ತುಮಕೂರು: ನಗರದಲ್ಲಿ ಇತ್ತೀಚಿಗೆ ಬೈಕ್ ಕಳ್ಳತನಗಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ಎಲ್ಲಿಯೂ ಬೈಕ್ ನಿಲ್ಲಿದಲು ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಇತ್ತೀಚಿಗಷ್ಟೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ, ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಬೈಕ್ ಮಾಯ ಮತ್ತು ಹಲವು ಪ್ರಕರಣಗಳು ದಾಖಲಾಗಿದ್ದವು
ಒಂದು ತಿಂಗಳ ಹಿಂದೆ ಕ್ಯಾತ್ಸಂದ್ರದ ಕೌತಮಾರನಹಳ್ಳಿ ಗ್ರಾಮದ ಬಸವಣ್ಣನ ದೇಗುಲ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿದ್ದು, ತಡವಾಗಿ ಪ್ರಕರಣ ದಾಖಲಿಸಲಾಗಿದೆ.
ಗೂಳೂರು ಹೋಬಳಿಯ ದೊಡ್ಡನಂಜಯ್ಯನ ಪಾಳ್ಯದ ಉದಯ ಕುಮಾರ್ ಎಂಬುವವರು ಮರಗೆಲಸ ಮಾಡಿಕೊಂಡಿದ್ದು, ಜೂ.25 ರಂದು ಕೌತಮಾರನಹಳ್ಳಿಯ ಬಸವಣ್ಣನ ದೇಗುಲದ ಬಳಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು.
ಮರಗೆಲಸ ಮುಗಿಸಿಕೊಂಡು ಒಂದು ವಾರದ ನಂತರ ಬಂದ ನೋಡಿದಾಗ ಅಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿಲ್ಲ, ಸುತ್ತ ಮುತ್ತ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಇದೇ ವೇಳೆ ಉದಯ್ ಅವರ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ತಡವಾಗಿ ಬಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
For More Updates Join our WhatsApp Group :