ಬೆಂಗಳೂರು: ಬೆಂಗಳೂರಿನಲ್ಲಿ ಎರಡು ದಿನ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ, ಯಾರದ್ದ ತಪ್ಪಿದೆ ಎಂದು ಸಾರ್ವಜನಿಕರು ತಲೆ ಕೆಸಿಕೊಳ್ಳುವಂತೆ ಮಾಡಿದ್ದ ರೋಡ್ ರೇಜ್ ಪ್ರಕರಣ ತನಿಖೆ ನಡೆಯುತ್ತಿದೆ. ವಿಂಗ್ ಕಮಾಂಡ್ ನಿಂದ ಹಲ್ಲೆಗೊಳಲಾದ ಬೈಕ್ ಸವಾರ ವಿಕಾಸ್ ಕುಮಾರ್ ಅವರನ್ನು ಡಿಕೆ ಶಿವಕುಮಾರ್ ಬುಧವಾರ ಭೇಟಿ ಮಾಡಿದ್ದಾರೆ. ದೈರ್ಯ ತುಂಬಿದ್ದಾರೆ. ತಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.

ಸೋಮವಾರ ಬೈಯಪ್ಪನಹಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳ್ಳಂಬೆಳ್ಳಗ್ಗೆ ಕಾರಿನ ಚಾಲಕ ಹಾಗೂ ಬೈಕ್ ಸವಾರರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದ್ದು, ಕೈ ಕೈ ಮಿಲಾಯಿಸಿದ್ದರು. ವಿಂಗ್ ಕಮಾಂಡರ್ ಮುಖದಲ್ಲಿ ರಕ್ತವು ಹರಿದಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಬುಧವಾರ ಈ ಗಲಾಟೆಯ ಸಂತ್ರಸ್ತರ ಮನೆಗೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದು, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಈ ಕುರಿತು ಡಿಸಿಎಂ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ನಿಮಗೆ ಸರ್ಕಾರದಿಂದ ನ್ಯಾಯ ಒದಗಿಸಲಾಗುವುದು ಎಂದು ಅವರು ದೃಢಪಡಿಸಿದ್ದಾರೆ. ವಿಕಾಸ್ ತಾಯಿಯ ಆರೋಗ್ಯ, ಕ್ಷೇಮ ವಿಚಾರಿಸಿದ್ದಾರೆ. ಘಟನೆಯ ಮಾಹಿತಿ ಸಹ ವಿಕಾಸ್ ಅವರಿಂದ ಕೇಳಿದ್ದಾರೆ ಎನ್ನಲಾಗಿದೆ. ರಕ್ತ ಸೋರುವಾಗಲೇ ವಿಡಿಯೋ ಮಾಡಿದ್ದ ಬೋಸ್ ಘಟನೆ ಬಳಿಕ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮುಖದಲ್ಲಿ ರಕ್ತ ಬರುತ್ತಿತ್ತು. ಇದೇ ವೇಳೆ ಅವರು ಸೆಲ್ಫಿ ವಿಡಿಯೋ ಮಾಡಿ ವಿಕಾಸ್ ತಮ್ಮ ಮೇಲೆ ನಡೆಸಿದ್ದಾರೆ ಎಂದೆಲ್ಲ ಹೇಳಿಕೊಂಡಿದ್ದರು. ಈ ಮೂಲಕ ಅವರು ವಿಕಾಸ್ ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದರು ಎಂಬುದು ನಂತರ ಗೊತ್ತಾಯಿತು.
ಘಟನೆ ಬೆನ್ನಲ್ಲೆ ಬೈಯಪ್ಪನಹಳ್ಳಿ ಠಾಣೆಯಲ್ಲಿ ಬೋಸ್ ಮತ್ತು ಅವರ ಪತ್ನಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ವಿಕಾಸ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಿದರು. ಬಳಿಕ ವಿಕಾಸ್ ಅವರು ಪ್ರತಿ ದೂರು ಸಹ ದಾಖಲಿಸಿದರು. ಆ ದೂರಿನಲ್ಲಿ ವಿಂಗ್ ಕಮಾಂಡರ್ ಫೋನ್ ಮತ್ತು ಬೈಕ್ ಕೀಲಿಗಳನ್ನು ಎಸೆದಿದ್ದಾರೆ. ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿ ದೂರು ನೀಡಿದರು.
ಇದೆಲ್ಲ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಸಿಕ್ಕ ಸಿಸಿಟಿವಿ ವಿಡಿಯೋ ನೋಡಿದರೆ, ವಿಂಗ್ ಕಮಾಂಡ್ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದು ಗೊತ್ತಾಗಿದೆ. ತಾನು ಅಧಿಕಾರಿ ಅಂತಲೂ ಬೆದರಿಕೆ ಹಾಕಿದ್ದಾನೆ. ನಿರಂತರವಾಗಿ ಒದೆಯುವುದು ಗೊತ್ತಾಗಿದೆ. ಕೂಡಲೇ ವಿಕಾಸ್ಗೆ ಪೊಲೀಸರ ವೈದ್ಯಕೀಯ ನೆರವು ನೀಡಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸರು ಬೋಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭವಾಗಿದೆ.
ಆಗಿದ್ದೇನು? ಪೊಲೀಸರು ಸಿಸಿಟಿವಿ ಮಾತ್ರವಲ್ಲದೇ ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಸಂಗ್ರಹಿಸಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪೊಲೀಸರು ಸಜ್ಜಾಗಿದ್ದಾರೆ. ಸೋಮವಾರ ಬಳಗ್ಗೆ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ತಮ್ಮ ಪತ್ನಿಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ವಾಹನ ಓವರ್ ಟೇಕ್ ವಿಚಾರವಾಗಿ ಬೋಸ್ ಹಾಗೂ ವಿಕಾಸ್ ಮಧ್ಯೆ ಮಾತಿಗೆ ಮಾತು ಬೆಳೆದು ನೋಡ ನೋಡುತ್ತಿದ್ದಂತೆ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿವೆ.