ಕನ್ನಡದ ಮೂವರು ನಿರ್ದೇಶಕರು ಕೆಲವೇ ಸಮಯದ ಅಂತರದಲ್ಲಿ ಬಾಲಿವುಡ್ಗೆ ಹಾರಿದ್ದಾರೆ. ಅಸಲಿ ಸತ್ಯ ಇಲ್ಲಿದೆ ನೋಡಿ?

ಕನ್ನಡದ ಮೂವರು ನಿರ್ದೇಶಕರು ಕೆಲವೇ ಸಮಯದ ಅಂತರದಲ್ಲಿ ಬಾಲಿವುಡ್ಗೆ ಹಾರಿದ್ದಾರೆ. ಅಸಲಿ ಸತ್ಯ ಇಲ್ಲಿದೆ ನೋಡಿ?

ಕನ್ನಡ ಚಿತ್ರರಂಗದ ವ್ಯಾಪ್ತಿ ಹಿರಿದಾಗುತ್ತಾ ಹೋಗುತ್ತಿದೆ. ಕನ್ನಡದ ತಂತ್ರಜ್ಞರು ಹಾಗೂ ಕಲಾವಿದರು ಪರಭಾಷೆಗೆ ತೆರಳಿ ಹೆಸರು ಮಾಡುತ್ತಿದ್ದಾರೆ. ನಟಿ ಶ್ರೀಲೀಲಾ, ರಶ್ಮಿಕಾ ಮಂದಣ್ಣ, ನಿರ್ದೇಶಕ ಪ್ರಶಾಂತ್ ನೀಲ್ ಇದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಈಗ ಕನ್ನಡದ ಮೂವರು ನಿರ್ದೇಶಕರು ಕೆಲವೇ ಸಮಯದ ಅಂತರದಲ್ಲಿ ಬಾಲಿವುಡ್ಗೆ ಹಾರಿದ್ದಾರೆ. ಈ ವಿಚಾರ ಕೇಳಿ ಕೆಲವರಿಗೆ ಖುಷಿ ಆಗಿದೆ, ಇನ್ನೂ ಕೆಲವರಿಗೆ ನಮ್ಮ ಪ್ರತಿಭೆಗಳು ಬಾಲಿವುಡ್ ಪಾಲಾಗುತ್ತಿವೆಯಲ್ಲ ಎಂದು ಬೇಸರ ಆಗಿದೆ.

ಜೆಪಿ ತುಮಿನಾಡ್

ಜೆಪಿ ತುಮಿನಾಡ್ ಅವರು ‘ಸು ಫ್ರಮ್ ಸೋ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಇತ್ತೀಚೆಗೆ ಅವರು ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸಿನಿಮಾ ಒಂದರ ಬಗ್ಗೆ ಮಾತುಕತೆ ನಡೆದಿದೆಯಂತೆ. ಅಜಯ್ ದೇವಗನ್ ಅವರು ಚಿತ್ರದ ಕಥೆಯ ಎಳೆ ಹೇಳಿದ್ದು, ಸಂಪೂರ್ಣ ಸ್ಕ್ರಿಪ್ಟ್ ಜೊತೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ, ಬಾಲಿವುಡ್ನಲ್ಲಿ ಜೆಪಿಗೆ ಮೊದಲ ಆಫರ್ ಸಿಕ್ಕಂತೆ ಆಗಲಿದೆ. ಈ ಚಿತ್ರಕ್ಕೆ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎಂದು ವರದಿ ಆಗಿದೆ.

ಎ. ಹರ್ಷ

ಶಿವರಾಜ್ಕುಮಾರ್ ಫೇವರಿಟ್ ನಿರ್ದೇಶಕರಲ್ಲಿ ಎ.ಹರ್ಷ ಕೂಡ ಒಬ್ಬರು. ಈ ಮೊದಲು ‘ಭಜರಂಗಿ’, ‘ಭಜರಂಗಿ 2’ ರೀತಿಯ ಸಿನಿಮಾಗಳನ್ನು ನೀಡಿದ್ದರು ಎ. ಹರ್ಷ. ಅವರು ಈಗ ಕನ್ನಡ ಬಿಟ್ಟು ಬಾಲಿವುಡ್ಗೆ ಹಾರಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಭಾಗಿ 4’ ಚಿತ್ರವನ್ನು ಇವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಈ ಸಿನಿಮಾ ಹಿಟ್ ಆದರೆ ಬಾಲಿವುಡ್ನಲ್ಲಿ ಹರ್ಷ ಬೇಡಿಕೆ ಹೆಚ್ಚಲಿದೆ.

ಸಚಿನ್ ರವಿ

ಕನ್ನಡದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮಾಡಿದ್ದು ಸಚಿನ್ ರವಿ. ಈ ಮೊದಲು ಅವರು ರಕ್ಷಿತ್ ಅವರ 7 ಆಡ್ಸ್ಗಳಲ್ಲಿ ಇವರೂ ಒಬ್ಬರು. ಅಂದರೆ ರಕ್ಷಿತ್ ಸಿನಿಮಾಗಳ ಏಳು ಬರಹಗಾರರಲ್ಲಿ ಸಚಿನ್ ಕೂಡ ಒಬ್ಬರಾಗಿದ್ದರು. ‘ಅವನೇ ಶ್ರೀಮನ್ನಾರಾಯಣ’ ಬಳಿಕ ಅವರು ಬಾಲಿವುಡ್ಗೆ ಹಾರಿದ್ದಾರೆ. ಶಾಹಿದ್ ಕಪೂರ್ ಜೊತೆ ಸಚಿನ್ ಸಿನಿಮಾ ಮಾಡಬೇಕಿತ್ತು. ಆದರೆ, ಈ ಸಿನಿಮಾ ಸೆಟ್ಟೇರಿಲ್ಲ. ಈಗ ಅವರು ಬಾಲಿವುಡ್ನಲ್ಲಿ ಟೈಗರ್ ಶ್ರಾಫ್ ಜೊತೆ ಸಿನಿಮಾ ಮಾಡಲಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *