ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಅನಿರುದ್ಧ್ ರವಿಚಂದರ್.

ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಅನಿರುದ್ಧ್ ರವಿಚಂದರ್.

ಅನಿರುದ್ಧ್ ರವಿಚಂದರ್ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಸಂಗೀತ ನಿರ್ದೇಶಕ. ‘ವಿಕ್ರಂ’, ‘ಜೈಲರ್’, ‘ಲಿಯೋ’, ‘ಜವಾನ್’ ಇನ್ನೂ ಹಲವಾರು ಸಿನಿಮಾಗಳಿಗೆ ಅನಿರುದ್ಧ್ ನೀಡಿರುವ ಸಂಗೀತ ಭಾರಿ ವೈರಲ್ ಆಗಿದೆ. ಅವರನ್ನು ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಅನ್ನಾಗಿಸಿದೆ. ಅನಿರುದ್ಧ್ ಸಂಗೀತದ ಜೊತೆಗೆ ಅವರ ಲವ್ ಲೈಫ್ ಬಗ್ಗೆಯೂ ಆಗಾಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಅನಿರುದ್ಧ್ ರವಿಚಂದರ್ ಹೆಸರು ಇತ್ತೀಚೆಗೆ ಸನ್​​ರೈಸಸ್ ಹೈದರಾಬಾದ್ ಐಪಿಎಲ್ ತಂಡದ ಮಾಲಕಿ ಕಾವ್ಯಾ ಮಾರನ್ ಜೊತೆ ಕೇಳಿ ಬಂದಿತ್ತು. ಇದೀಗ ಈ ಇಬ್ಬರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್. ಸನ್​​ರೈಸಸ್ ಹೈದರಾಬಾದ್ ತಂಡದ ಮಾಲಕಿ ಆಗಿರುವ ಜೊತೆಗೆ ಇನ್ನೂ ಹಲವಾರು ಉದ್ಯಮಗಳನ್ನು ಅವರು ನಿಭಾಯಿಸುತ್ತಿದ್ದಾರೆ. 33 ವರ್ಷದ ಕಾವ್ಯಾ ಮಾರನ್ ಆಸ್ತಿ ಮೌಲ್ಯ ಸುಮಾರು 410 ಕೋಟಿಗೂ ಹೆಚ್ಚು. ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಕಾವ್ಯಾ ಹಾಗೂ ಅನಿರುದ್ಧ್ ಪರಸ್ಪರ ವಿವಾಹ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ನಿರಾಕರಿಸಿದ್ದರು ಅನಿರುದ್ಧ್. ಆದರೆ ಇದೀಗ ಈ ಇಬ್ಬರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಇದೇ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರ ಮದುವೆ ಸುದ್ದಿ ಹರಿದಾಡಿತ್ತು. ಆಗ ಟ್ವೀಟ್ ಮಾಡಿದ್ದ ಅನಿರುದ್ಧ್ ಅದೆಲ್ಲ ಸುಳ್ಳು ಎಂದಿದ್ದರು. ಇದೀಗ ನ್ಯೂಯಾರ್ಕ್​​ನಲ್ಲಿ ಅನಿರುದ್ಧ್ ರವಿಚಂದ್ರನ್ ಮತ್ತು ಕಾವ್ಯಾ ಮಾರನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ನ್ಯೂಯಾರ್ಕ್​​ನ ಬೀದಿಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತದ ಯೂಟ್ಯೂಬ್ ವ್ಲಾಗರ್ ಒಬ್ಬಾತ ನ್ಯೂಯಾರ್ಕ್​​ನಲ್ಲಿ ಅನಿರುದ್ಧ್ ಹಾಗೂ ಕಾವ್ಯಾ ಒಟ್ಟಿಗೆ ಹೋಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *