ತುಮಕೂರು:- ಎಂಎಲ್ ಸಿ ರಾಜೇಂದ್ರ ಹತ್ಯೆ ಸುಫಾರಿ ಪ್ರಕರಣದಲ್ಲಿ ಸೋರಿಕೆಯಾಗಿದ್ದ ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆ ಪುಷ್ಪ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸೋಮನಿಂದ ದೂರವಾಗಿದ್ದೇ ರೋಚಕ. ಹಾಗಾದ್ರೆ ದೂರವಾಗಿದ್ಯಾಕೆ? ಪೊಲೀಸರು ನಡೆಸಿದ್ದ ಸಭೆಗೂ ಹಾಜರಾಗಿದ್ದ ಪುಷ್ಪ ಸೋಮನ ವಿರುದ್ಧ ಮಾತನಾಡಿದ್ಯಾಕೆ? ಇಲ್ಲಿದೆ ನೋಡಿ ಇಂಚಿಂಚು ಕಹಾನಿ.

ಹೌದು, ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ್ದ ಶಾಂತಿ ಸಭೆಗೆ ಪುಷ್ಪಾ ಹಾಜರಾಗಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ತುಮಕೂರಿನ ನಗರ ವಿಭಾಗದಲ್ಲಿ ಎಎಸ್ಪಿ ಮರಿಯಪ್ಪ ನೇತೃತ್ವದಲ್ಲಿ ನಡೆದಿದ್ದ ಶಾಂತಿ ಸಭೆ ಮಾಡಲಾಗಿತ್ತು. ಆ ಸಭೆಯಲ್ಲಿ ಪುಷ್ಪ ಭಾಗಿಯಾಗಿದ್ದಳು.
ರೌಡಿಶೀಟರ್ ಸೋಮನ ಆಪ್ತಳಾಗಿದ್ದ ಪುಷ್ಪ ಎರಡು ವರ್ಷದ ಹಿಂದೆ ಸೋಮನಿಂದ ದೂರವಾಗಿದ್ದಳು. ಹಣದ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿತ್ತು. ಪುಷ್ಪಳಿಗೆ ಸಂಬಂಧಿ ಆಸ್ತಿ ಪತ್ರಗಳನ್ನ ತನ್ನ ಬಳಿ ಇರಿಸಿಕೊಂಡಿದ್ದ ಸೋಮ. ಹಾಗಾಗಿ
ಪುಪ್ಪಳಿಂದ ಹಣ ಪಡೆದು ವಾಪಸ್ ಕೊಡದಿದ್ದಕ್ಕೆ ಸೋಮನ ಮೇಲೆ ಮುನಿಸಾಗಿತ್ತು.
2023ರ ದರೋಡೆ ಪ್ರಕರಣದ ಬಳಿಕ ದೂರಾಗಿದ್ದ ಪುಪ್ಪ, ಸೋಮನ ಮೇಲೆ ಸೇಡು ತೀರಿಸಿಕೊಳ್ಳಲು ಪುಪ್ಷ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ. ಸೂಪಾರಿ ಮಾಹಿತಿಯನ್ನ ರಾಕಿಗೆ ಶೇರ್ ಮಾಡಿದ್ದ ಪುಪ್ಷ, ಸೋಮನ ಮೇಲಿನ ಕೋಪದಿಂದಲ್ಲೇ ರಾಜೇಂದ್ರ ಕಡೆಯವರಿಗೆ ಮಾಹಿತಿ ನೀಡಿದ್ದಳು. ಕನ್ನಡ ಪರ ಸಂಘಟನೆಗಳೊಂದಿಗೆ ಕೆಲ ದಿನ ಓಡಾಡಿದ್ದ ಪುಷ್ಪ. ಎಲ್ಲಾವನ್ನು ಬಿಟ್ಟಿದ್ದೇನೆ ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಳು.