ಮೈಸೂರು: ಸಂಸದ ಯದುವೀರ್ ಒಡೆಯರ್ ಅವರ ಎರಡನೇ ಪುತ್ರನಿಗೆ ಅದ್ದೂರಿಯಾಗಿ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ನಡೆಸಲಾಗಿದೆ.ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೊಟ್ಟಿಲು ಶಾಸ್ತ್ರ ನಡೆಸಲಾಗಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದಂಪತಿಯ ಪುತ್ರನಿಗೆ ತೊಟ್ಟಿಲುಶಾಸ್ತ್ರದ ಸಂಭ್ರಮ ನೆರವೇರಸಲಾಗಿದೆ.
ಚಾಮುಂಡಿಬೆಟ್ಟದ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ನೆರವೇರಿಸಲಾಗಿದ್ದು, ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತಿದ್ದರು.
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಬಳಿಕ ತೊಟ್ಟಿಲು ಶಾಸ್ತ್ರ ನಡೆಸಲಾಗಿದ್ದು, ಇದೇ ವರ್ಷ ಅಕ್ಟೋಬರ್ 14ರ ದಸರಾ ದಿನವೇ ತ್ರಿಷಿಕಾ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, 2017ರ ಡಿಸೆಂಬರ್ 6 ರಂದು ಆದ್ಯವೀರ್ ಅವರು ಜನಿಸಿದ್ದರು.