ಬೆಂಗಳೂರು: ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಅಥವಾ ಆಟೋ ಬುಕಿಂಗ್ ಸೇವೆಗಳು ದುಬಾರಿಯಾಗುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಬಗ್ಗೆ ಬೆಂಗಳೂರಿಗರು ಅಸಮಾಧಾನ ವ್ಯಕ್ತಪಡಿಸುವ ಪೋಸ್ಟ್ಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನು ಆಟೋ ಬುಕ್ ಮಾಡಲು ಹೋಗಿದ್ದು, ಉಬರ್ನಲ್ಲಿ ಆಟೋ ದರ ಕೇವಲ ಒಂದು ಕಿಲೋಮೀಟರ್ ದೂರಕ್ಕೆ 425 ರೂ ಆಗಿದೆ. ಆಟೋ ದರ ನೋಡಿ ಶಾಕ್ ಆದ ಬೆಂಗಳೂರಿಗ ಕೊನೆಗೆ ನಡೆದುಕೊಂಡೆ ಹೋಗಿದ್ದು, ಈ ಬಗ್ಗೆ ವ್ಯಕ್ತಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಬಳಕೆದಾರರು ಆಟೋಗಳು ಜನರಿಂದ ಹೆಚ್ಚುವರಿ ಹಣ ದೋಚುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
@okstand04 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್ನಲ್ಲಿ ಮಳೆಯ ಸಮಯದಲ್ಲಿ ಕೇವಲ 1 ಕಿಮೀಗೆ ಉಬರ್ ದರಗಳು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಮಳೆ ಬಂದ ಕಾರಣ ವ್ಯಕ್ತಿಯೊಬ್ಬರು ಉಬರ್ನಲ್ಲಿ ಆಟೋ ಬುಕ್ ಮಾಡಲು ಹೋಗಿದ್ದಾರೆ. ಈ ವೇಳೆಯಲ್ಲಿ ಆ್ಯಪ್ನಲ್ಲಿ ಒಂದು ಮೀಟರ್ ಗೆ ಆಟೋ ದರವು 425 ರೂ ತೋರಿಸಿದೆ. ಈ ಬಗ್ಗೆ ಸ್ಕ್ರೀನ್ ಶಾಟ್ ಹಂಚಿಕೊಂಡು ಇದು ನನ್ನ ಸ್ನೇಹಿತನಿಗೆ ಆದ ಕಹಿ ಅನುಭವ ಎಂದಿದ್ದಾರೆ. ಇನ್ನು, ನಿನ್ನೆ ರಾತ್ರಿ ನನ್ನ ಫ್ರೆಂಡ್ ಊರಿಗೆ ಹೋಗೋಕೆ ಆಟೋ ಬುಕ್ ಮಾಡ್ಬೇಕು ಎಂದು ನೋಡಿದ. ಈ ವೇಳೆ ದರ ನೋಡಿ ಶಾಕ್ ಆದ. ಕೂಡಲೇ ಒಂದು ಛತ್ರಿ ತಗೊಂಡು ನಡ್ಕೊಂಡು ಹೋದ ಎಂದು ಹೇಳಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇದನ್ನೆಲ್ಲಾ ನೋಡುವಾಗ ಕಾರು ಖರೀದಿಸಲು ಇದು ಸೂಕ್ತ ಸಮಯ ಎಂದಿದ್ದಾರೆ. ಮತ್ತೊಬ್ಬರು, ಈ ದರ ನೋಡಿದ್ರೆ ಮಳೆಯಲ್ಲಿ ನಡೆಯುವುದೇ ಉತ್ತಮ ಆಯ್ಕೆಯಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಕಂಪನಿಯಲ್ಲಿ ದುಡಿಯೋ ಬದಲು ಆಟೋ ಓಡಿಸುವುದೇ ಬೆಸ್ಟ್ ಎನಿಸುತ್ತಿದೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
For More Updates Join our WhatsApp Group :