ನವದೆಹಲಿ: ನವೆಂಬರ್ 1ರಿಂದ (ನಾಳೆಯಿಂದ) ಆರ್ಬಿಐನ ಹೊಸ ನಿಯಮದಂತಹ ದೇಶೀಯ ಹಣ ವರ್ಗಾವಣೆ (DMT), ಕ್ರೆಡಿಟ್ ಕಾರ್ಡ್ ಬದಲಾವಣೆಗಳು ಮತ್ತು LPG ಸಿಲಿಂಡರ್ ಬೆಲೆಗಳು ಸೇರಿದಂತೆ ಹಲವಾರು ಆರ್ಥಿಕ ಬದಲಾವಣೆಗಳು(Major Changes) ಆಗಲಿವೆ ಎಂದ ಮೂಲಗಳು ತಿಳಿಸಿವೆ. ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆಹಣ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆLPG ಸಿಲಿಂಡರ್ ಬೆಲೆರೈಲು ಟಿಕೆಟ್ ಬದಲಾವಣೆTRAIನ ಹೊಸ ನಿಯಮ SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಇದು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ಗೆ ಸಂಬಂಧಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಂಗಸಂಸ್ಥೆಯಾದ ಎಸ್ಬಿಐ ತನ್ನ ಕ್ರೆಡಿಟ್ ಕಾರ್ಡ್ ಮೂಲಕ ಯುಟಿಲಿಟಿ ಬಿಲ್ ಪಾವತಿಗಳು ಮತ್ತು ಹಣಕಾಸು ಶುಲ್ಕಗಳಿಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳನ್ನು ನವೆಂಬರ್ 1 ರಿಂದ ಜಾರಿಗೆ ತರಲಿದೆ. ನವೆಂಬರ್ 1 ರಿಂದ ಅಸುರಕ್ಷಿತ ಎಸ್ಬಿಐ ಕ್ರೆಡಿಟ್ ಕಾರ್ಡ್ಗಳಿಗೆ ಪ್ರತಿ ತಿಂಗಳು 3.75 ರೂಪಾಯಿಗಳ ಹಣಕಾಸು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ ವಿದ್ಯುತ್, ನೀರು, ಎಲ್ಪಿಜಿ ಸಿಲಿಂಡರ್ ಮತ್ತು ಇತರ ಯುಟಿಲಿಟಿ ಸೇವೆಗಳಿಗೆ 50,000 ರೂಪಾಯಿಯನ್ನು ಮೀರಿದರೆ ಹೆಚ್ಚಿನ ಪಾವತಿಗೆ 1 ಪ್ರತಿಶತ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಹಣ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡೊಮೆಸ್ಟಿಕ್ ಮನಿ ಟ್ರಾನ್ಸ್ಫರ್ (DMT)ಗಾಗಿ ಹೊಸ ನಿಯಮಗಳನ್ನು ಘೋಷಿಸಿದ್ದು, ಇದು ಕೂಡ ನಾಳೆಯಿಂದ ಜಾರಿಗೆ ಬರಲಿದೆ. ವಂಚನೆಗಾಗಿ ಬ್ಯಾಂಕಿಂಗ್ ಚಾನೆಲ್ಗಳ ದುರ್ಬಳಕೆಯನ್ನು ತಡೆಯುವುದು ಈ ನಿಯಮಗಳ ಉದ್ದೇಶವಾಗಿದೆ LPG ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲ ದಿನ, ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು (LPG ಸಿಲಿಂಡರ್ ಬೆಲೆ) ಬದಲಾಯಿಸುತ್ತವೆ ಮತ್ತು ಹೊಸ ದರಗಳನ್ನು ಬಿಡುಗಡೆ ಮಾಡುತ್ತವೆ. ಈ ಬಾರಿಯೂ ಅದರ ಬೆಲೆಗಳನ್ನು ನವೆಂಬರ್ 1ರಂದು ಪರಿಷ್ಕರಿಸಬಹುದು. ಬಹುಕಾಲದಿಂದ ಸ್ಥಿರವಾಗಿರುವ 14 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಬಾರಿ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ರೈಲು ಟಿಕೆಟ್ ಬದಲಾವಣೆ
ಭಾರತೀಯ ರೈಲ್ವೆಯು 1 ನವೆಂಬರ್ 2024 ರಿಂದ ರೈಲು ಟಿಕೆಟ್ಗಳ ಮುಂಗಡ ಬುಕಿಂಗ್ ಅವಧಿಯಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಈಗ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು (ಎಆರ್ಪಿ) 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ಟಿಕೆಟ್ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಪ್ರಯಾಣಿಕರ ಅನುಕೂಲವನ್ನು ಕಾಪಾಡುವುದು ಈ ತಿದ್ದುಪಡಿಯ ಉದ್ದೇಶವಾಗಿದೆ. TRAIನ ಹೊಸ ನಿಯಮ
ಸ್ಪ್ಯಾಮ್ ಮತ್ತು ವಂಚನೆಯನ್ನು ಪರಿಶೀಲಿಸಲು ಹೊಸ ನಿಯಮಗಳ ಭಾಗವಾಗಿ ಟೆಲಿಕಾಂ ಕಂಪನಿಗಳು ಮೆಸೇಜ್ ಟ್ರೆಸಿಬಿಲಿಟಿಯನ್ನು ತರುತ್ತಿದ್ದಾರೆ. ಸ್ಪ್ಯಾಮ್ ಸಂದೇಶಗಳನ್ನು ಮೇಲ್ವಿಚಾರಣೆ ಮಾಡುವುದರ ಜತೆಗೆ ಟ್ರ್ಯಾಕ್ ಮಾಡಲಾಗುತ್ತದೆ.