ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ದೂರದ ಊರುಗಳಿಗೆ ತೆರಳುವವರಿಗ ಅನುಕೂಲ ಆಗುವಂತೆ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಣೆಗಾಗಿ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೂರ್ವ ಕರಾವಳಿ ರೈಲ್ವೆ ವಲಯ ತಿಳಿಸಿದೆ. ವಿಶಾಖಪಟ್ಟಣಂ-ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ನಿಗದಿತ ದಿನಾಂಕಗಳಂದು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ವಿಶಾಖಪಟ್ಟಣಂ -ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ರೈಲು (ಸಂಖ್ಯೆ 08549/08550) ಸಂಚರಿಸಲಿದೆ. ಇದರಲ್ಲಿ 08549 ಸಂಖ್ಯೆಯ ರೈಲು ಮಾರ್ಚ್ 16 ಮತ್ತು 23ರಂದು ಮಧ್ಯಾಹ್ನ 3:30 ಕ್ಕೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45 ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಬರಲಿದೆ.
* ಮರಳಿ ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ 08550 ಸಂಖ್ಯೆಯ ರೈಲು ಮಾರ್ಚ್ 17 ಮತ್ತು 24 ಮಧ್ಯಾಹ್ನ 3.50 ಕ್ಕೆ ಸಂಚಾರ ಆರಂಭಿಸುತ್ತದೆ. ಮತ್ತದೇ ಮಾರ್ಗವಾಗಿ ಸಾಗಿ ಮರುದಿನ ಮಧ್ಯಾಹ್ನ 12:30 ಕ್ಕೆ ವಿಶಾಖಪಟ್ಟಣಂ ನಿಲ್ದಾಣ ತಲುಪಲಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ವಿಶೇಷ ರೈಲು ನಿಲುಗಡೆ ನಿಲ್ದಾಣಗಳು ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದುವಾಡ, ಅನಕಪಲ್ಲಿ, ಎಲೂರು, ವಿಜಯವಾಡ, ಒಂಗೋಲ್, ನೆಲ್ಲೂರು, ಸಾಮಲೊಟ್, ರಾಜಮಂಡ್ರಿ, ಗುಡೂರು, ಪೆರಂಬೂರ್, ಅರಕ್ಕೋಣಂ, ಕಟಪಾಡಿ, ಜೋಲಾರ್ ಪೆಟ್ಟೆ, ಕುಪ್ಪಂ, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ವಿವಿಧ ಒಟ್ಟು 20 ಬೋಗಿಗಳನ್ನು ಒಳಗೊಂಡ ವಿಶೇಷ ರೈಲು ಇದಾಗಿರುತ್ತದೆ. 4 ಎಸಿ ತ್ರಿ ಟೈರ್, 2 ಎಸಿ ತ್ರಿ ಟೈರ್ ಎಕಾನಮಿ, 8 ಸ್ವೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 1 ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 ಸೆಕೆಂಡ್ ಲಗೇಜ್-ಕಮ್-ಬ್ರೇಕ್ ವ್ಯಾನ್/ಅಂಗವಿಕಲ ಬೋಗಿಗಳು ಒಳಗೊಂಡಿರುತ್ತವೆ.
ರೈಲು ಸಂಚಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲೆಯ ಅಧಿಕೃತ ವೆಬ್ಸೈಟ್ಗೆ https://www.indianrail.gov.in/ ಭೇಟಿ ನೀಡಬೇಕು. ಇಲ್ಲವೇ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಆಗಮನ/ನಿರ್ಗಮನದ ಸಮಯವನ್ನು ಪರಿಶೀಲಿಸಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ದೂರದ ಊರುಗಳಿಗೆ ತೆರಳುವವರಿಗ ಅನುಕೂಲ ಆಗುವಂತೆ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಣೆಗಾಗಿ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೂರ್ವ ಕರಾವಳಿ ರೈಲ್ವೆ ವಲಯ ತಿಳಿಸಿದೆ. ವಿಶಾಖಪಟ್ಟಣಂ-ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ನಿಗದಿತ ದಿನಾಂಕಗಳಂದು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ವಿಶಾಖಪಟ್ಟಣಂ -ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ರೈಲು (ಸಂಖ್ಯೆ 08549/08550) ಸಂಚರಿಸಲಿದೆ. ಇದರಲ್ಲಿ 08549 ಸಂಖ್ಯೆಯ ರೈಲು ಮಾರ್ಚ್ 16 ಮತ್ತು 23ರಂದು ಮಧ್ಯಾಹ್ನ 3:30 ಕ್ಕೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45 ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಬರಲಿದೆ.
* ಮರಳಿ ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ 08550 ಸಂಖ್ಯೆಯ ರೈಲು ಮಾರ್ಚ್ 17 ಮತ್ತು 24 ಮಧ್ಯಾಹ್ನ 3.50 ಕ್ಕೆ ಸಂಚಾರ ಆರಂಭಿಸುತ್ತದೆ. ಮತ್ತದೇ ಮಾರ್ಗವಾಗಿ ಸಾಗಿ ಮರುದಿನ ಮಧ್ಯಾಹ್ನ 12:30 ಕ್ಕೆ ವಿಶಾಖಪಟ್ಟಣಂ ನಿಲ್ದಾಣ ತಲುಪಲಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ವಿಶೇಷ ರೈಲು ನಿಲುಗಡೆ ನಿಲ್ದಾಣಗಳು ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದುವಾಡ, ಅನಕಪಲ್ಲಿ, ಎಲೂರು, ವಿಜಯವಾಡ, ಒಂಗೋಲ್, ನೆಲ್ಲೂರು, ಸಾಮಲೊಟ್, ರಾಜಮಂಡ್ರಿ, ಗುಡೂರು, ಪೆರಂಬೂರ್, ಅರಕ್ಕೋಣಂ, ಕಟಪಾಡಿ, ಜೋಲಾರ್ ಪೆಟ್ಟೆ, ಕುಪ್ಪಂ, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ವಿವಿಧ ಒಟ್ಟು 20 ಬೋಗಿಗಳನ್ನು ಒಳಗೊಂಡ ವಿಶೇಷ ರೈಲು ಇದಾಗಿರುತ್ತದೆ. 4 ಎಸಿ ತ್ರಿ ಟೈರ್, 2 ಎಸಿ ತ್ರಿ ಟೈರ್ ಎಕಾನಮಿ, 8 ಸ್ವೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 1 ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 ಸೆಕೆಂಡ್ ಲಗೇಜ್-ಕಮ್-ಬ್ರೇಕ್ ವ್ಯಾನ್/ಅಂಗವಿಕಲ ಬೋಗಿಗಳು ಒಳಗೊಂಡಿರುತ್ತವೆ.
ರೈಲು ಸಂಚಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲೆಯ ಅಧಿಕೃತ ವೆಬ್ಸೈಟ್ಗೆ https://www.indianrail.gov.in/ ಭೇಟಿ ನೀಡಬೇಕು. ಇಲ್ಲವೇ 139 ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಆಗಮನ/ನಿರ್ಗಮನದ ಸಮಯವನ್ನು ಪರಿಶೀಲಿಸಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.