ಎಷ್ಟೇ ಟೆನ್ಷನ್ ಇದ್ರೂ ಒಂದು ಗುಟುಕು ಟೀ ಹೀರಿದ್ರೆ ಸಾಕು ನೂರು ಗಂಟೆ ಕೆಲಸ ಮಾಡುವ ಶಕ್ತಿ ಬರುತ್ತೆ ಎಂದು ಹೇಳುತ್ತಾರೆ.ಆದ್ರೆ ಹೆಚ್ಚು ಟೀ ಸೇವನೆ ಆರೋಗ್ಯದ ಮೇಲೆ ಕೆಲವೊಂದು ಪರಿಣಾಮ ಬೀರುತ್ತವೆ.
ಇನ್ನು ಮಧುಮೇಹಿಗಳು ಸಕ್ಕರೆ ಇಲ್ಲದಿರೋ ಟೀ ಕುಡಿಯುವ ಮೂಲಕ ತಮ್ಮ ಟೀ ಚಟದ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಆರೋಗ್ಯ ದೃಷ್ಟಿಯಿಂದ ಬ್ಲಾಕ್ ಟೀ, ಲೆಮನ್ ಟೀ, ಗ್ರೀನ್ ಟೀ ಅಂತಹ ಪಾನೀಯ ಕುಡಿಯುತ್ತಾರೆ.
ಒಂದು ವಾರ ಟೀ ಕುಡಿಯೋದು ಬಿಟ್ಟರೆ ಅಜೀರ್ಣತೆ, ಅಸಿಡಿಟಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಹಾ ಸೇವನೆಯಿಂದ ದೂರ ಉಳಿದರೆ ಎದೆಯುರಿ, ತಲೆತಿರುಗುವಿಕೆ, ಹೃದಯದ ಬಡಿತದ ಏರಿಳಿದಂತಹ ಸಮಸ್ಯೆಗಳು ಕಡಿಮೆ ಆಗುತ್ತವೆ. ನಿಮ್ಮ ಕೈಗಳು ನಡುಗುತ್ತಿದ್ರೆ ಚಹಾ ಕುಡಿಯೋದರಿಂದ ಈ ಸಮಸ್ಯೆ ಹಂತ ಹಂತವಾಗಿ ಕಡಿಮೆಯಾಗುತ್ತದೆ.
ಟೀ ಕುಡಿಯೋದು ಬಿಟ್ಟರೆ ಚೆನ್ನಾಗಿ ನಿದ್ದೆ ಮಾಡಬಹುದು. ಅತಿಸಾರ, ವಾಂತಿ ಅಥವಾ ಕೆಟ್ಟ ಉಬ್ಬಳಿಕೆ/ತೇಗು ಸಮಸ್ಯೆಗಳು ಕಡಿಮೆಯಾಗುತ್ತವೆ. ಇದೆಲ್ಲದರ ಜೊತೆಗೆ ತೂಕ ಇಳಿಕೆಯಾಗಲು ಆರಂಭವಾಗುತ್ತದೆ. ದಿನಕ್ಕೆ ಮೂರು ಕಪ್‌ಗಿಂತ ಹೆಚ್ಚು ಟೀ ಕುಡಿಯೋದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.