ಬೆಂಗಳೂರು || ಜಾತಿ ಪದ್ಧತಿ, ಅಸ್ಪೃಶ್ಯ ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದ್ದು ಬಾಬುಜೀ ರವರು.

ಬೆಂಗಳೂರು || ಜಾತಿ ಪದ್ಧತಿ, ಅಸ್ಪೃಶ್ಯ ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದ್ದು ಬಾಬುಜೀ ರವರು.

ಬೆಂಗಳೂರು: ದೇವನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿನ ಬಾಬು ಜಗಜೀವನ್ ರಾಂ ರವರ ಪುತ್ಥಳಿಗೆ ಬಿಜೆಪಿ ವತಿಯಿಂದ ಮಾಲಾರ್ಪಣೆ ಮಾಡಿದರು.

ತಾಲ್ಲೂಕು ಬಿಜೆಪಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ರವರ 117 ನೇ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿ ಆವರಣದಲ್ಲಿನ ಬಾಬು ಜಗಜೀವನ್ ರಾಂ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ದೇಶಕ್ಕೆ ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ರವರು ಎರಡು ಕಣ್ಣುಗಳಿದ್ದಂತೆ  ಶೋಷಿತ ಸಮುದಾಯಕ್ಕೆ ಮಾತ್ರವಲ್ಲದೇ ಎಲ್ಲಾ ಸಮುದಾಯಕ್ಕೂ ಸಮಾನತೆಯನ್ನು ನೀಡಿದ ಮಹಾನ್ ಪುರುಷರು, ಬಾಬು ಜಗಜೀವನ್ ರಾಂ ರವರು ಭಾರತದ ರಕ್ಷಣಾ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದರು . ಎರಡು ಪ್ರತ್ಯೇಕ ಅಧಿಕಾರಾವಧಿಯಲ್ಲಿ ಕೇಂದ್ರ ಕೃಷಿ ಸಚಿವರಾಗಿ , ಅವರು ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದರು, ವಿಶೇಷವಾಗಿ 1974 ರ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು, ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರಲ್ಲಿ ಪ್ರಮುಖರು ಬಾಬುಜೀರವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಅಂಬರೀಶ್ ಗೌಡ, ಬಯಪ್ಪ ಮಾಜಿ ಅಧ್ಯಕ್ಷ ಅಶ್ವಥ್ ನಾರಾಯಣ್, ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ನಂಜೇಗೌಡ, ರವಿಕುಮಾರ್, ಹಾಗೂ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *