ಗಂಗಾವತಿ || ಶಾಲೆಗೆ ಹೊರಟಿದ್ದ ವೇಳೆ ಮೈಮೇಲೆ ಬಿದ್ದ ವಿದ್ಯುತ್ ವೈರ್: ಶಿಕ್ಷಕಿ ಸ್ಥಳದಲ್ಲೇ ಸಾ*

ಗಂಗಾವತಿ || ಶಾಲೆಗೆ ಹೊರಟಿದ್ದ ವೇಳೆ ಮೈಮೇಲೆ ಬಿದ್ದ ವಿದ್ಯುತ್ ವೈರ್: ಶಿಕ್ಷಕಿ ಸ್ಥಳದಲ್ಲೇ ಸಾ*

ಗಂಗಾವತಿ (ಕೊಪ್ಪಳ): ಶಾಲೆಗೆಂದು ಹೊರಟಿದ್ದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ ಆಕಸ್ಮಿಕ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಂಗಮರ ಕಲ್ಗುಡಿಯಲ್ಲಿ ಗುರುವಾರ ನಡೆದಿದೆ.

ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಿ ರಸ್ತೆಯಲ್ಲಿರುವ ಹರಿತಾ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ. ಅವರು ವಿದ್ಯಾನಗರದಲ್ಲಿರುವ ಶ್ರೀ ಗೊಟ್ಟಿಪಾಟಿ ವೆಂಕಟರತ್ನಂ ಮೆಮೋರಿಯಲ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಶಾಲೆಯ ವಾಹನ ಗ್ರಾಮಕ್ಕೆ ಬಂದು ನಿತ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತದೆ. ಎಂದಿನಂತೆ ಶಾಲೆಗೆ ಹೋಗಲು ತಮ್ಮ ಮನೆಯಿಂದ ಮಾವ ಪೂರ್ಣಚಂದ್ರರಾವ್ ಅವರೊಂದಿಗೆ ಬೈಕ್ನಲ್ಲಿ ಶಿಕ್ಷಕಿ ಹರಿತಾ ಬಂದಿದ್ದಾರೆ. ಆದರೆ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಪ್ರವಹಿಸಿ ತಂತಿ ಶಿಕ್ಷಕಿಯ ಮೇಲೆ ಬಿದ್ದಿದೆ. ಹೀಗಾಗಿ ವಿದ್ಯುತ್ ತಗುಲಿದ್ದರಿಂದ ಶಿಕ್ಷಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಶಿಕ್ಷಕಿಗೆ ನಾಲ್ಕು ವರ್ಷದ ಅವಳಿ ಮಕ್ಕಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *