ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೊ ಯೋಜನೆ ರಾಜಧಾನಿಯ ಎಲ್ಲ ದಿಕ್ಕುಗಳಲ್ಲೂ ವಿಸ್ತರಣೆ ಆಗುತ್ತಿದೆ. ಹೊಸ ಯೋಜನೆಗಳು ಆರಂಭಕ್ಕೆ ದಿನಗಣನೇ ಶುರುವಾಗಿದೆ. ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತಗೊಳ್ಳಲು ಸಜ್ಜಾಗಿವೆ. ಹೀಗೆ ಮಟ್ರೋ ಜಾಲ ವಿಸ್ತರಣೆ ಆಗುತ್ತಿರುವ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವೃದ್ಧಿಸಲಿದೆ. ಆಸ್ತಿಗಳ ಮೌಲ್ಯಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಲಿವೆ. ನಗರದ ಹೊರವಲಯದ ಅಭವೃದ್ಧಿ ಈ ಮೂಲಕ ಕೊಡುಗೆ ಸಿಕ್ಕಂತಾಗುತ್ತದೆ. ಹೆಚ್ಚಿನ ಅವಕಾಶಗಳು ಹೊರ ವಲಯಕ್ಕೂ ವ್ಯಾಪಿಸಬಹುದು ಎನ್ನಲಾಗುತ್ತಿದೆ.

ಬೆಂಗಳೂರಿನ ನಮ್ಮ ಮೆಟ್ರೋ ಇದೊಂದು ಸುಧಾರಿತ ಸಾರ್ವಜನಿಕ ಸಾರಿಗೆಯಾಗಿದೆ. ಜನರು ಹೆಚ್ಚು ಇಷ್ಟು ಪಡುವ ಹಾಗೂ ದೈನಂದಿನ ಅವಲಂಬನೆ ಆಗಿದೆ. ಹೀಗಾಗಿ ನಗರದ ಹೊರ ಭಾಗಕ್ಕೂ ಸೂಕ್ತ ಸಾರಿಗೆ ಸೇವೆ ಸಿಕ್ಕರೆ, ರಿಯಲ್ ಎಸ್ಟೇಟ್ ಜೊತೆಗೆ ಕೈಗಾರಿಕೆ, ವಾಸಸ್ಥಾನ, ಹೂಡಿಕೆ ಮುಂತಾದವುಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ನಗರದ ಜನದಟ್ಟಣೆ ಕೊಂಚ ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನಮ್ಮ ಮೆಟ್ರೋ ದೇವನಹಳ್ಳಿವರೆಗೆ ವಿಸ್ತರಣೆ ಆಗಲಿದೆ. ಹೆಬ್ಬಾಳ-ಸರ್ಜಾಪುರ ಕಡೆಗೆ ಕೆಂಪು ಮಾರ್ಗ ನಿರ್ಮಿಸಲು ಬಿಎಂಆರ್ಸಿಎಲ್ ಸಜ್ಜಾಗಿದೆ. ಈಗಾಗಲೇ ಸರ್ಜಾಪುರ, ಬೆಳ್ಳಂದೂರು ಭಾಗಗಳಲ್ಲಿ ಮೂರು ವರ್ಷದಲ್ಲಿ ಚದರ ಅಡಿ ಮೌಲ್ಯ ದುಪ್ಪಟ್ಟು, ಮೂರು ಪಟ್ಟಿನಷ್ಟು ಏರಿಕೆ ಆಗಿದೆ. ನೇರಳೆ ಮಾರ್ಗ, ಹಸಿರು ಹಾಗೂ ಹಳದಿ ಮೆಟ್ರೋ ಮಾರ್ಗ ನಿರ್ಮಾಣ ಸ್ಥಳಗಳಲ್ಲಿ ಜಾಗಗಳ ಮೌಲ್ಯ ಶೇಕಡಾ 20ರಷ್ಟು ಹೆಚ್ಚಾಗಿದೆ.
ಚಲ್ಲಘಟ್ಟ-ವೈಟ್ಫೀಲ್ಡ್ (ಕಾಡುಗೋಡಿ) ವರೆಗೆ ನೇರಳೆ ಮೆಟ್ರೋ ಮಾರ್ಗ ಕಾರ್ಯ ನಿರ್ವಹಿಸುತ್ತಿದೆ. 37 ನಿಲ್ದಾಣ ಹೊಂದಿರುವ ಈ ಮಾರ್ಗವು ಹಸಿರು ಮಾರ್ಗಕ್ಕಿಂತ ದೊಡ್ಡ ಜಾಲ ಹೊಂದಿದೆ. ನಾಗಸಂದ್ರದಿಂದ ರೇಷ್ಮೇ ಸಂಸ್ಥೆವರೆಗೆ ಇರುವ ಹಸಿರು ಮಾರ್ಗವು 30 ನಿಲ್ದಾಣ ಹೊಂದಿದೆ. ಈ ಭಾಗಗಳಲ್ಲಿ ಆಸ್ತಿಗಳಿಗೆ ಬಂಗಾರದ ಬೆಲೆ ಇದೆ. ಇವುಗಳೊಂದಿಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಸ್ಥಳಗಳಲ್ಲಿ ಈಗಾಗಲೇ ಜಾಗಗಳ ಬೆಲೆ, ಮಾತ್ರವಲ್ಲದೇ ಮನೆ ಬಾಡಿಗೆ ಬೆಲೆ ಏರಿಕೆ ಆಗಿದೆ ಎಂದು ಸಾಕಷ್ಟು ವರದಿಗಳು ತಿಳಿಸಿವೆ.
ಬೆಂಗಳೂರು ಉತ್ತರ ಭಾಗದಲ್ಲಿ ಮನೆ ಬಾಡಿಗೆ ಬೆಲೆಗಳು ಶೇಕಡಾ 20 ರಿಂದ 30ರಷ್ಟು ಹೆಚ್ಚಾಗಬಹುದು. ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಮನೆ ಬಾಡಿಗೆ ಹೂಡಿಕೆದಾರರ ಆದಾಯ ಶೇಕಡಾ 28ರಷ್ಟು ಹೆಚ್ಚಾಗಲಿದೆ ಎಂದು ಬ್ರೋಕರ್ಇನ್ಬ್ಲೂನ ಮುಖ್ಯ ರಿಯಲ್ ಎಸ್ಟೇಟ್ ಅಧಿಕಾರಿ ಮಂಜೇಶ್ ರಾವ್ ಅವರು ಊಹಿಸಿದ್ದಾರೆ. ಇದಕ್ಕೆಲ್ಲ ನಮ್ಮ ಮೆಟ್ರೋ ಸುಗಮ ಮತ್ತು ಸುರಕ್ಷಿತ ಸಾರಿಗೆ ಸೇವೆಯೇ ಕಾರಣ ಎಂದಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಹೊಸ ಮಾರ್ಗಗಳು ನಿರ್ಮಾಣಕ್ಕೆ ಪ್ಲಾನ್ ನಡೆದಿದೆಯೋ ಹಾಗೂ ಹೊಸ ಮೆಟ್ರೋ ಮಾರ್ಗಗಳಲ್ಲಿ ಮುಂದಿನ 3-4 ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಮತ್ತು ಕನಿಷ್ಠ ಮನೆ ಬಾಡಿಗೆ ದರಗಳು 10 ರಿಂದ 20 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂದಿನ ಐದು ವರ್ಷಗಳಲ್ಲಿ ರಿಯಲ್ ಎಸ್ಟೇಟ್, ಮನೆ ಮಾಲೀಕರ ಆದಾಯ ವಾರ್ಷಿಕ ಶೇಡಾ 10ರಷ್ಟು ಏರಿಕೆ ಆಗಲಿದೆ ಎಂದು ಅವರು ವಿವರಿಸಿದರು.
ದಕ್ಷಿಣ ಬೆಂಗಳೂರಿನ ಪ್ರಮುಖ ರಸ್ತೆಯ ಅಕ್ಕಪಕ್ಕ, ಮೆಟ್ರೋ ಲೈನ ಸಮೀಪದ ಪ್ರದೇಶಗಳಲ್ಲಿ 2BHK ಬಾಡಿಗೆಗಳು ತಿಂಗಳಿಗೆ ರೂ.30,000 ರಿಂದ ₹35,000 ವರೆಗೆ ಇರಲಿದೆ. ಇನ್ನೂ ಸರ್ಜಾಪುರ, ಬೆಳ್ಳಂದೂರು ವ್ಯಾಪ್ತಿಯಲ್ಲಿ ಮನೆ ಬಾಡಿಗೆ ₹40,000 ತಲುಪುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿಂದ ವೈಟ್ಪಿಲ್ಡ್, ಸಿಲ್ಕಬೋರ್ಡ್, ಮಾರತ್ತಹಳ್ಳಿ, ಮಹಾದೇವಪುರ ಮತ್ತು ಎಲೆಕ್ಟ್ರಾನಿಕ್ ಸಿಟಿ ಕೊಂಚ ಸಮೀಪವಾಗುತ್ತದೆ. ನಮ್ಮ ಮೆಟ್ರೋ ಯೋಜನೆಗಳು: ರಿಯಲ್ ಎಸ್ಟೇಟ್ಗೆ ಬೂಸ್ಟ್.. ಕರ್ನಾಟಕ ರಾಜ್ಯ ಸರ್ಕಾರ ಕಳೆದ ವರ್ಷ ನಮ್ಮ ಮೆಟ್ರೋ ಯೋಜನೆ 3ಎ ಹಂತಕ್ಕೆ ಅನುಮೋದನೆ ನೀಡಿದೆ. ಅಲ್ಲದೇ ಮುಂದಿನ ಎಲ್ಲ ಮೆಟ್ರೋ ಎತ್ತರದ ಯೋಜನೆಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೆತುವೆ ನಿರ್ಮಾಣಕ್ಕೆ ಕಡ್ಡಾಯವಾಗಿ ಸೂಚಿಸಿದೆ. ಹೆಬ್ಬಾಳದಿಂದ ಸರ್ಜಾಪುರ ವರೆಗೆ 36 ಕಿಲೋ ಮೀಟರ್ ರೆಡ್ ಲೈನ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಭೂಮಿ ಸ್ವಾಧೀನ ಕಾರ್ಯ ನಡೆಯುತ್ತಿದೆ. ಈ ಯೋಜನೆ ಹಾಗೂ ಮೆಟ್ರೋ ಇತರ ಕಾರ್ಯಕ್ಕಾಗಿ ಹೆಬ್ಬಾಳದಲ್ಲಿ KIADB ಸುಪರ್ದಿಯಲ್ಲಿರುವ 45 ಎಕರೆ ಪ್ರದೇಶ ನೀಡುವಲ್ಲಿ ವಿಳಂಬವಾಗುತ್ತಿದೆ.
ಈ ಮೆಟ್ರೋ ಕೆಂಪು ಮಾರ್ಗವು ಆಗ್ನಯೇ ಸರ್ಜಾಪುರ ಭಾಗದಿಂದ ಹೆಬ್ಬಾಳಕ್ಕೆ ಸಾಗುತ್ತದೆ. ಐಟಿ ಕೇಂದ್ರವಾದ ಬೆಳ್ಳಂದೂರು, ಮಹಾದೇವಪುರ, ಸರ್ಜಾಪುರ, ಮಾರತ್ತಹಳ್ಳಿಗೆ ಓಡಾಡುವವರಿಗೆ ಅನುಕೂಲಾಗಲಿದೆ. 28 ನಿಲ್ದಾಣಗಳನ್ನು ಈ ಲೈನ್ ಹೊಂದಿರಲಿದೆ. ಈ ಮಾರ್ಗದಲ್ಲಿ ಒಟ್ಟು 05 ಇಂಟರ್ಚೇಂಜ್ ಮೆಟ್ರೋ ನಿಲ್ದಾಣಗಳು ಸ್ಥಾಪನೆಯಾಗಲಿವೆ. ಸೆಂಟ್ರಲ್ ಸಿಲ್ಕ್ಬೋರ್ಡ್ನಿಂದ ಕೆ.ಆರ್.ಪುರಂ ಮಾರ್ಗವಾಗಿ ಎರಡು ಹಂತಗಳಲ್ಲಿ ದೇವನಹಳ್ಳಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಮೆಟ್ರೋ ಸಾರಿಗೆ ನೀಡಲು ನೀಲಿ ಮಾರ್ಗ ನಿರ್ಮಿಸಲಾಗುತ್ತಿದೆ. ಇಲ್ಲಿಂದ ಈಮಾರ್ಗವನ್ನು ಮುಂದೆ ದೇವನಹಳ್ಳಿವರೆಗೆ ವಿಸ್ತರಣೆ ಮಾಡುವುದಾಗಿ ಕರ್ನಾಟಕ ಬಜೆಟ್ 2025ರಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ವೃದ್ಧಿ ರಿಯಲ್ ಎಸ್ಟೇಟ್ ತಜ್ಞರು ಹೇಳುವಂತೆ ನಮ್ಮ ಮೆಟ್ರೋ ಸಂಪರ್ಕದ ಮಾರ್ಗಗಳು, ಪ್ರದೇಶಗಳ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಆಗಲಿವೆ. ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲಿವೆ. ಮನೆ ಬಾಡಿಗೆಯೂ ಏರಿಕೆ ಆಗಲಿದೆ. ನಿರಂತರವಾಗಿ ಸರ್ಜಾರಪುರ, ಮಹಾದೇವಪುರ ಬೆಳೆದಿದ್ದರೂ ಸಹ ಇಲ್ಲಿಗೆ ಸುಗಮ ಸಂಚಾರ, ಸಾರಿಗೆ ಸೇವೆ ಕೊರತೆ ಇದೆ. ಹೀಗಾಗಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮುಂಬರಲಿರುವ ನಮ್ಮ ಮೆಟ್ರೋ ಹೊಸ ಮಾರ್ಗಗಳು ನೀರ್ಣಾಯಕ ಅಂತಲೂ ಹೇಳಲಾಗುತ್ತಿದೆ. ಬೆಂಗಳೂರಿನ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ನಗರದ ಹೃದಯಭಾಗಗಳು ಹಾಗೂ ಹೊರ ವಲಯದಲ್ಲಿ ಮನೆ ಬಾಡಿಗೆ ದರ ಹೆಚ್ಚಾಗಿದೆ. ಅಪಾರ್ಟ್ಮೆಂಟ್ ದರ ಮಧ್ಯಮ ವರ್ಗದವರಿಗೆ ಮರಿಚಿಕೆ ಆಗಿವೆ. ಬೆಂಗಳೂರು ಉತ್ತರ ಭಾಗದಲ್ಲಿ 2 ಬಿಎಚ್ಕೆ ಅಪಾರ್ಟ್ಮೆಂಟ್ಗಳ ಬೆಲೆ 60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅದರಲ್ಲಿಯೇ ಪ್ರೀಮಿಯಂ ಮನೆಗಳ ಖರೀದಿಗೆ ನೀವು ಕನಿಷ್ಠ 1.5 ಕೋಟಿ ರೂಪಾಯಿ ನೀಡಬೇಕಾಗುತ್ತದೆ.ಮುಂದಿನ ದಿನಗಳಲ್ಲಿ ಇವುಗಳ ಬೆಲೆ ಮತ್ತಷ್ಟು ಏರಿಕೆ ಆದರೆ ಅಚ್ಚರಿಪಡಬೇಕಿಲ್ಲ.