸ್ವರೂಪ ಪಡೆದಿದೆ.

ಸದನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಈ ಮಧ್ಯೆ ಮುಖ್ಯಮಂತ್ರಿ ಕಚೇರಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಬಾಣಂತಿಯರ ಸಾವುಗಳ ಅಂಕಿಅಂಶ ನೀಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೂ ಬಾಣಂತಿಯರ ಸಾವು ಹೆಚ್ಚಿರುವ ಬಗ್ಗೆ ಅಂಕಿಅಂಶ ಬಹಿರಂಗ ಪಡಿಸಿದೆ.

ಅದರಂತೆ 2019-20 ರಲ್ಲಿ ರಾಜ್ಯದಲ್ಲಿ ಒಟ್ಟು 662 ಬಾಣಂತಿಯರು ಸಾವಿಗೀಡಾಗಿದ್ದರು. 2020 -21 ರಲ್ಲಿ ಒಟ್ಟು 714 ಬಾಣಂತಿಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 2021 -22 ರಲ್ಲಿ 595 ಬಾಣಂತಿಯರು, , 2022-23 ರಲ್ಲಿ 527 , 2023 -24 ರಲ್ಲಿ 548 ಹಾಗೂ 2024 – 25 ಸಾಲಿನ ನವೆಂವರ್ ವರೆಗೆ 348 ಬಾಣಂತಿಯರು ಸಾವಿಗೀಡಾಗಿರುವ ವರದಿಯಾಗಿದೆ ಎಂಬ ಅಂಕಿಅಂಶ ತಿಳಿಸಿದೆ.

Leave a Reply

Your email address will not be published. Required fields are marked *