ಶಿವಮೊಗ್ಗ : ನರೇಂದ್ರ ಮೋದಿ ಅವರಂಥ ವ್ಯಕ್ತಿ ದೇಶದ ಪ್ರಧಾನ ಮಂತ್ರಿಯಾಗಿ ಸಿಕ್ಕಿರೋದು ನಮ್ಮೆಲ್ಲರ ಸೌಭಾಗ್ಯ, ಅವರು ವಿಶ್ವದ ಉದ್ದಗಲಕ್ಕೆ ಓಡಾಡಿ ಭಾರತದ ಶ್ರೇಷ್ಠತೆಯನ್ನು ಸಾರುತ್ತಿದ್ದಾರೆ, ಇಡೀ ವಿಶ್ವವೇ ಇವತ್ತು ಭಾರತದತ್ತ ಬೆರಗುಗಣ್ಣುಗಳಿಂದ ನೋಡುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಮೋದಿಯವರು ದೇಶವನ್ನು ಸುಭದ್ರಪಡಿಸುವುದಕ್ಕೋಸ್ಕರ ಹಾಕುತ್ತಿರುವ ಶ್ರಮವನ್ನು ಇಂದಿನ ಯುವ ಪೀಳಿಗೆ ಯಾವತ್ತೂ ಮರೆಯಬಾರದು ಎಂದು ಯಡಿಯೂರಪ್ಪ ಹೇಳಿದರು.