ಬೆಂಗಳೂರು: ಬೆಂಗಳೂರಿನ ಪ್ರಮುಖ ಜಂಕ್ಷನ್ ಆಗಿರುವ ಹೆಬ್ಬಾಳದಲ್ಲಿ ‘ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ’ಗೆ (KIADB) ಸೇರಿದ ಭೂಮಿ ನೀಡುವಲ್ಲಿ ಯಾವುದೇ ಅಂತಿಮ ನಿರ್ಧಾರಗಳು ಪ್ರಕಟವಾಗಿಲ್ಲ. ಈ ಕಾರಣದಿಂದ ಹೆಬ್ಬಾಳದಲ್ಲಿ ಮೆಟ್ರೋ ಯೋಜನೆ ಸೇರಿ ಬಹುಮಾದರಿ ಸಾರಿಗೆ ಯೋಜನೆಗಳು ಜಾರಿಯಾಗುವುದು ಮತ್ತಷ್ಟು ವಿಳಂಭವಾಗುವ ಸಾಧ್ಯತೆ ಇದೆ ಎಂದು BMRCL ಅಧಿಕಾರಿಗಳು ಹೇಳಿದ್ದಾರೆ.
ಹೆಬ್ಬಾಳದಿಂದ ಸರ್ಜಾರಪುರ ವರೆಗೆ ನಮ್ಮ ಮೆಟ್ರೋ ಕೆಂಪು ಮಾರ್ಗ ಯೋಜನೆಯೊಂದೆ ಇಲ್ಲ. ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಿಸಲು ಪ್ಲಾನ್ ನಡೆಯುತ್ತಿದೆ. ಇಂಟರ್ಚೇಂಜ್ ನಿಲ್ದಾಣಗಳು, ಬಸ್ ನಿಲ್ದಾಣ, ರೈಲ್ವೆ ಉಪನಗರ ಸಾರಿಗೆಯು ಇದೇ ಮಾರ್ಗದಲ್ಲಿ ಹಾದು ಹೋಗಲಿದೆ ಎಂಬುದು ಸದ್ಯದ ಪ್ಲಾನ್.
ಹೆಬ್ಬಾಳದ 45 ಎಕರೆ ಭೂಮಿ ಹಿನ್ನೆಲೆ ಹೆಬ್ಬಾಳದಲ್ಲಿನ ಉದ್ದೇಶಿತ ಜಾಗ ಸಿಗದ ಕಾರಣ ಮೆಟ್ರೋ ಸಂಬಂಧಿ ಯೋಜನೆಗಳು ವಿಳಂಬವಾಗುವ ಸಾಧ್ಯತೆ ಇದೆ. ವರ್ಷಗಳ ಹಿಂದೆ ಇಲ್ಲಿನ 45 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಉದ್ದೇಶದಿಂದಾಗಿ ಲೇಕ್ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೀಡಲಾಗಿತ್ತು. ಆದರೆ ಭೂಮಿ ನೀಡಿ 20 ವರ್ಷ ಕಳೆದರೂ ಆಸ್ತಿ ಮಾಲೀಕರಿಗೆ ಪರಿಹಾರ ನೀಡದ ಕಾರಣ ಈ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆಯಿತು. ಅದೀಗ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ವಶದಲ್ಲಿದೆ.
ಸರ್ಕಾರದಿಂದ ಸಕಾರಾತ್ಮಕ ನಿರ್ಧಾರ ಕೈಗೊಂಡಿಲ್ಲ! ಈ ಭೂಮಿಯನ್ನು ಸರ್ಕಾರ BMRCL ಯೋಜನೆಗೆ ನೀಡುವುದಾಗಿ ಹೇಳುತ್ತಲೇ ಇದೆ ಆದರೆ ಇದೂವರೆಗೂ ಸಕಾರಾತ್ಮಕ ಒಂದೂ ನಿರ್ಧಾರವು ಪ್ರಟಕವಾಗಿಲ್ಲ. ಈ ಹಿಂದೆ ಪರಿಹಾರ ನೀಡುವಂತೆ ಬಿಎಂಆರ್ಸಿಎಲ್ಗೆ ಎಂಬಿ ಪಾಟೀಲರು ಮಾಖಿಕವಾಗಿ ತಿಳಿಸಿದ್ದರು. ಯಾವುದೇ ದಾಖಲೆ ಪತ್ರಗಳ ವ್ಯವಹಾರ ನಡೆಯದ ಕಾರಣ ನಮ್ಮ ಮೆಟ್ರೋ ಅಧಿಕಾರಿಗಳು ಮಧ್ಯ ಪ್ರವೇಶಿಸಿಲ್ಲ. ಸರ್ಕಾರ ಭೂಮಿ ನೀಡಿದರೆ, ನಾವು ಪರಿಹಾರ ನೀಡಲು ಸಿದ್ಧ ಎಂದು ತಿಳಿಸಿದೆ. ಕೆಐಎಡಿಬಿ ಜಾಗವನ್ನು ನಮ್ಮ ಮೆಟ್ರೋಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪಿಸಿ ಮೋಹನ್ ಸೇರಿದಂತೆ ಅನೇಕ ಮಂದಿ ಸಿಎಂಗೆ ಪತ್ರ ಬರೆದಿದ್ದಾರೆ. BMRCL ಸಹ ಅನೇಕ ಭಾರಿ ಮನವಿ ಮಾಡಿದೆ.
ಭೂಮಿ ಹಸ್ತಾಂತರಕ್ಕೆ ಏನು ಸಮಸ್ಯೆ? ನಮ್ಮ ಮೆಟ್ರೋ ಹೆಬ್ಬಾಳದಲ್ಲಿ ಬೃಹತ್ ಡಿಪೋ ನಿರ್ಮಿಸಲು ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ಈ ಕೆಂಪು ಮೆಟ್ರೋ ಮಾರ್ಗಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಡಿಪಿಆರ್ ರೆಡಿಯಾಗುತ್ತಿದೆ. ಮಲ್ಟಿ-ಮೋಡಲ್ ಹಬ್, ಸಾರಿಗೆ ಮೂಲ ಸೌಕರ್ಯ ಇಲ್ಲಿ ತಲೆ ಎತ್ತಲಿವೆ. ಆದರೆ ಭೂಮಿ ಸಿಗದಿರುವುದು ಯೋಜನೆಗಳಿಗೆ ಹಿನ್ನಡೆ ಅಥವಾ ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಹದು ಎಂದು ಕಳೆದ ಶನಿವಾರ (ಫೆ.01) ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹಾಗೂ ಡಿಸಿಎಂ ಜೊತೆಗಿನ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು ಈ ಜಾಗ ಹಸ್ತಾಂತರಕ್ಕೆ ಇರುವ ಒಂದಷ್ಟು ಕಾನೂನು ಸವಾಲುಗಳನ್ನು ಅವರು ವಿವರಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಭೂಮಿ ನೀಡಲು ಬದ್ಧ ಎಂದಷ್ಟೇ ಹೇಳಿದರು. ಇದೆಲ್ಲ ನೋಡಿದ ಮೇಲೆ ಬಿಎಂಆರ್ಸಿಎಲ್ಗೆ ಈ ಜಾಗ ಸಿಗುವುದು ಮತ್ತಷ್ಟು ವಿಳಂಬವಾಗಬಹುದು ಎಂದು ಅಭಿಪ್ರಾಯ ಹೊರ ಹಾಕಿದೆ.