ಧರ್ಮಸ್ಥಳ : ಇಂದು 6ನೇ ಗುಂಡಿ ಉತ್ಖನನ ವೇಳೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಮೊನ್ನೆಯಿಂದ ಗುಂಡಿಗಳ ಉತ್ಖನನ ಕಾರ್ಯ ನಡೆಯುತ್ತಲೇ ಇತ್ತು. ಆದರೆ 5 ಗುಂಡಿಗಳನ್ನು ಕಳೆಬರ ಸಿಕ್ಕಿರಲಿಲ್ಲ. ಆದರೆ ಇದೀಗ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆ. ಸ್ಪಾಟ್ ನಂಬರ್ 6ರಲ್ಲಿ ಅಸ್ಥಿಪಂಜರದ ಅವಶೇಷ ಸಿಕ್ಕಿವೆ.
6ನೇ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ!
ಧರ್ಮಸ್ಥಳದ ಬುರುಡೆ ಕೇಸ್ ಸಂಬಂಧಿಸಿದಂತೆ ಮೊದಲೇ ದಿನದಿಂದಲೂ ಹುಡುಕಾಟ ನಡೆಯುತ್ತಲೇ ಇತ್ತು,ಇದೀಗ 6ನೇ ಗುಂಡಿಯಲ್ಲಿ ಅಸ್ತಿಪಂಜರದ ಅವಶೇಷಗಳು ಸಿಕ್ಕಿರೋ ಮಾಹಿತಿ ಲಭ್ಯವಾಗುತ್ತಿದೆ. ಇನ್ನೂ 6ನೇ ಗುಂಡಿಯಲ್ಲಿ ಮೂಳೆಗಳನ್ನು ಎಸ್ಐಟಿ ಸಂಗ್ರಹಿಸಿಕೊಂಡಿದೆ. ಅನಾಮಿಕ ಹೇಳಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. 6ನೇ ಪಾಯಿಂಟ್ನಲ್ಲಿ ಕೆಲ ಮೂಳೆಗಳು ಪತ್ತೆಯಾಗಿದೆ. ಇಂದೇ FSLಗೆ ಈ ಮೂಳೆಗಳನ್ನು ರವಾನಿಸೋ ಸಾಧ್ಯತೆ ಕೂಡ ಇದೆ.
ಆರನೇ ಪಾಯಿಂಟ್ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕಾರ್ಮಿಕರು ಮತ್ತಷ್ಟು ಮೂಳೆಗಳನ್ನು ಹುಡುಕಲು ಮಣ್ಣು ಹೊರಗೆ ಹಾಕುತ್ತಿದ್ದಾರೆ.