ಹುಡುಗರಂತೆ Beard, mustache ಬರುತ್ತಾ? ಈ ಸಮಸ್ಯೆ ತಡೆಯಲು ಇಲ್ಲಿದೆ Doctor’s advice

ಹುಡುಗರಂತೆ Beard, mustache ಬರುತ್ತಾ? ಈ ಸಮಸ್ಯೆ ತಡೆಯಲು ಇಲ್ಲಿದೆ Doctor's advice

ಗಡ್ಡ, ಮೀಸೆ ಬರುವುದು ಹುಡುಗರಿಗೆ ಮಾತ್ರ. ಆದರೆ ಕೆಲವು ಹುಡುಗಿಯರಿಗೂ ಈ ರೀತಿ ಸಮಸ್ಯೆ ಕಂಡು ಬರುತ್ತದೆ. ಅದಕ್ಕಾಗಿಯೇ ಅವರು ಪ್ರತಿ ತಿಂಗಳು ಹುಡುಗರಂತೆ ಶೇವ್ ಮಾಡಿಕೊಳ್ಳುತ್ತಾರೆ. ಇದನ್ನು ಮರೆಮಾಚುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಅದು ಸಾಧ್ಯವಾಗುವುದಿಲ್ಲ. ಈ ರೀತಿ ಪ್ರತಿ ಬಾರಿ ಆಗುವ ಮುಜುಗರಕ್ಕೆ ಶಾಶ್ವತ ಪರಿಹಾರ ನೀಡಲು ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

ಹುಡುಗರಿಗೆ ಮೀಸೆ ಗಡ್ಡ ಬರುವುದು ಸಹಜ. ಆದರೆ ಹುಡುಗಿಯರಿಗೆ ಈ ರೀತಿ ಆದರೆ ಯಾರಿಗಾದರೂ ಮುಜುಗರ ಆಗುತ್ತದೆ. ನೀವು ಕೂಡ ನೋಡಿರಬಹುದು ಕೆಲವು ಹುಡುಗಿಯರಲ್ಲಿ ಈ ರೀತಿ ಸಮಸ್ಯೆ ಕಂಡುಬರುತ್ತದೆ. ಅದಕ್ಕಾಗಿಯೇ ಅವರು ಪ್ರತಿ ತಿಂಗಳು ಹುಡುಗರಂತೆ ಶೇವ್ ಮಾಡಿಕೊಳ್ಳುತ್ತಾರೆ. ಆದರೂ ಕೂಡ ಎಲ್ಲ ಹುಡುಗಿಯರ ರೀತಿ ಮುಖ ಕ್ಲಿಯರ್ ಆಗಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಎಷ್ಟೇ ಮರೆಮಾಚಲೂ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ರೀತಿ ಸಮಸ್ಯೆ ಕಂಡು ಬರಲು ಕಾರಣವೇನು? ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

ಈ ಬಗ್ಗೆ ಡಾ. ಐಶ್ವರ್ಯಾ ಗೌಡ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ, ಅನೇಕ ಮಹಿಳೆಯರಿಗೆ ಮೇಲಿನ ತುಟಿ ಮತ್ತು ಗಲ್ಲದಲ್ಲಿ ಕೂದಲಿನ ಬೆಳವಣಿಗೆಯ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣವೇನೆಂದರೆ ನಿಮ್ಮ ದೇಹದಲ್ಲಿ ಆಂಡ್ರೊಜೆನ್ ಮಟ್ಟ ಹೆಚ್ಚಾಗಿರುತ್ತದೆ ಇದು ಪುರುಷರ ಹಾರ್ಮೋನ್ ಹಾಗಾಗಿ ಆ ಹಾರ್ಮೋನ್ ಗಳನ್ನು ಕಡಿಮೆ ಮಾಡಿಕೊಂಡರೆ ಈ ಸಮಸ್ಯೆಯನ್ನು ತಡೆಯಬಹುದು ಎಂದಿದ್ದಾರೆ. ಜೊತೆಗೆ ಅವರು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾತ್ರೆ ಅಥವಾ ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಅದನ್ನು ಹೇಗೆ ತಡೆಯಬಹುದು ಎಂಬುದನ್ನು ಹೇಳಿದ್ದಾರೆ.

ಮೀಸೆ, ಗಡ್ಡ ಬರುವುದನ್ನು ತಡೆಯಲು ಇಲ್ಲಿದೆ ಮನೆಮದ್ದು;

ಅವರು ಹೇಳಿರುವ ಪ್ರಕಾರ, “ಈ ಸಮಸ್ಯೆಯನ್ನು ಶಾಶ್ವತವಾಗಿ ಕಡಿಮೆ ಮಾಡಿಕೊಳ್ಳಲು, ಒಂದು ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ಚಕ್ಕೆ ಪುಡಿಯನ್ನು ಸೇರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ಬಳಿಕ ಪ್ರತಿನಿತ್ಯ ಈ ನೀರನ್ನು ದಿನದಲ್ಲಿ ಒಂದು ಅಥವಾ ಎರಡು ಬಾರಿ ಕುಡಿಯಲು ಆರಂಭ ಮಾಡಿ. ಸರಿ ಸುಮಾರು ಒಂದು ತಿಂಗಳು ನಿರಂತರವಾಗಿ ಈ ಅಭ್ಯಾಸವನ್ನು ತಪ್ಪದೆ ಪಾಲನೆ ಮಾಡಿ. ಆಗ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಅದಲ್ಲದೆ ಈ ರೀತಿ ಆರೋಗ್ಯಕರ ಅಭ್ಯಾಸದಿಂದ ಕ್ರಮೇಣ ಆಂಡ್ರೊಜೆನ್ ಮಟ್ಟವೂ ಕೂಡ ಕಡಿಮೆ ಆಗುತ್ತದೆ” ಎಂದು ಅವರು ಹೇಳಿದ್ದಾರೆ. ನಿಮಗೂ ಈ ರೀತಿಯ ಸಮಸ್ಯೆ ಇದ್ದರೆ ಮಾತ್ರೆ ಔಷಧಿಗಳ ಮೊರೆ ಹೋಗುವ ಬದಲು ಈ ಸಿಂಪಲ್ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ.

Leave a Reply

Your email address will not be published. Required fields are marked *